ಆರ್ಥಿಕ ಅಸ್ವಸ್ಥತೆ ಮತ್ತು ಕೋವಿಡ್ ಮಹಾರೋಗ-ಪ್ರೊ. ಟಿ.ಆರ್. ಚಂದ್ರಶೇಖರ

 In corona-covid-19, ECONOMY

ಪ್ರೊ. ಟಿ.ಆರ್. ಚಂದ್ರಶೇಖರ
ನಮ್ಮ ಆರ್ಥಿಕತೆಯು ಕಳೆದ ಎರಡು ವರ್ಷಗಳಿಂದ ನೆಲಕಚ್ಚಿದೆ. ಯಾವುದೇ ಅಭಿವೃದ್ಧಿ ಸೂಚಿ ತೆಗೆದುಕೊಂಡರೂ ಅಲ್ಲಿ ಆರ್ಥಿಕ ಮಹಾಕುಸಿತ ಕಣ್ಣಿಗೆ ರಾಚುತ್ತದೆ. ಜಿಡಿಪಿ ಕುಸಿತ ಮುಂದುವರಿದಿದೆ. ಜನರ ಮಾಸಿಕ ತಲಾ ಅನುಭೋಗ ವೆಚ್ಚದಲ್ಲಿ ಕುಸಿತ ದಾಖಲಾಗಿದೆ. ಇಂದಿನ ನಿರುದ್ಯೋಗ ಪ್ರಮಾಣ ಕಳೆದ ೪೦ ವರ್ಷಗಳಲ್ಲಿ ಅತ್ಯಧಿಕವೆಂದು ಹೇಳಲಾಗುತ್ತಿದೆ. ಈ ಆರ್ಥಿಕ ಮಹಾಅಸ್ವಸ್ಥತೆಯನ್ನು ಮತ್ತಷ್ಟು ಉಲ್ಭಣಗೊಳಿಸುವ ರೀತಿಯಲ್ಲಿ ಕೋವಿಡ್ ಮಹಾರೋಗ ದೇಶದ ಮೇಲೆ ಬರಸಿಡಲಿನಂತೆ ಅಪ್ಪಳಿಸಿದೆ. ಈ ಮಹಾರೋಗ ೨೦೨೦ರ ಮಾರ್ಚ್ ತಿಂಗಳಲ್ಲಿ ದೇಶವನ್ನು ಅಪ್ಪಳಿಸಿತು. ಆದರೆ ನಮ್ಮ ಆರ್ಥಿಕತೆ ಮತ್ತು ಪ್ರಮುಖವಾಗಿ ಆರ್ಥಿಕ ನಿರ್ವಹಣೆಯು ೨೦೧೮-೧೯ರಲ್ಲಿಯೇ ದಾರಿತಪ್ಪಿತ್ತು. ಆರ್ಥಿಕ ನಿರ್ವಹಣೆಯ ವೈಫಲ್ಯದಿಂದಾಗಿ ೨೦೧೯- ೨೦೨೦ರಲ್ಲಿ ಆರ್ಥಿಕ ಕುಸಿತವು ಮತ್ತಷ್ಟು ಉಲ್ಭಣಕ್ಕೆ ಒಳಗಾಯಿತು. ಆರ್ಥಿಕ ಕುಸಿತವನ್ನು ಸರ್ಕಾರ ಒಪ್ಪಲು ಸಿದ್ದವಿಲ್ಲದಿದ್ದರೂ ೨೦೨೦-೨೦೨೧ರ ಬಜೆಟ್ಟಿನ ಅಂಕಿಸಂಖ್ಯೆಗಳು ಕುಸಿತದ ವಿರಾಟ್ ರೂಪವನ್ನು ಬಹಿರಂಗಪಡಿಸಿದವು. ಆರ್ಥಿಕ ಅಸ್ವಸ್ಥತೆ ಮತ್ತು ಕೋವಿಡ್ ಮಹಾರೋಗಗಳಿಂದ ನಮ್ಮ ಆರ್ಥಿಕತೆಯಲ್ಲಿ ದುಡಿಯುವ ವರ್ಗದ ಬದುಕು ಮೂರಾಬಟ್ಟೆಯಾಗಿದೆ. ಅಮರ್ತ್ಯ ಸೆನ್ ಪ್ರಕಾರ ನಿರುದ್ಯೋಗ ಎನ್ನುವುದು ಕೆಲಸವಿಲ್ಲದ ಸ್ಥಿತಿಯಲ್ಲ. ಏಕೆಂದರೆ ಯಾರೂ, ಅದರಲ್ಲೂ ಬಡವರು ದುಡಿಮೆಯಿಲ್ಲದೆ ಮನೆಯಲ್ಲಿ ಸುಮ್ಮನೆ ಕೂರುವುದು ಸಾಧ್ಯವಿಲ್ಲ. ಎರಡೊತ್ತು ಊಟಕ್ಕಾಗಿ ಕನಿಷ್ಟ ಕೂಲಿಗೆ, ತಮಗೆ ಇಷ್ಟವಿಲ್ಲದಿದ್ದರೂ ’ಯೋಗ್ಯ’ ಎಂದು ಕರೆಯಲು ಸಾಧ್ಯವಿಲ್ಲದ ಉದ್ಯೋಗಗಳನ್ನು ಮಾಡಲು ತೊಡಗುತ್ತಾರೆ. ಕೇಂದ್ರ ಸರ್ಕಾರವಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ಟಿವಿಗಳಲ್ಲಿ ಕೋವಿಡ್ ಬಗ್ಗೆ ಎಚ್ಚರಿಕೆಯ ಭಾಷಣ ಮಾಡುವುದನ್ನು ಬಿಟ್ಟರೆ ದಿನಗೂಲಿ ದುಡಿಮೆಗಾರರು (೫೧.೬೫ ಲಕ್ಷ), ಬಡವರು(ಎಮ್‌ಪಿಐ – ತಲೆ ಏಣಿಕೆ ೧೩೫ ಲಕ್ಷ. ಮೂಲ: ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೧೫)), ೧೯.೬೫ ಲಕ್ಷ ಮಹಿಳೆಯರು ಮುಖ್ಯಸ್ಥರಾಗಿರುವ ಕುಟುಂಬಗಳು, ದಲಿತರು(೨೦.೮೦ ಲಕ್ಷ ದಿನಗೂಲಿಗಳು), ಆದಿವಾಸಿಗಳು(೯.೧೦ ಲಕ್ಷ ದಿನಗೂಲಿಗಳು) ’ಲಾಕ್ ಡೌನ್’ ಸ್ಥಿತಿಯಲ್ಲಿ ಹೇಗೆ ಬದುಕು ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಚಕಾರವೆತ್ತುತ್ತಿಲ್ಲ (ಮೂಲ. ಜನಗಣತಿ ೨೦೧೧). ಕಳೆದ ವರ್ಷ ಕೇಂದ್ರವು ಕೋವಿಡ್‌ನಿಂದಾಗಿ ಬೀದಿಗೂ ಬೀಳಲು ಸಾಧ್ಯವಿಲ್ಲದೆ ಮನೆಗಳಲ್ಲಿಯೇ ಹಸಿವಿನಿಂದ ನರಳುತ್ತಿರುವ ದಿನಗೂಲಿ ದುಡಿಮೆಗಾರರಿಗೆ ಪ್ಯಾಕೇಜ್ ಏಕಿಲ್ಲ? (ಇವರನ್ನು ಬೀದಿಗೆ ಬಿದ್ದಿದ್ದಾರೆ ಎನ್ನುವಂತಿಲ್ಲ. ಏಕೆಂದರೆ ಬೀದಿಗೆ ಬೀಳಲೂ ಅನುಮತಿಯಿಲ್ಲ). ಬೇಡ ಮಗ! ಮನೆಯಲ್ಲಿರು.. ..ಲಕ್ಷ್ಮಣ ರೇಖೆ ದಾಟಬೇಡ ಕೃಪೆ: ಸತೀಶ್ ಆಚಾರ್ಯ ಆರ್ಥಿಕ ಅಸ್ವಸ್ಥತೆ ಮತ್ತು ಕೋವಿಡ್ ಮಹಾರೋಗ ಉದ್ದಿಮೆಗಳು ಸಂಕಷ್ಟದಲ್ಲಿವೆಯೆಂದು ರೂ. ೧.೪೫ ಲಕ್ಷ ಕೋಟಿ ತೆರಿಗೆ ವಿನಾಯಿತಿ ಘೋಷಿಸಿತು. ಪ್ರಸಕ್ತ ಬಜೆಟ್ಟಿನಲ್ಲಿ ಸುಮಾರು ರೂ ೬೫ ಸಾವಿರ ಕೋಟಿ ವಿನಾಯಿತಿಯನ್ನು ಉಳ್ಳವರಿಗೆ ನೀಡಿದೆ. ಆದರೆ ಕೋವಿಡ್ ಮಹಾರೋಗದಿಂದಾಗಿ ಕೋಟ್ಯಾಂತರ ದಿನಗೂಲಿಗಳ ಬದುಕು ಚಿಂತಾಜನಕವಾಗಿರುವಾಗ ಅವರ ಬದುಕನ್ನು ಸಂರಕ್ಷಿಸುವ ಬಗ್ಗೆ ಸರ್ಕಾರಕ್ಕೆ ಚಿಂತೆಯೇ ಇರುವಂತೆ ಕಾಣುವುದಿಲ್ಲ. ಕೋವಿಡ್‌ನಿಂದಾಗಿ ಬೀದಿಗೂ ಬೀಳಲು ಸಾಧ್ಯವಿಲ್ಲದೆ ಮನೆಗಳಲ್ಲಿಯೇ ಹಸಿವಿನಿಂದ ನರಳುತ್ತಿರುವ ದಿನಗೂಲಿ ದುಡಿಮೆಗಾರರಿಗೆ ಪ್ಯಾಕೇಜ್ ಏಕಿಲ್ಲ? (ಇವರನ್ನು ಬೀದಿಗೆ ಬಿದ್ದಿದ್ದಾರೆ ಎನ್ನುವಂತಿಲ್ಲ. ಏಕೆಂದರೆ ಬೀದಿಗೆ ಬೀಳಲೂ ಅನುಮತಿಯಿಲ್ಲ). ಉದ್ದಿಮೆಗಳಿಗೆ ಜರೂರು ಪ್ಯಾಕೇಜ್ ಪ್ರಕಟಿಸುವ ಕೇಂದ್ರ ಕೂಲಿಕಾರರಿಗೆ ಏಕೆ ಪ್ಯಾಕೇಜ್ ಪ್ರಕಟಿಸಲು ಹಿಂದೇಟು ಹಾಕುತ್ತಿದೆ? ಜನತಾ ಕರ್ಪ್ಯೂ ಸರಿ. ಅದರ ವಿಜಯೋತ್ಸವವೂ ಸರಿ. ಆದರೆ ಇದರಿಂದ ದುಡಿಮೆಯೇ ಇಲ್ಲದಿದ್ದಾಗ ಇಷ್ಟೊಂದು ದುಡಿಮೆಗಾರರು ಹೇಗೆ ಬದುಕಬೇಕು? ಈಗಾಗಲೆ ಉದ್ದಿಮೆಗಾರರು ಜಿಡಿಪಿಯ ಶೇ.೨ ರಷ್ಟನ್ನು, ಅಂದರೆ ರೂ. ೨ ಲಕ್ಷ ಕೋಟಿಯ ಪ್ಯಾಕೇಜ್ ಪ್ರಕಟಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಸರಿ. ಒಪ್ಪೋಣ. ಆದರೆ ಕೋಟ್ಯಾಂತರ ಕೂಲಿಕಾರರಿಗೆ ಪ್ಯಾಕೇಜ್ ಬೇಡವೇ? ಇದನ್ನು ಯಾವ ಶಾಸಕರೂ, ಸಂಸದರೂ ಕೇಳುತ್ತಿಲ್ಲ. ಇದನ್ನು ಕಾರ್ಮಿಕ ಂ W ಟ U ಒತ್ತಾಯಿಸಬೇಕು. ಆದರೆ ಅವುಗಳನ್ನು ಕಳೆದ ೬ ವರ್ಷಗಳಲ್ಲಿ ಸರ್ಕಾರವು ಅ v U ಳಿ ಸಿz . ಅವುಗಳನ್ನು ಅಭಿವೃದ್ಧಿಗೆ ’ಕಂಟಕ’ ಎನ್ನುವ ರೀತಿಯಲ್ಲಿ ಬಣ್ಣಿಸುತ್ತಿದೆ. ವಿ z U ಲಿ ಈಗಾಗಲೆ ಸಂರಕ್ಷಣಾ P ಜ U P g U ಪ್ರಕಟಿಸುತ್ತಿವೆ. ಉದಾ: ಬ್ರಿಟನ್ ೩೩೮೪೫ ಕೋಟಿ ಡಾಲರ್, ಕೆನಡ ೨೭೦೦ ಕೋಟಿ ಡಾಲರ್, ಅಮೆರಿಕ ಒಂದು ಲಕ್ಷ ಕೋಟಿ ಡಾಲರ್ ಮತ್ತು ಫ್ರಾನ್ಸ್ ೪೮೩೦ ಕೋಟಿ ಡಾಲರ್ ಪ್ಯಾಕೇಜ್ ಘೋಷಿಸಿವೆ. ಇವೆಲ್ಲವೂ ಉದ್ದಿಮೆಗಳಿಗೆ ಘೋಷಿಸಿರುವ ಭದ್ರತೆ ನೆರವು. ಕೋವಿಡ್ ಮಹಾರೋಗದಿಂದ ಕೂಲಿಕಾರರ ಬದುಕು ಜರ್ಜರಿತವಾಗುತ್ತಿದೆ. ಇದು ರೋಗದ ಪರಿಣಾಮಕ್ಕಿಂತ ಇದು ಆರ್ಥಿಕ ಅಸ್ವಸ್ಥತೆಯ ಸಮಸ್ಯೆ. ಮೂಲಭೂತವಾಗಿ ಕೂಲಿಕಾರರಿಗೆ ಉದ್ಯೋಗವಿಲ್ಲ. ರೇಶನ್ ಕೊಳ್ಳಲು ರೊಕ್ಕವಿಲ್ಲ ಅಥವಾ ರೇಶನ್ ಅಂಗಡಿಗೆ ಹೋಗುವುದು ಹೇಗೆ? ಮನೆಯಲ್ಲಿ ದಿನಸಿ/ರೊಕ್ಕ ಇಲ್ಲ. ಆರ್ಥಿಕತೆಯು ಸ್ತಬ್ದವಾಗಿದೆ. ಕೂಲಿಕಾರರ ಉಸಿರು ಸ್ತಬ್ಧವಾಗುವ ಚಿನ್ಹೆಗಳು ಢಾಳಾಗಿ ಕಂಡುಬರುತ್ತಿವೆ. ಉದ್ದಿಮೆಗಾರರೇ ವೆಲ್ಥ್ ಕ್ರಿಯೆಟರ‍್ಸ್ ಎಂದು ಘೋಷಿಸುತ್ತಿರುವ ಕೇಂದ್ರದ ಆಳ್ವಿಕೆಯಲ್ಲಿ ಇದು ಆಶ್ಚರ್ಯದ ಸಂಗತಿಯೇನಲ್ಲ. ಏಕೆಂದರೆ ೨೦೧೯- ೨೦೨೦ರ ಆರ್ಥಿಕ ಸಮೀಕ್ಷೆಯ ಮೊದಲ ಸಂಪುಟದಲ್ಲಿ ಅಭಿವೃದ್ಧಿಗೆ ’ಪ್ರೋ-ಬ್ಯುಸಿನೆಸ್’ ಪಾಲಿಸಿಗಳು ಬೇಕು ಎಂದು ಸಲಹೆ ನೀಡಲಾಗಿದೆ(ಅಧ್ಯಾಯ: ೩). ಸರ್ಕಾರವು ’ಈಸ್ ಆಫ್ ಡೂಯಿಂಗ್ ಬ್ಯುಸಿನೆನ್’ ಆರಾಧನೆಯಲ್ಲಿ ತೊಡಗಿದೆ. ಸುಮಾರು ೬೦೦ ಪುಟಗಳ ಎರಡು ಸಂಪುಟಗಳಲ್ಲಿರುವ ೨೦೧೯- ೨೦೨೦ರ ಆರ್ಥಿಕ ಸಮೀಕ್ಷೆಯಲ್ಲಿ ಉದ್ಯೋಗದ ಬಗ್ಗೆ ೧೦ನೆಯ ಅಧ್ಯಾಯದ ಸಣ್ಣ ಭಾಗದಲ್ಲಿ(೧೦ ಪುಟಗಳು) ಚರ್ಚೆಯಿದೆ. ಆದರೆ ಇಲ್ಲಿ ಕಾರ್ಮಿಕರ ಬದುಕು- ಬವಣೆ ಬಗ್ಗೆ ಚರ್ಚೆಯಿಲ್ಲ. ಇಲ್ಲಿ ಅಷ್ಟು ಇಷ್ಟು ಸಾಧನೆಯನ್ನು ವೈಭವೀಕರಿಸುವ ಚರ್ಚೆಯಿದೆಯೇ ವಿನಾ ವೆಲ್ಥ್ ಕ್ರಿಯೇಶನ್ನಿನಲ್ಲಿ(ಜಿಡಿಪಿ) ಅವರ ಕಾಣಿಕೆ ಎಷ್ಟು ಮತ್ತು ಅದರಿಂದ ಅವರು ಪಡೆಯುತ್ತಿರುವ ಪ್ರತಿಫಲ ಎಷ್ಟು ಎಂಬುದನ್ನು ಇಲ್ಲಿ ಚರ್ಚೆಗೆ ಎತ್ತಿಕೊಂಡಿಲ್ಲ. ಕೋವಿಡ್‌ನಿಂದಾಗಿ ಸಾವು- ನೋವುಗಳುಂಟಾತ್ತಿವೆ. ಮುಂದಿನ ತಿಂಗಳುಗಳಲ್ಲಿ ಇದರಿಂದ ಸಾವು-ನೋವುಗಳು ತೀವ್ರಗೊಳ್ಳಬಹುದು. ಆದರೆ ಇದರಿಂದ ಮಾರಣಾಂತಿಕ ಪೆಟ್ಟು ಮಾತ್ರ ಕೂಲಿಕಾರರ ಬದುಕಿನ ಮೇಲಾಗುತ್ತದೆ. ಕೋವಿಡ್ ನಿಂದಾಗಿ ಉಂಟಾಗಿರುವ ಇವರ ಅತಂತ್ರದ ಬದುಕನ್ನು ಭದ್ರಗೊಳಿಸಲು ಈಗ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕೋವಿಡೋತ್ತರ ಭಾರತದ ಆರ್ಥಿಕತೆಯು ಮತ್ತಷ್ಟು ನೆಲ ಕಚ್ಚುವ ಸಾಧ್ಯತೆಯಿದೆ. ಆಗಲೂ ತೀವ್ರ ದುಸ್ಥಿತಿಗೆ ಒಳಗಾಗುವವರು ಬಡಕೂಲಿಕಾರರೇ ಆಗಿರುತ್ತಾರೆ. ಅತ್ಯಂತ ವಿಷಾದದ ಸಂಗತಿಯೆಂದರೆ ಅದು ಆರ್ಥಿಕ ಕುಸಿತವೇ ಇರಲಿ ಅಥವಾ ಮಹಾರೋಗದ ಪಿಡುಗೇ ಇರಲಿ ಮಾರಣಾಂತಿಕ ಪರಿಣಾಮಕ್ಕೆ ಒಳಗಾಗುವವರು ಮಾತ್ರ ಕೂಲಿಕಾರರು, ರೈತಾಪಿ ಜನರು ಮತ್ತು ಮಹಿಳೆಯರು. ಆರ್ಥಿಕ ಕುಸಿತ ಮತ್ತು ಕೋವಿಡ್ ಮಹಾದುರಂತಗಳ ಮಾರಣಾಂತಿಕ ಪರಿಣಾಮಗಳಿಂದ ಕೂಲಿಕಾರರ ಬದುಕನ್ನು ಸಂರಕ್ಷಿಸುವ ಬಗ್ಗೆ ಕರ್ನಾಟಕ ಸರ್ಕಾರವು ಜರೂರಾಗಿ ಪ್ಯಾಕೇಜ್ ಪ್ರಕಟಿಸಬೇಕು. ನಗರ ಪ್ರದೇಶಗಳಿಗೆ ಅಪಾರ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಿಂದ ಕೂಲಿಕಾರರು ಬದುಕನ್ನು ಅರಸಿಕೊಂಡು ವಲಸೆ ಬರುತ್ತಿದ್ದಾರೆ. ಇವರ ಬದುಕನ್ನು ಭದ್ರಗೊಳಿಸುವುದಕ್ಕೆ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿರುವಂತೆ(ಮನರೇಗ) ಇಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು. ಕನಿಷ್ಟ ರೂ.೫೦೦ ದಿನಗೂಲಿಯಲ್ಲಿ ವಾರ್ಷಿಕ ೧೦೦ ದಿನಗಳ ಕೂಲಿ ಕೆಲಸವನ್ನು ಇವರಿಗೆ ನೀಡುವಂತಾಗಬೇಕು. ಕೇವಲ ಸ್ಮಾರ್ಟ್ ಸಿಟಿ ಯೋಜನೆಯಿಂದ ಕೂಲಿಕಾರರ ಬದುಕು ಉತ್ತಮವಾಗುವುದಿಲ್ಲ. ಕೂಲಿಕಾರರದ್ದು ಸ್ಮಾರ್ಟ್ ಎಕನಾಮಿಕ್ಸ್. ವೆಲ್ಥ್ ಕ್ರಿಯೇಶನ್ನಿನಲ್ಲಿ ಇವರ ಕಾಣಿಕೆ ನಿರ್ಣಾಯಕ. ಡಿಜಿmಲೈಜೇಶನ್ನೇ ಅಥವಾ ಪ್ರೋ-ಬ್ಯುಸಿನೆಸ್ ನೀತಿಗಳೇ ಅಥವಾ ಸ್ಮಾರ್ಟ್ ಸಿಟಿ ಯೋಜನೆಯೇ ಅಭಿವೃದ್ಧಿಯಲ್ಲ. ಆರ್ಥಿಕ ಸಮೃದ್ಧಿಗಿಂತ ಮುಖ್ಯವಾಗಿ ಜನರ ಬದುಕನ್ನು ಸಮೃದ್ಧಗೊಳಿಸುವ ಪ್ರಕ್ರಿಯೆಯೇ ಅಭಿವೃದ್ಧಿ. ಇಂದು ಆರ್ಥಿಕ ಅಸ್ವಸ್ಥತೆಯಿಂದಾಗಿ ಇದು ಸಮೃದ್ಧವಾಗಿಲ್ಲ. ಕೋವಿಡ್‌ನಿಂದಾಗಿ ಜನರ ಬದುಕೂ ಸಮೃದ್ಧವಾಗಿಲ್ಲ. ಕಳೆದ ಎರಡು ವರ್ಷಗಳಿಂದ ಆರ್ಥಿಕತೆಯನ್ನು ನಿರ್ವಹಿಸುವುದರಲ್ಲಿ ಪೂರ್ಣವಾಗಿ ವಿಫಲವಾಗಿರುವ ಕೇಂದ್ರ ಸರ್ಕಾರವು ಎರಡು ಮಹಾದುರಂತಗಳಿಂದ ನಮ್ಮ ಸಮಾಜವನ್ನು ಹೇಗೆ ರಕ್ಷಿಸುತ್ತದೆ ಎಂಬುದು ಒಗಟಾಗಿ ಪರಿಣಮಿಸಿದೆ. ಇಂತಹ ದ್ವಿಮಾನ ದುರಂತಗಳ ಸಂದರ್ಭದಲ್ಲಿ ಖಾಸಗಿ ವಲಯವನ್ನು, ಮಾರುಕಟ್ಟೆ ವ್ಯವಸ್ಥೆಯನ್ನು ನಂಬಿದರೆ ಸಮಸ್ಯೆಯು ಬಗೆಹರಿಯುವುದಿಲ್ಲ. ಆದರೆ ಕೇಂದ್ರವು ’ಅಗೋಚರ ಶಕ್ತಿ’ಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಆರ್ಥಿಕ ಸಮೀಕ್ಷೆಯು ’ಖಾಸಗೀಕರಣದಿಂದ ಮಾತ್ರ ವೆಲ್ಥ್ ಕ್ರಿಯೇಶನ್ ಸಾಧ್ಯ’ ಎಂಬ ವಾದವನ್ನು ಪ್ರಬಲವಾಗಿ ಮಂಡಿಸಿದೆ. ಆರ್ಥಿಕ ಸಮೀಕ್ಷೆಯಲ್ಲಿನ ಸಲಹೆಗಳನ್ನು ಕೇಂದ್ರವು ಪಾಲಿಸಲೇ ಬೇಕು ಎಂದೇನಿಲ್ಲ. ಈ ಸಮೀಕ್ಷೆಯನ್ನು ಪಕ್ಕಕ್ಕಿಟ್ಟು ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆ ಮಾಡಿ ಆರ್ಥಿಕ ನಿರ್ವಹಣೆಯಲ್ಲಿ ಭಾಗವಹಿಸಬೇಕು. ಮಹಾಬಿಕ್ಕಟ್ಟಿನ ಸಂದರ್ಭದಲ್ಲಿ ಅಗೋಚರ ಹಸ್ತವು ಯಶಸ್ವಿಯಾಗುವುದು ಅನಿಶ್ಚಿತ. ಮಾರುಕಟ್ಟೆಗೆ ಸಂಬಂಧಿಸಿದ ಸತ್ಯವೇನೆಂದರೆ ಅದು ಸದಾ ಉಳ್ಳವರ, ಉದ್ದಿಮೆಗಾರರು-ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಗಾರರ ಪರವಾಗಿ ಕೆಲಸ ಮಾಡುತ್ತದೆ. ಸಬಲರ ಪರವಾಗಿರುತ್ತದೆ ವಿನಾ ದುರ್ಬಲದ ಪರವಾಗಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅದು ದಲಿತ-ಆದಿವಾಸಿ ವಿರೋಧಿ ಕಾರ್ಯನೀತಿಯಾಗಿದೆ. ನಮಗೆ ಇಂದು ಅಗತ್ಯವಾಗಿರುವುದು ’ಬಂಡವಾಳ- ಲಾಭ ಪ್ರಣೀತ ಆರ್ಥಿಕ ವ್ಯವಸ್ಥೆ’ಯಲ್ಲ. ಇಂದಿನ ನಮ್ಮ ಸಮಸ್ಯೆಗೆ ಉತ್ತರ ’ಕಾರ್ಮಿಕ-ಕೂಲಿ ಪ್ರಣೀತ ಆರ್ಥಿಕ ವ್ಯವಸ್ಥೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.