ಪೊಟೆಟೊ ಈಟರ್ಸ್

 In SUTTA MUTTA

ವ್ಯಾನ್ ಗೋನ ಪೊಟೆಟೊ ಈಟರ್ಸ್ ಚಿತ್ರ 1885ರಲ್ಲಿ ಮುಗಿಯಿತು. ಅದು ವ್ಯಾನಗೋನ ಮೊದಲ ಮಹಾನ್ ಕೃತಿ ಎಂದೇ ಖ್ಯಾತಿ ಆಗಿದೆ. ಐದು ಜನ ರೈತರು ಒಂದು ಟೇಬಲ್ಲಿನ ಸುತ್ತಾ ಕೂತು ಆಲೂಗೆಡ್ಡೆ ತಿನ್ನುತ್ತಾ ಕೂತಿದ್ದಾರೆ. ವಾತಾವರಣ ಎಷ್ಟೊಂದು ತೀವೃವಾಗಿದೆ ಅಂದರೆ ನೀವು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅವರು ಆಡಿಕೊಳ್ಳುತ್ತಿರುವ ಮಾತುಗಳು ನಿಮಗೆ ಕೇಳಿಸಬಹುದೇನೊ.

 Vincent_Van_Gogh_-_The_Potato_Eaters
ಸುತ್ತಾ ಕತ್ತಲು. ಚಿತ್ರ ನೋಡಿದರೆ ಎಲ್ಲಾ ಒಂದೇ ಮನೆಯವರು ಅನ್ನಿಸುತ್ತದೆ. ಒರಟು ಬಣ್ಣದ ರೀತಿ ಆ ರೈತರ ಕಷ್ಟದ ಬದುಕನ್ನು ಸೊಗಸಾಗಿ ತೋರಿಸುತ್ತದೆ. ಅವರು ದಿನ ಆಲೂ ಬೆಳೆಯುವ ಕೈಯಿಂದಲೇ ಈಗ ಆಲೂಗೆಡ್ಡೆಯನ್ನು ತಿನ್ನುತ್ತಿದ್ದಾರೆ. ಮುಖದ ಭಾವನೆಗಳು ಸ್ಪಷ್ಟವಾಗಿಯೇ ಕಾಣುತ್ತವೆ. ಈ ಭಾವನೆ, ಸುತ್ತಲ ಕತ್ತಲು ನಿಮ್ಮನ್ನು ಮತ್ತಷ್ಟು ಸೂಕ್ಷ್ಮವಾಗಿ ಚಿತ್ರವನ್ನು ನೋಡಲು ಒತ್ತಾಯಿಸುತ್ತದೆ. ಹಿಂದೆ ನೇತು ಹಾಕಿರುವ ಫೋಟೊ, ಬಾಗಿಲು, ಆಲೂತಟ್ಟೆ ಇತ್ಯಾದಿಗಳನ್ನು ನೋಡುತ್ತಾ ಹೋದಷ್ಟು ನಿಮಗೆ ವ್ಯಾನಗೋ  ಆತ್ಮೀಯನಾಗುತ್ತಾ ಹೋಗುತ್ತಾನೆ.
ವ್ಯಾನ್ ಗೋ ಈ ಚಿತ್ರವನ್ನು ರಚಿಸಲು ತುಂಬಾ ಮೊದಲೇ ಯೋಚಿಸಿದ್ದ. 1883ರಲ್ಲೇ ಇದರ ಹಲವು ಪ್ರತಿಗಳನ್ನು ತಯಾರಿಸಬೇಕೆಂದು ಅಂದುಕೊಂಡಿದ್ದ. ಇದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಹಲವು ಸ್ಕೆಚ್ಚುಗಳನ್ನು ಮುಗಿಸಿ, ಚಿತ್ರದ ಒಂದು ಮಾದರಿಯನ್ನು ತಯಾರಿಸಿ ಅದರ ಲಿಥೋಗ್ರಾಫ್ ಪ್ರತಿಯನ್ನು ಇಬ್ಬರು ಕಲಾವ್ಯಾಪಾರಿಗಳಿಗೆ ಮತ್ತು ತನ್ನ ಒಬ್ಬ ಗೆಳೆಯನಿಗೆ ಕಳಹಿಸಿದ್ದ. ಆಗಿನ್ನು ಇವನ ಚಿತ್ರ ರಚನೆ ಪ್ರಾರಂಭವಾಗಿರಲೇ ಇಲ್ಲ. ಆದರೆ ಅವನಿಗೆ ಆ ಬಗ್ಗೆ ಒಂದು ಭರವಸೆ ಬಂದಿತ್ತು. ಆದರೆ ಅದು ಅವನು ಅಂದುಕೊಂಡಂತೆ ಆಗಲೇ ಇಲ್ಲ. ಅವನ ಬದುಕಿರವರಗೆ ಅದು ಪ್ರಸಿದ್ಧಿಗೆ ಬರಲೇ ಇಲ್ಲ.

ಪೋಟೆಟೊ ಈಟರ್ಸ್  ಸ್ಕೆಚ್ಚು

ಪೋಟೆಟೊ ಈಟರ್ಸ್ ಸ್ಕೆಚ್ಚು

ಈಗ ಅದು ಮೊಟ್ಟಮೊದಲ ಮಾಸ್ಟರ್ ಪೀಸ್ ಅಂತ ಜನ ಹೇಳುತ್ತಾರೆ. ನತದೃಷ್ಟ ಮಹಾನ್ ಕಲಾವಿದನ ಕಾಲದಲ್ಲಿ ಅವನು ಬಯಸಿದ ಸಲೂನಿನಲ್ಲೂ ಪ್ರದರ್ಶನವಾಗಲಿಲ್ಲ.
 

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.