ಕಲಾವಿದ ಕಮಲೇಶ್

 In SUTTA MUTTA

kamaleshಕಲಾವಿದ ಕಮಲೇಶ್ ಜನಿಸಿದ್ದು ಮೈಸೂರಿನಲ್ಲಿ. ಜಲವರ್ಣ, ತೈಲವರ್ಣ ಎಲ್ಲದರಲ್ಲೂ ಪರಿಣತಿ ಇರುವ ಕಲಾವಿದ. ಆದರೆ ಅವರು ತಮ್ಮ ಚಾರಿತ್ರಿಕ ಕಟ್ಟಡಗಳ ಸ್ಕೆಚ್ಚಿಗೆ ಹೆಸರುವಾಸಿ.
ಅವರ ಈ ಸ್ಕೆಚ್ಚುಗಳು ಪ್ರಮಾಣದಲ್ಲೂ ಕರಾರುವಕ್ಕಾಗಿ ಇರುತ್ತದೆ. ಜೊತೆಗೆ ಅಷ್ಟೇ ಕಲಾತ್ಮಕವಾಗಿರುತ್ತದೆ. ಆದರೆ ಇವರು ಇವುಗಳನ್ನು ಬರೆಯುವಾಗ ಅಳತೆಗಾಗಿ ಯಾವುದೇ ಹತಾರಗಳನ್ನು ಬಳಸುವುದಿಲ್ಲ. ಅಷ್ಟೇ ಅಲ್ಲ ಅವರು ಬರೆದ ರೇಖೆಗಳನ್ನು ಮತ್ತೆ ಅಳಸುವುದೂ ಇಲ್ಲವಂತೆ. ಒಮ್ಮೆ ಒಂದು ಕಟ್ಟಡದ ಮುಂದೆ ಕೂತರೆ ಆ ಚಿತ್ರ ಮುಗಿದ ಮೇಲೆಯೇ ಏಳುವುದು. ಕಟ್ಟಡದ ಸೌಂದರ್ಯ ಇವರ ಚಿತ್ರಗಳಲ್ಲಿ ಮೂಡುವುದೇ ಒಂದು ಸೊಗಸು. ಇವರ ಏಕ ವ್ಯಕ್ತಿ ಪ್ರದರ್ಶನಗಳು ದೇಶದ ಎಲ್ಲ ಕಡೆ ನಡೆದಿವೆ. ಆದರೆ ಪಾಪ ಕಲಾವಿದರ ದುರಾದೃಷ್ಟವೆಂದರೆ ಅವರಿಗೆ ಸಿಗಬೇಕಾದ ಪ್ರಚಾರ, ಗೌರವ, ಮಾನ್ಯತೆ ಸಿಗುವುದು ಅಪರೂಪ. ಸಾಹಿತಿಗಳಷ್ಟು ಅದೃಷ್ಟವಂತರಲ್ಲ.

 

 

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.