ಪುರಾಣ ಮತ್ತು ವಾಸ್ತವ ಡಿ ಡಿ ಕೊಸಾಂಬಿಯವರ ಮಿತ್ ಅಂಡ್ ರಿಯಾಲಿಟಿ ಪುಸ್ತಕದ ಅನುವಾದ. ಮೂಲ ಪುಸ್ತಕದ ಮೂರು ಲೇಖನಗಳನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ. ಆಸಕ್ತರು ಚಿಂತನ ಪುಸ್ತಕದವರು ಪ್ರಕಟಿಸಿರುವ ಪುಸ್ತಕವನ್ನು ನೋಡಬಹುದು. ಡಿ ಡಿ ಕೊಸಾಂಬಿಯವರ ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ಅನುವಾದವೂ ದೊರಕುತ್ತದೆ. ಪುರಾಣ ಮತ್ತು ವಾಸ್ತವಕ್ಕೆ ಪ್ರೊ ರಾಜೇಂದ್ರ ಚೆನ್ನಿಯವರು ಬರೆದಿರುವ ಮುನ್ನುಡಿಯನ್ನು ಇಲ್ಲ ಕೊಡಲಾಗಿದೆ.
 
 
ರಾಗಮಾಲದ ಎರಡನೇ ಪುಸ್ತಕ ಕೇಳು ಜನಮೇಜಯ ಸಂಗೀತದ ಕೇಳ್ಮೆಯನ್ನು ಕುರಿತಂತೆ ಲೇಖನಗಳ ಸಂಗ್ರಹ.  ಇದರಲ್ಲಿ ಕನರ್ಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ಪದ್ದತಿಯನ್ನು ಕುರಿತ ಮಾಹಿತಿ ಇದೆ.  ಈ ಪುಸ್ತಕದ ಪಿಡಿಎಫ್ ಪ್ರತಿ ಇಲ್ಲಿ ನಿಮಗೆ ಲಭ್ಯ. ಪುಸ್ತಕ ಮಾಲಿಕೆಯನ್ನು ಬೆಂಬಲಿಸುವ ದೃಷ್ಟಿಯಿಂದ ಪುಸ್ತಿಕೆಯನ್ನು ಕೊಂಡು ಓದಿ. ಗೆಳೆಯರಿಗೂ ತಿಳಿಸಿ. ಬೆಲೆ 100 ರೂಪಾಯಿಗಳು.
 
 
 
 


ರಾಗಮಾಲ ಸಂಗೀತವನ್ನು, ಸಂಗೀತಗಾರರನ್ನು ಕುರಿತ ಪುಸ್ತಕ ಮಾಲಿಕೆಯನ್ನು ಪ್ರಾರಂಭಿಸಿದೆ. ಅದರಲ್ಲಿ ಮೊದಲ ಪುಸ್ತಕ ಪ್ರಸಿದ್ಧ ಸಿತಾರ್ವಾದಕ ಪಂಡಿತ್ ರವಿಶಂಕರ್ ಅವರನ್ನು ಕುರಿತ ಪುಸ್ತಕ. ಇದರಲ್ಲಿ ಅವರ ಬದುಕು, ಸಂಗೀತ ಇತ್ಯಾದಿಯನ್ನು ಕುರಿತು ವಿವಿಧ ಲೇಖನಗಳನ್ನು ಸಂಗ್ರಹಿಸಲಾಗಿದೆ. ಪಂಡಿತ್ ರಾಜೀವ ತಾರಾನಾಥ ಅವರು ಬರೆದಿರುವ ಒಂದು ಲೇಖನವನ್ನು ಇದರೊಂದಿಗೆ ನೀಡಲಾಗಿದೆ. ಆಸಕ್ತರು ರಾಗಮಾಲ ಪ್ರಕಾಶನದಿಂದ ಪುಸ್ತಕವನ್ನು ಪಡೆದುಕೊಳ್ಳಬಹುದು. ಬೆಲೆ 75 ರೂಪಾಯಿಗಳು.

 
 
ರಾಗಮಾಲ ಸಂಗೀತಗಾರರನ್ನು ಕುರಿತ, ಸಂಗೀತವನ್ನು ಕುರಿತ ಪುಸ್ತಕ ಮಾಲಿಕೆ. ಆದರೆ ಆ ರೀತಿಯ ಪುಸ್ತಕದ ಪ್ರಕಾಶನ ಮಾರಾಟ ಇವೆಲ್ಲಾ ನಮ್ಮ ಅನುಭವಕ್ಕೆ ಹೊಸತಾದ ಕ್ಷೇತ್ರ. ಕಷ್ಟದ ಕ್ಷೇತ್ರವೂ ಹೌದು. ಹಾಗಾಗಿ ನೇರ ಮುದ್ರಣಕ್ಕೆ ಕಾಯದೆ ಅದರ ಜೊತೆಗೆ ನಮ್ಮ 'ಇಂಪು ಬ್ಲಾಗ್' ಮೂಲಕ ಒಂದಿಷ್ಟು ಪುಸ್ತಕಗಳನ್ನು ತರುವುದು ಸುಲಭವಾಗಬಹುದೇನೊ ಅಂದುಕೊಂಡು ಇದನ್ನು ಪ್ರಾರಂಭಿಸುತ್ತಿದ್ದೇವೆ. ಮೊದಲಿಗೆ ಮಲ್ಲಿಕಾರ್ಜುನ ಮನ್ಸೂರರನ್ನು ಕುರಿತ ಈ ಕಿರುಹೊತ್ತಿಗೆ ನಿಮ್ಮ ಮುಂದೆ ಇದೆ.
ವಿದುಷಿ ಸುಕನ್ಯಾ ಪ್ರಭಾಕರ್ ಅವರ 'ಸುರಭಿಸಿಂಚನ'ಕ್ಕಾಗಿ ಕೆಲವು ವರ್ಷಗಳ ಹಿಂದೆ ಮನ್ಸೂರನ್ನು ಕುರಿತು ಒಂದಿಷ್ಟು ಲೇಖನಗಳನ್ನು ಸಂಗ್ರಹಿಸಲಾಗಿತ್ತು. ಅದು ಮುಂದೆ ಸಂವಹನ ಪ್ರಕಾಶನ ಹೊರತಂದ 'ಸಂಗೀತಗಾರರ ಸಂಗೀತಗಾರ' ಪುಸ್ತಕಕ್ಕಾಗಿ ಮತ್ತಷ್ಟು ವಿಸ್ತೃತವಾಯಿತು. ಅದರ ಕೆಲವು ಭಾಗವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ನಿಮ್ಮ ಅನಿಸಿಕೆಯನ್ನು ಗಮನಿಸಿಕೊಂಡು ಸುಧಾರಿಸುತ್ತೇವೆ.
 
 
ಆರ್ ಕೆ ಶ್ರೀಕಂಠನ್ ಅವರನ್ನು ಕುರಿತು ಒಂದಿಷ್ಟು ಬರೆಯಬೇಕೆನಿಸಿತು. ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಬಗ್ಗೆ ಈಗಲೇ ಲಭ್ಯವಿರುವ ಒಂದಿಷ್ಟು ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಸುರಭಿ ಸಿಂಚನ ಆರ್ ಕೆ ಶ್ರೀಕಂಠನ್ ಕುರಿತು ಒಂದು ಸಂಚಿಕೆ ತಂದಿತ್ತು. ಹಾಗೇ ಹಿಂದು ಪತ್ರಿಕೆಯಲ್ಲಿ ಒಂದಿಷ್ಟು ಲೇಖನಗಳು ಬಂದಿವೆ. ಸಧ್ಯಕ್ಕೆ ಅವನ್ನು ಇಲ್ಲಿ ಕೊಡಲಾಗಿದೆ. ಅವರಿಗೆ ನಾವು ಋಣಿ. ಒಂದು ಸಂದರ್ಶನೆದಲ್ಲಿ ಅವರ ಒಂದಿಷ್ಟು ಫೋಟೋಗಳನ್ನು ತೆಗೆದಿದ್ದೆ. ಅದರಲ್ಲಿ ಕೆಲವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಇದು ಅಸಮಗ್ರ. ನಿಮ್ಮಲ್ಲಿ ಏನಾದರೂ ಮೌಲಿಕವಾದದ್ದು ಇದ್ದರೆ ಕೊಡಲು ಸಾಧ್ಯವಾದರೆ ಅದನ್ನು ಇಲ್ಲಿ ಸೇರಿಸಬಹುದು. ನನ್ನ ಇ ಮೇಲ್ಗೆ ಕಳುಹಿಸಿಕೊಡಲಾದರೆ ಕೃತಜ್ಞತೆಗಳು. statsvenugopal@gmail.com
 
 
'ಸಹಸ್ಪಂದನ' ಸಂಗೀತವನ್ನು ಕುರಿತ ವಿದ್ವಾನ್ ಟಿ. ಎಂ. ಕೃಷ್ಣ ಅವರ ಲೇಖನಗಳ ಸಂಗ್ರಹ.  ಹಿಂದು, ಫ್ರಂಟ್ ಲೈನ್, ಶ್ರುತಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳ ಕನ್ನಡ ಅನುವಾದ. ಇದು ಪುಸ್ತಕವಾಗಿ ಕನ್ನಡದಲ್ಲೇ ಪ್ರಥಮ ಬಾರಿಗೆ ಪ್ರಕಟಗೊಳ್ಳುತ್ತಿರುವುದು. ಇದು ರಾಗಮಾಲದ ಮೂರನೆಯ ಪ್ರಕಟಣೆ. ನಿಮ್ಮ ಗಮನಕ್ಕೆ ಇದರ ಮೊದಲ ಭಾಗವನ್ನು ಇದರೊಂದಿಗೆ ಕೊಡುತ್ತಿದ್ದೇವೆ. ಮೂಲ ಪುಸ್ತಕ ಕೊಳ್ಳಬೇಕೆನಿಸಿದರೆ ನಮ್ಮ ಇಮೇಲ್ಗೆ statsvenugopal@gmail.com    ನಿಮ್ಮ ವಿಳಾಸವನ್ನು ಕಳುಹಿಸಿಕೊಟ್ಟರೆ ಪುಸ್ತಕವನ್ನು ಕಳಹಿಸಿಕೊಡುತ್ತೇವೆ. ಇದರ ಬೆಲೆ 100 ರೂಗಳು.
 
 
 
 

Follow us