ಪೌರಾತ್ಯ ತಿದ್ದುಪಡಿ ಮಸೂದೆಯ ಸುತ್ತಮುತ್ತ-ಡಿ.ಎಸ್. ನಾಗಭೂಷಣ

 In SUTTA MUTTA

ಸಂಸತ್ತು ಈಗ ಅಂಗೀಕರಿಸಿ ರಾಷ್ಟ್ರೊತಿಗಳ ಅಂಕಿತದೊಂದಿಗೆ ಕಾಯಿದೆಯಾಗಲು ಕಾಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವರು ಅದು ಒಂದು ನಿರ್ದಷ್ಟ ಮತದವರ ವಿರುದ್ಧ ತಾರತಮ್ಯ ನೀತಿಯನ್ನು ಒಳಗೊಂಡಿದೆ ಎಂಬ ಕಾರಣವನ್ನು ನೀಡುತ್ತಿದ್ದಾರೆ. ಇದು ನಿಜವಾದರೂ, ಅದಕ್ಕಿಂತ ಮುಖ್ಯವಾಗಿ ಈ ಮಸೂದೆ ಹಿಂದೂಗಳಾದ ನಮ್ಮ ಮತದ ತಿರುಳನ್ನೇ ಬಗೆದು ಅದರ ಧಾರ್ಮಿಕತೆಯ ಆಯಾಮವನ್ನೇ ನಾಶಮಾಡುತ್ತಿದೆ ಎಂಬುದನ್ನು ಯಾರೂ ಗಮನಿಸಿದಂತಿಲ್ಲ. ಮೊದಲು ವಿವಾದದ ಈ ಆಯಾಮವನ್ನು ನೋಡಿ ನಂತರ ಕಾನೂನಿನ ಪ್ರಶ್ಮೆ ನೋಡುವುದು ಉಚಿತವೆಂದು ನಾನು ಭಾವಿಸುತ್ತೇನೆ.. ಏಕೆಂದರೆ ಕಾನೂನು ಏನಿದ್ದರೂ ಹೊರಬದುಕಿಗೆ. ಧರ್ಮ ಹೊರಬದುಕನ್ನೂ ಪ್ರಭಾವಿಸುವ ಒಳಬದುಕಿಗೆ ಸಂಬಂಧಿಸಿದ್ದು

.
ಯಾವುದೇ ಕಾರಣ ನೀಡಿ ಹಲವು ಮತಗಳ ಜನರಿರುವ ಒಂದು ಸಮೂಹದಿಂದ ಒಂದು ನಿರ್ದಿಷ್ಟ ಮತದವರನ್ನು ಬದುಕುವ ಅವಕಾಶಗಳ ವಿಷಯದಲ್ಲಿ ಹೊರಗಿಡುವುದು ಧಾರ್ಮಿಕವಾಗಿ ಅನೀತಿಯೆನಿಸುತ್ತದೆ. ನೇರವಾಗಿ ಹೇಳುವುದಾದರೆ ಅಧಾರ್ಮಿಕವೆನಿಸುತ್ತದೆ. ಜಗತ್ತಿಗೆ ಧರ್ಮದ ಮೂಲ ಪಾಠ ಹೇಳುವ ನಮ್ಮ ಸನಾತನ ಧರ್ಮಕ್ಕೆ ಇದು ಅಪಚಾರವೇ ಆಗಿದೆ. ಆರೆಸ್ಸೆಸ್ ಅಥವಾ ವಿಶ್ವ ಹಿಂದೂ ಪರಿಷತ್ ಅಥವಾ ಬಿಜೆಪಿ ನಮ್ಮದು ಪ್ರಧಾನವಾಗಿ ಹಿಂದೂಗಳ ದೇಶ ಎಂದು ನಂಬಿದ್ದರೆ ಮತ್ತು ಹಿಂದೂ ಧರ್ಮವೆಂಬುದು ಸನಾತನ ಧರ್ಮವಾಗಿದೆ ಎಂದು ನಂಬಿದ್ದರೆ ಮತ್ತು ಸನಾತನದ ಅರ್ಥ ಅದಕ್ಕೆ ಗೊತ್ತಿದ್ದರೆ ಅವು ಒಟ್ಟಾಗಿ ಈಗ ದೇಶಕ್ಕಾಗಿ ಅಳವಡಿಸಿಕೊಳ್ಳುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಇದಕ್ಕೆ ವಿರುದ್ಧವಾಗಿದೆ ಎಂಬುದು ಅವಕ್ಕೆ ಗೊತ್ತಾಗಬೇಕಿತ್ತು. ಗೊತ್ತಾಗಿಲ್ಲ ಎಂದರೆ ಅದು ನಂಬುವ ಹಿಂದೂ ಧರ್ಮ ಬೇರೆಯೇ ಆಗಿದೆ ಎಂಬುದು ಸ್ಪಷ್ಟ. ಅದು ಇಂದು ಬಂದು ನಾಳೆ ಅಳಿಯುವ ಧರ್ಮವೇಷಧಾರಿಯಾದ ಪುಢಾರಿ ರಾಜಕಾರಣ ಮಾತ್ರ.

ಸನಾತನ ಎಂದರೆ ಆದಿ ಇಲ್ಲದದು. ಅದರ ಇನ್ನೊಂದು ಅರ್ಥ ಅಂತ್ಯವೂ ಇಲ್ಲದ್ದು. ಅಂದರೆ ಅದು ಕಾಲಾನುಕಾಕ್ಕೆ ಕಂಡುಕೊಂಡ ಸತ್ಯಗಳನ್ನು ಹೀರಿಕೊಳ್ಳುತ್ತಾ ಹೋಗುವ ನಿತ್ಯ ನೂತನಶೀಲವಾದದ್ದು. ಹಾಗಾಗಿಯೇ ಅದು ದ್ವೈತಾದ್ವೈತವಲ್ಲದೆ ಅದ್ವೈತದಲ್ಲೇ ಹಲವು ಬಗೆಯ ವಿಭಿನ್ನತೆಗಳನ್ನು ಕಂಡಿತು. ಬೌದ್ಧ ಮತ್ತು ಜೈನದಿಂದ ನಿರೀಶ್ವರವಾದಿ ಅಧ್ಯಾತ್ಮೊಕತೆಯನ್ನು ತನ್ನೊಳಕ್ಕೆ ಪಡೆದುಕೊಂಡಿತು. ಒಣ ನಿರೀಶ್ವವಾದವಾದ ಚಾರ್ವಾಕ ಮತವನ್ನೂ ತನ್ನದೆಂದಿತು. ಇನ್ನು ಕಾಲಾನುಕಾದಲ್ಲಿ ಸಂಪರ್ಕಕ್ಕೆ ಬಂದ ಕ್ರೈಸ್ತ ಮತ್ತು ಇಸ್ಲಾಮಿ ಪಂಥಗಳನ್ನು ಸೋದರ ಧರ್ಮಗಳೆಂದು ಪರಿಗಣಿಸಿ ಅವುಗಳಿಂದಲೂ ಪಡೆಯಬಹುದಾದ್ದನ್ನು ಪಡೆದು ಬಹುಸಂಪನ್ನವಾಯಿತುಳಿದರಿಂದಾಗಿ ಒಟ್ಟಗೇ ಅಥವಾ ಪ್ರತ್ಯೇಕವಾಗಿ ಈ ಹಲವು ಪಂಥಗಳ ಅನುಯಾಯಿಗಳೂ ಆಗಿರಲು ಜನರಿಗೆ ಅದು ಅವಕಾಶ ನೀಡಿತು. ನಮ್ಮ ಜನಮಧ್ಯದ ಅನೇಕ ಆಚರಣೆಗಳು, ನಂಬಿಕೆಗಳು ಮತ್ತು ಸಮುದಾಯಗಳು ಇದಕ್ಕೆ ಉದಾಹರಣೆಗಳಾಗಿವೆ. ಹಾಗಾಗಿಯೇ ಶಂಕರ ಮಧ್ಯ ರಾಮಾನುಜರನ್ನು ಮಾತ್ರವಲ್ಲ, ಇವರ ಮೊದಲೂಮ ನಂತರವೂ ವಿಶ್ವ ರಹಸ್ಯದ ತತ್ವಗಳನ್ನು ಕಾಲಾನುಕಾಲಕ್ಕೆ ನಿತ್ಯ ಜೀವನದ ಒರೆಗಲ್ಲಿಗೆ ಹಚ್ಚುತ್ತಾ ಸತ್ಯದ ಹೊಸ ವ್ಯಾಖ್ಯಾನಗಳನ್ನು ನೀಡಿದ ಬುದ್ಧ ಮಹಾವೀರ, ಕಬೀರ ಚೈತನ್ಯ ತುಕಾರಾಮ ಸೂರದಾಸ ಬಸವ ಅಲ್ಲ ಕನಕ ಪುರಂದರ ಪರಮಹಂಸ ವಿವೇಕಾನಂದ ಶಿಶುನಾಳ ಶರೀಫ ನಾರಾಯಣಗುರುಗಳನ್ನೂ ಆರಾಧಿಸುತ್ತದೆ. ಸತ್ಯದ ಬಹುರೂಪಗಳನ್ನು ನಂಬುವ ಇಂತಹ ಹಲವು ಸಮುದಾಯಗಳ ಒಕ್ಕೂಟ ನಮ್ಮದೇಶವಾಗಿತ್ತು. ಆನಕ್ಕೆ ಬದುಕಲು ಆಧಾರಗಳು ಬೇಕು. ಕೆಲವರಿಗೆ ಒಂದೇ ಸಾಕು. ಇನ್ನು ಕೆಲವರಿಗೆ ಹಲವು ಬೇಕು. ಮುಖ್ಯವಾಗಿ ಜನ ಬದುಕಬೇಕೆಂದು ನಂಬುವವರಿಗೆ ನಿರ್ದಿಷ್ಟ ಮಾದರಿಯ ಅನಿವಾರ್ಯತೆ ಕಾಣುವುದಿಲ್ಲ. ಆದರೆ ಅವರಿಗೆ ಒಂದು ಸಾಮಾಜಿಕ ನೀತಿ ಮುಖ್ಯವಾಗಿರುತ್ತದೆ. ಒದು ಒಕ್ಕೂಟ ಧರ್ಮದ ಸಹಜೀವನ ತತ್ವ.

ಆದರೆ ರಾಷ್ಟ್ರವೆಂಬ ಕಲ್ಪನೆ ಪಶ್ಚಿಮದಿಂದ ಬಂದು ಜನರನ್ನು ಹಲವು ನೆಲೆಗಳಲ್ಲಿ ಕೆರಳಿಸುತ್ತಾ ಈ ಒಕ್ಕೂಟ ಧರ್ಮವನ್ನು ಬುಡಮೇಲುಗೊಳಿಸಿತು. ಜೊತೆಗೆ ನಾವು ರಾಷ್ಟ್ರಪಿತನ ಕೊಲೆ ಮತ್ತು ದೇಶವಿಭಜನೆಯ ತಾತ್ವಿಕ ಗೊಂದಲ ಮತ್ತು ಅನಿಶ್ಚಿತತೆಗಳ ಮಧ್ಯದಲ್ಲಿ ಸಂವಿಧಾನ ರೂಪದಲ್ಲಿ ಆರಿಸಿಕೊಂಡ; ಒಕ್ಕೂಟ ತತ್ವಕಿಂತ ಹೆಚ್ಚಾಗಿ ಏಕೀಕೃತ ರಾಷ್ಟ್ರದ ಕಲ್ಪನೆ, ಇದನ್ನು ಸಂಸ್ಥೀಕರಿಸಿಬಿಟ್ಟಿತು. ಇದೊಂದು ಕೇಂದ್ರಾನುಗಾಮಿ ಸಂವಿಧಾನ ಎಂಬುದು ಇಲ್ಲಿ ಗಮನಾರ್ಹ, ಇಂತಹ ಸಂವಿದಾದ ನಿರೂಪಣೆಗೆ ಸ್ಫೂರ್ತಿಯಾದ ನಮ್ಮ ದೇಶ ವಿಭಜನೆಗೂ ಕಾರಣವಾಗಿತ್ತು ಎಂದು ಹೇಳಬಹುದು. ಆ ಮೌಲ್ಯಗಳು ನೆಲಮಟ್ಟದ ಸಾಮಾನ್ಯ ಜನರನ್ನು ಆಧುನೀಕರಣದ ಆಂದೋಲನದ ನಾಯಕತ್ವದಿಂದ ದೂರವಿಟ್ಟು ಅನುಯಾಯಗಳಾಗಲು ಮಾತ್ರ ಅರ್ಹರೆಂದು ಪರಿಗಣಿಸುವ ವಸಾಹತುಶಾಹಿ ಆಧುನಿಕತೆಯ ಮೌಲ್ಯಗಳಾಗಿದ್ದವು. ಹಾಗಾಗಿಯೇ ಈ ಆಧುನಿಕತೆಯ ಈ ಗುಣವನ್ನು ಗುರುತಿಸಿದ್ದ ಗಾಂಧಿ ಎಲ್ಲ ಮೂರ್ತ-ಅಮೂರ್ತ ಹಿಂಸಾ ರಚನೆಗಳನ್ನು ನಿರಾಕರಿಸುವ ಅಹಿಂಸೆಯನ್ನು ಆಧರಿಸಿದ ತನ್ನದೇ ಒಂದು ವಿಶಿಷ್ಟ ಆಧುನಿಕತೆಯನ್ನು (ಆಧುನಿಕತೆ ಎಂದರೆ ಸ್ಥೂಲವಾಗಿ, ಕಾಲಾನುಕೂಲಿತ ನಿರಂತರ ಬದಲವಣೆಯ ಗುಣ) ಕಂಡುಕೊಂಡು ಅದನ್ನು ಪ್ರತಿಪಾದಿಸಿ ಜನರ ಮನ ಗೆಲ್ಲತೊಡಗಿದಾಗ ಅವರನ್ನು ಯಾರು ವಿರೋಧಿಸಿ ಕೊನೆಗೆ ಅವರ ಹತ್ಯೆಗೆ ಕಾರಣರಾದರೋ ಆ ಬ್ರಿಟಿಷ್ ಸಾಮ್ರಾಜ್ಯಶಾಹಿ, ಮಹಮ್ಮದಾಲಿ ಜಿನ್ನಾ ಮತ್ತು ವಿ.ಡಿ. ಸಾವರ್ಕರ್ ಅವರ ರಾಜಕಾರಣವೇ ಈ ವಿಭಜನೆಗೂ ಕಾರಣವಾಗಿದ್ದು ಆಶ್ಚರ್ಯದ ಸಂಗತಿ ಏನಲ್ಲ. ನೆಹರೂ, ಪಟೇಲ್, ರಾಜಾಜಿ ಮುಂತಾದ ಕಲಬೆರಕೆ ಆಧುನಿಕರು ಇದಕ್ಕೆ ನಿಮಿತ್ತ ಮಾತ್ರವಾದರಷ್ಟೆ. ವಿಭಜಿತ ದೇಶಕ್ಕೆ ಕೇಂದ್ರಾನುಗಾಮಿ ಸಂವಿಧಾನವನ್ನು ರೂಪಿಸಿಕೊಡುವಲ್ಲಿ ಮುಂಚೂಣಿ ಪಾತ್ರ ವಹಿಸಿದ ಡಾ. ಅಂಬೇಡ್ಕರ್ ಅವರು ಗಾಂಧೀಜಿಯನ್ನು ವಿರೋಧಿಸುತ್ತಾ ಬಂದವರೇ ಎಂಬುದೂ ಇಲ್ಲಿ ಗಮನಾರ್ಹ.

ಗಾಂಧಿ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದು ಅವರ ಮೌಲ್ಯಗಳನ್ನು ಅಪ್ರಸ್ತುತಗೊಳಿಸುತ್ತಾ ಬಂದ ಆ ಕಲಬೆರಕೆ ಆಧುನಿಕತೆಯ ವಾರಸುದಾರರಾದ ಕಾಂಗ್ರೆಸ್ಸಿಗರ, ಅದೇ ಕಾರಣದಂದಾಗಿ ಎಸಗುತ್ತಾ ಬಂದ ವೈವಿಧ್ಯಮಯ ಅಪರಾಧಗಳಿಂದಾಗಿದಾಗಿ ಇಂದು ಮತ್ತೆ ಸಾವರ್ಕರ್-ಜಿನ್ನಾ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಬಿಜೆಪಿ ಮಾಡಹೊರಟರುವ ಸಾವರ್ಕರ್ ರಾಜಕಾರಣವನ್ನು ಸಮರ್ಥಿಸಲು ಜಿನ್ನಾರ ರಾಜಕಾರಣವನ್ನು ಉದಾಹರಿಸುತ್ತಿರುವುದು ಇದೇ ಕಾರಣದಿಂದಲೇ! (ಹಾಗೆ ನೋಡಿದರೆ, ಮತಾತೀತರಾಗಿದ್ದ ಜಿನ್ನಾರನ್ನು ಮತೀಯರನ್ನಾಗಿಸಿದ್ದೇ ಸಾವರ್ಕರ್ ಪ್ರಣೀತ ಹಿಂದೂ ಮತೀಯ ರಾಜಕಾರಣವೇ ಎಂದು ವಾದಿಸಲು ಚರಿತ್ರೆಯಲ್ಲಿ ಹಲವು ಸಾಕ್ಷ್ಯಗಳಿವೆ) ಹಾಗಾಗಿ ಇವು ಒಂದೇ ನಾಣ್ಯದ ಎರಡು ಮುಖಗಳಷ್ಟೆ. ಬಹಳ ವರ್ಷಗಳಿಂದ ಪಾಕಿಸ್ತಾನದಲ್ಲಿ ಚಲಾವಣೆಯಲ್ಲಿದ್ದ ಈ ನಾಣ್ಯವನ್ನು ಈಗ ಬಿಜೆಪಿ ಅದರ ಮೇಲೆ ಭಾರತ ಎಂದು ಬರೆದು ಚಲಾವಣೆಗೆ ತರಲು ಹೊರಟಿದೆ. ಇದರ ಉದ್ದೇಶ ಹಿಂದೂ ಧರ್ಮವನ್ನು ಇಸ್ಲಾಂ ಮತದ ಮಾದರಿಯಲ್ಲಿ ಪುನರ್ರೂಪಿಸಿ ಅದನ್ನು ಇಸ್ಲಾಂನಂತೆಯೇ ಒಂದು ರಾಜಕೀಯ ಅಸ್ರ್ರವನ್ನಾಗಿ ಮಾಡುವುದು. ಸಂವಿಧಾನದ ೩೭೦ ಮತ್ತು ೩೭೧ನೇ ವಿಧಿಗಳ ರದ್ದತಿ ಮತ್ತು ಇಂದಿನ ಪೌರತ್ವ ತಿದ್ದುಪಡಿ ಮಸೂದೆಗಳು ಮತ್ತು ’ಕಾಂಗ್ರೆಸ್ ಮುಕ್ತ ಭಾರತ’ದ ಕಾರ್ಯಕ್ರಮದ ಅಂಗವಾಗಿ ಅರುಣಾಚಲ, ಗೋವಾ ಮತ್ತು ಇತ್ತೀಚೆಗೆ ಕರ್ನಾಟಕದಲ್ಲಿ ನಡೆಸಿದ ರಾಜಕೀಯ ಕಾರ್ಯಚರಣೆಗಳು ಇದಕ್ಕಾಗಿ ಇಟ್ಟ ಹೆಜ್ಜೆಗಳಷ್ಟೇ,

೩೭೦ನೇ ವಿಧಿ ರದ್ದು ಮಾಡಿದಾಗ ಸರ್ಕಾರ ದೇಶದ ಯಾವುದೇ ಪ್ರದೇಶಕ್ಕೆ ಕಾನೂನಾತ್ಮಕ ವಿಶೇಷ ಸವಲತ್ತುಗಳನ್ನು ನೀಡಲಗದು ಎಂಬ ತತ್ವವನ್ನು ದೇಶಕ್ಕೆ ಹೇಳಿತು. ಅದು ಪ್ರತ್ಯೇಕತೆಯನ್ನು ಪ್ರಚೋದಿಸುತ್ತದೆ ಎಂದಿತು. ಆದರೆ ಅದೇ ಸರ್ಕಾರ ಈಗ ಈಶಾನ್ಯ ಪ್ರದೇಶಗಳಲ್ಲಿ ಈ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಜನ ಆಕ್ರೋಶದಿಂದ ಬೀದಿಗಿಳಿದಿರುವಾಗ ಆ ಪ್ರದೇಶಗಳಿಗೆ ೩೭೦ನೇ ವಿಧಿಯಡಿಯ ವಿಶೇಷ ಸವಲತ್ತುಗಳಿಗೇ ಸಮನಾದ ಪ್ರಜೆತನದ ವಿಶೇಷ ಸವಲತ್ತುಗಳನ್ನು ಒದಗಿಸಿರುವುದಾಗಿ ಮತ್ತು ಒದಗಿಸುವುದಾಗಿ ಹೇಳುತ್ತಿದೆ! ಇದೇ ಸರ್ಕಾರ ನಾಗಾಲ್ಯಾಂಡ್‌ನಲ್ಲಿ ಅಲ್ಲಿನ ಬಂಡುಕೋರರೊಂದಿಗೆ ಮಾಡಿಕೊಂಡಿರುವ ಒಪ್ಪಂದ ಈಗ ಪ್ರತ್ಯೇಕವಾದಿ ಎಂದು ತಾಬು ಖಂಡಿಸುತ್ತಿರುವ ಕಾಶ್ಮೀರ ಒಪ್ಪಂದಕ್ಕಿಂತ ದೇಶದ ಏಕತೆಗೆ ಆಘಾತಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ದ್ವಂದ್ವ ನೀತಿಯಲ್ಲಿ ಅಡಗಿರುವುದೂ ಇಸ್ಲಾಂ ವಿರೋಧಿ ಮತೀಯತೆಯತೆಯೇ: ಈಶಾನ್ಯ ರಾಜ್ಯಗಳಿಗೆ ಅನ್ವಯವಾಗುವ ತತ್ವ ಕಾಶ್ಮೀರಕ್ಕೆ ಅನ್ವಯವಾದರೆ ಅದು ಅನೈಕ್ಯತೆಗೆ ಕಾರಣವಾಬಹುದು!

ನಿಜ, ಇಂದು ಜಗತ್ತಿನಲ್ಲಿ ಇಸ್ಲಾಮಿ ಭಯೋತ್ಪಾದನೆ ಎಂಬುದೊಂದಿದೆ. ಅದು ಇಂದಿನ ಜಗತ್ತಿನ ಅಶಾಂತಿಗೆ ಕಾರಣವಾಗಿರುವ ಸಂಗತಿಗಳಲ್ಲಿ ಅದೂ ಒಂದಾಗಿದೆ. ಇದಕ್ಕೆ ಹಲವು ಬಾಹ್ಯ ರಾಜಕೀಯ ಕಾರಣಗಳಿದ್ದರೂ, ಒಂದು ಒಳ ರಾಜಕಾರಣವೂ ಇದೆ. ಅದೆಂದರೆ, ಆ ಧರ್ಮದಲ್ಲಿ ಖಡ್ಗಕ್ಕೆ ಧಾರ್ಮಿಕ ಮಾನ್ಯತೆ ಇದೆ ಎಂಬುದು. ಇದು ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅದರ ಅಂಗವಾಗಿ ಗಾಂಧಿ ಆರಂಭಿಸಿದ ಹಿಂದೂ-ಮುಸ್ಲಿಂ ಐಕ್ಯತೆಯ ಕಾರ್ಯಕ್ರಮದಲ್ಲೂ ಚರ್ಚಿತವಾಯಿತಾದರೂ, ಅದು ಜಿನ್ನಾ-ಸಾವರ್ಕರ್ ಅವರ ಸ್ಪರ್ಧಾತ್ಮಕ ಕೋಮುವಾದಿ ರಾಜಕರಣದಿಂದಾಗಿ ಅಪೂರ್ಣವಾಗಿಯೇ ಉಳಿದು ಕೊನೆಗೆ ಅದು ಇಸ್ಲಾಮಿನ ಖಡ್ಗ ಹಿಂದೂವೊಬ್ಬಕ ಕೈಯಲ್ಲಿ ಪಿಸ್ತೂಲಾಗಿ ರೂಪಾಂರಗೊಂಡು ಗಾಂಧಿಯವರನ್ನೇ ಬಲಿತೆಗೆದುಕೊಂಡ ವಿಪರ್ಯಾಸದಲ್ಲಿ ಕೊನೆಗೊಂಡಿತು. ಇದು ಇಸ್ಲಾಮನ್ನು ಹಿಂಸಾತ್ಮಕ ಎಂದು ಕರೆಯುವ ಶಾಂತಿಪ್ರಿಯರ ನಿರ್ಲಜ್ಜ ಆತ್ಮದ್ರೋಹದ ಮಟ್ಟ.

ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವುದರ, ಹಾಗೆ ಕರೆಯಯುವುದನ್ನು ನೆಪ ಮಾತ್ರಕ್ಕೆ ಮಾತ್ರ ಖಂಡಿಸಿ ಅಂಥವರನ್ನು ರಕ್ಷಿಸಿಕೊಳ್ಳುವುದರ ಅರ್ಥವಾದರೂ ಏನು? ಈ ದೇಶವನ್ನು ಈಗ ಗೋಡ್ಸೆ ಕಲ್ಪನೆಯ ದೇಶವನ್ನಾಗಿ ಮಾಡುವುದೇ ಆಗಿದೆ. ಅದರೆ ಒಂದು ಹಿಂದೂ ಪಾಕಿಸ್ತಾನವನ್ನು ಸೃಷ್ಟಿಸುವುದೇ ಆಗಿದೆ. ಇಸ್ಲಾಮೀ ಭಯೋತ್ಪಾದನೆಯನ್ನು ತಡೆಯುವುದೆಂದರೆ ಸಾರಾ ಸಗಟಾಗಿ ಮುಸಲ್ಮಾನರನ್ನುಸೈತಾನೀಕರಿಸುವುದಲ್ಲ. ಸೈತಾನ ಗೋಡ್ಸೆ ಮತ್ತು ಗೋಡ್ಸೆವಾದಿಗಳು ಎದೆಯೂ ಸೇರಿ ಎಲ್ಲಿಬೇಕಾದರೂ ಇರಬಲ್ಲನೆಂಬ ಅರಿವಿನೊಂದಿಗೆ ಆ ಸೈತಾನನ್ನು ನಿರ್ವಹಿಸುವ ದಕ್ಷತೆಯನ್ನು ಗಳಿಸಿಕೊಳ್ಳಬೇಕು. ಅಪರಾಧ ದಂಡನೆಯ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬಹುದು, ಅದರ ಹಾದಿಯಲ್ಲಿ ಧರ್ಮ ಆಘಾತಗೊಳ್ಳಬಾರದೆಂಬ ಎಚ್ಚರಿಕೆಯೂ ಇರಬೇಕು ಅಂದರೆ ಅಂತಹ ಕಾನೂನುಗಳು ಎದುರಾಳಿಯನ್ನು ಕೆರಳಿಸುವಂತಹ ಅಲ್ಲ, ಮಣಿಸುವಂತಹ- ತಾರಾತಮ್ಯವಿಲ್ಲದ ನ್ಯಾಯಯುತ-ಕಾನೂನಾಗಿರಬೇಕು. ಸದ್ಯದ ಪೌರತ್ವ ತಿದ್ದುಪಡಿ ಮಸೂದೆ ಜಗತ್ತಿನ ನಾಗರಿಕ ಸಮಾಜದಲ್ಲಿ ಇರಲಿ, ಜಗತ್ತಿನ ಮುಸ್ಲಿಂ ಸಮುದಾಯದಲ್ಲಿ, ನಿರ್ದಿಷ್ಟವಾಗಿ ಭಾರತದೊಳಗನ ಮುಸ್ಲಿಂ ಸಮುದಾಯದಲ್ಲಿ ಏನು ಭಾವನೆ ಉಂಟು ಮಾಡಬಹುದು, ಯೋಚಿಸಿ. ವಿಶ್ವ ಮಟ್ಟದಲ್ಲಿ ಇದರ ಸಾಧಕ ಬಾಧಕಗಳೇನು ಎಂದು ಯೋಚಿಸಿ. ಮಾನವ ಸಹಜ ದೌರ್ಬಲ್ಯಗಳಿಂದಾಗುವ ಅನಾಹುತಗಳನ್ನು ಕಾನುನುಗಳ ಮೂಲಕ ತಡೆಯಬಹುದೇ ಹೊರತು ಸಾಕಿಕೊಂಡ ದ್ವೇಷ ಮತ್ತು ಅನುಮಾನಗಳಿಂದ ಉಂಟಾಗುವ ಅನಾಹುತ-ಅಪರಾಧಗಳನ್ನಲ್ಲ.

ಹಾಗಾಗಿ ಈ ಪೌರತ್ವ ತಿದ್ದುಪಡಿ ಮಸೂದೆ ದ್ವೇಷ ಮತ್ತು ಅನುಮಾನಗಳಿಂದ ತಲೆಕೆಟ್ಟ ದುರ್ಬಲ ಮನಸ್ಸಿನ ದೇಶವೊಂದರ, ಮೂಲತಃ ಭಯಭೀತನದಿಂದ ಹುಟ್ಟಿದ ಕ್ರಮವಾಗಿದೆ. ಇದನ್ನೀಗ ನ್ಯಾಯಾಂಗ ಮಾತ್ರ ತಡೆಯಬಲ್ಲುದು. ಏಕೆಂದರೆ ಚುನಾಯಿತ ಸರ್ಕಾರವೊಂದು ರಾಷ್ಟ್ರದ ಸ್ವರೂಪವನ್ನೇ ಬದಲಾಯಿಸುವ ಅಧಿಕಾರ ಪಡೆದಿರುವುದಿರುವುದಿಲ್ಲ, ಅದು ಪಡೆದಿರುವುದು ಇರುವ ರಾಷ್ಟ್ರವನ್ನು ಜನರ ನೆಮ್ಮದಿಗಾಗಿ ನಡೆಸಬೇಕಾದ ಆಡಳಿತದ ಅಧಿಕಾರವನ್ನು ಮಾತ್ರ. ಇರುವ ರಾಷ್ಟ್ರದ ಆಧಾರಗಳನ್ನೇ ಬದಲಿಸುವ ಅಧಿಕಾರವನ್ನಲ್ಲ. ಜೊತೆಗೆ ಅದು (ಬಿಜೆಪಿ ಸರ್ಕಾರ) ಈ ಅಡಳಿತದ ಅಧಿಕಾರವನ್ನು ಪಡೆದಿರುವುದು, ತನ್ನ ಮೂಲ ಸೈದ್ಧಂತಿಕ ನಾಯಕರು ವಿರೋಧಿಸಿದ್ದ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟ ರೂಪಿಸಿಕೊಟ್ಟ ಸಂವಿಧಾನದ ವಿಧಿ-ವಿಧಾನಗಳ ಮೂಲಕ. ಬಿಜೆಪಿ ಇಂದು ಐದು ವರ್ಷಗಳ ಆಡಳಿತಕ್ಕೆ ವಾರಸುದಾರನೇ ಹೊರತು ರಾಷ್ಟ್ರದ ಒಡೆತನಕ್ಕಲ್ಲ. ಈ ಮಸೂದೆಯ ಆಶಯವನ್ನು ತನ್ನ ಘೋಷಣಾ ಪತ್ರದಲ್ಲಿ ಸೇರಿಸಿದ್ದರೂ ಅಷ್ಟೆ, ಬಿಟ್ಟಿದ್ದರೂ ಅಷ್ಟೆ.

ಆದರೆ ಬಿಜೆಪಿ ಸರ್ಕಾರ ಮಸೂದೆ ಸಂವಿಧಾನಾತ್ಮಕವಾಗಿಯೇ ಇದೆ ಎಂದು ವಾದಿಸುತ್ತಿದೆ. ಈ ದಿಸೆಯಲ್ಲಿ ಅದು ಹಲವು ವಾದಗಳನ್ನು ಮಂಡಿಸುತ್ತಾ, ಅದಕ್ಕೆ ಬೇಕಾದ ಚಾರಿತ್ರಿಕ ಆಧಾರಗಳನ್ನೂ, ಕಾನೂನಿನ ವೇಷಭೂಷಣಗಳನ್ನೂಸಿದ್ಧಪಡಸಿಕೊಳ್ಳುತ್ತಿದೆ. ಈ ಹಿನ್ಲೆಯಲ್ಲಿ ಈ ಮಸೂದೆಯನ್ನು ಅಂಬೇಡ್ಕರ್ ಪ್ರಣೀತ ಸಂವಿಧಾನವು ರೂಪಿಸಿರುವ ನಮ್ಮ ನ್ಯಾಯಾಂಗ ವ್ಯವಸ್ಥೆ ಹೇಗೆ ನೋಡಬಹುದು ಎಂಬ ವಿಷಯ ಕುತೂಹಲಕಾರಿಯಾದದ್ದೇ ಸರಿ. ಏಕೆಂದರೆ, ನಮ್ಮ ನ್ಯಾಯಾಂಗ ಯಾವುದೇ ಸಾಂವಿಧಾನಿಕ ಪ್ರಶ್ನೆಯನ್ನು ಸಂವಿಧಾನದ ಎಲ್ಲ ಸಂಬಂಧಿತ ಅನುಚ್ಛೇದಗಳನ್ನು ಜೋಡಿಸಿಕೊಂಡು ವ್ಯಾಖ್ಯಾನ ಮಾಡಿ ತೀರ್ಪಿತ್ತರೂ ಅದು ಅಂತಿಮವಾಗಿ ಅಕ್ಷರಶಃ/ಭಾಷಿಕ ಪರಮಿರಿಗಳಲ್ಲಿನ ಪರೀಶಿಲನೆಯನ್ನು ಆಧರಿಸಿದ ತೀರ್ಪೇ ಆಗಿರುತ್ತದೆ. ಏಕೆಂದರೆ ನಾವು ಒಪ್ಪಿಕೊಂಡಿರುವ ನ್ಯಾಯವಿಧಾನ ವ್ಯವಸ್ಥೆ ಆಧರಿಸಿರುವ ತರ್ಕ ಅಥವಾ ವಿವೇಚನಾ ವಿಧನವೇ-ಅದೆಷ್ಟೇ ಸಂಕೀರ್ಣವಾಗಿದ್ದರೂ-ಹಾಗಿದೆ. ಏಕೆಂದರೆ ವಿವಾದದಲ್ಲಿ ಅಡಗಿರುವ ನೈತಿಕತೆಯ ಪ್ರಶೆಯೂ ಅಕ್ಷರ ರೂಪದ ನಿಯಮ/ಕಾನೂಗಗಳ ಅರ್ಥೈಸುವಿಕೆಯ ಮೂಲಕವೇ ನಿರ್ಣಯಿಸಲ್ಪಟ್ಟಿರುತ್ತದೆ. ಆದರೆ ಈ ಅಕ್ಷರಶಃ/ತಾಂತ್ರಿ ಮತ್ತು ನೈತಿಕ/ಭಾವನೆಯ ನೆಲೆಗಳ ಪರಿಶೀಲನೆಯ ನಡುವೆ ಒಂದು ಕಂದಲಕವಿರುತ್ತದೆ. ಈ ಕಾರಣವನ್ನು ಅರಿತೇ ನಮ್ಮ ನ್ಯಾಂಗದಲ್ಲಿ ಒಂದು ತೀರ್ಪಿನ ಹಲವು ನೆಲೆಗಳ ಪರಿಶೀಲನೆ ಮತ್ತು ಮರುಪರಿಶೀಲನೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಾಂವಿಧಾನಿಕ ನೈತಿಕ (ಅoಟಿsಣiಣuಣioಟಿಚಿಟ moಡಿಚಿಟಣಥಿ)ಂಬೊಂದು ಪರಿಕಲ್ಪನೆಯನ್ನು ನ್ಯಾಯ ಪರಶೀಲನೆಯ ಒಂದು ಮಾನದಂಡಬನ್ನಾಗಿ ರೂಪಿಸಿಕೊಂಡಿದೆ. ಆದರೂ ಇಂದಿನ ಸರ್ಕಾರ ಈ ಕಂದಕವನ್ನು ಮರೆಮಾಚಲೆಂದೇ ಇತಿಹಾಸದ ಬಗ್ಗೆ ಅರ್ಧ ಸತ್ಯಗಳನ್ನು ಹೇಳುತ್ತಿದೆ ಆ ಮೂಲಕ ಇದರಲ್ಲಿ ಮುಸ್ಲಿಮರ ವಿರುದ್ಧ ಆಗಿರುವ ತಾತಮ್ಯದ ಅಂಶವನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ. ಈ ಮಸೂದೆ ರಾಷ್ಟ್ರಪತಿಯವರ ಅಂಕಿತ ಪಡೆದು ಕಾನೂನಾಗಿ ನ್ಯಾಯಾಂಗ ಪರಿಶೀಲನೆಗೆ ಹೋದರೂ, ಜನಾಭಿಪ್ರಾಯ ತನ್ನ ಪರವಾಗಿರುವಂತೆ ನೋಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಜನಾಭಿಪ್ಯಾಯ ಪ್ರಭಾವ ಎಲ್ಲೆಲ್ಲಿ ಪರಿಣಾಮ ಬೀರುತ್ತದೆ ಎಂಬುದು ಅದಕ್ಕೆ ಇತ್ತೀಚಿನ ಅನುವಗಳಿಂದ ಅದಕೆ ಗೊತಿದೆ.

ಪ್ರಜ್ಞಾವಂತ ಜನಸಮುದಾಯದ ಪ್ರಬಲ ವಿರೋಧದ ಎದುರಲ್ಲಿ, ಈ ಮಸೂದೆ ಏಕೆ ಅಗತ್ಯವಾಗಿದೆ ಎಂದು ಸರ್ಕಾರ ನೀಡಿದ ಕಾರಣಗಳು ದಿನದಿಂದ ಬದಲಾದುನ್ನು ನಾವು ಕಂಡಿದ್ದೇವೆ. ಮೊದಲು ಕಾಂಗ್ರೆಸ್ ಧಾರ್ಮಿಕ ಆಧಾರದ ಮೇಲೆ ದೇಶ ವಿಭಜನೆಗೆ ಒಪ್ಪಿಕೊಡದ್ದೇ ಕಾರಣವೆಂದು ಹೇಳಲಾಯಿತು. ಅದೊಂದು ಅರ್ಧ ಸತ್ಯ(ಅಂದರೆ ಸುಳ್ಳು) ಎಂದು ಬಲ್ಲವರು ದಾಖಲೆ ಸಹಿತ ಜನರಿಗೆ ವಿವರಿಸತೊಡಗಿದಾಗ, ಇದು ತಂತಮ್ಮ ದೇಶಗಳ ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ನೆಹರೂ-ಲಿಯಾಖತ್‌ಅಲಿ ಖಾನ್ (ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ) ನಡುವಣ ಒಪ್ಪಂದ ಜಾರಿಯ ವೈಫಲ್ಯವೇ ಇದಕ್ಕೆ ಕಾರಣವೆಂದು ಹೇಳಲಾಯಿತು. ಆದರೆ ಈ ಒಪ್ಪಂದ ನಡೆದದ್ದು ಪಾಕಿಸ್ತಾನ ಒಂದು ಮತಾತೀತ ದೇಶವಾಗಿದ್ದಾಗ ಮತ್ತು ಈ ಮಸೂದೆ ಪಾಕಿಸ್ತಾನಕ್ಕೆ ಮಾತ್ರ ಸಂಬಧಿಸದ್ದಾಗಿಲ್ಲವಲ್ಲ ಎಂದು ಪ್ರಶ್ನಿಸಿದಾಗ ಸರ್ಕಾರ ಅಕ್ರಮ ವಲಸಿಗರ ಪೈಕಿ ಯಾವ ವಲಸಿಗರಿಗೆ ನಿರ್ಬಂಧ ಹೇರಲಾಗಿದೆಯೋ ಆ ದೇಶಗಳು ಮತಾಧಾರಿತ ದೇಶಗಳು ಎಂಬ ಕಾರಣ ನೀಡುತ್ತಿದೆ. ಆದರೆ ತಾನೇ ಲೇವಡಿ ಮಾಡುವ, ಮತೀಯ ಪ್ರಭುತ್ವಗಳ ಉದಾಹರಣೆ ನಮ್ಮ ದೇಶದ ನೀತಿಯನ್ನು, ಆಧಾರ ಮೌಲ್ಯಗಳನ್ನು ಬದಲಾಯಿಸಬೇಕೆ ಎಂಬುದು ಇಲ್ಲಿನ ಪ್ರಶ್ನೆ.
ಈ ಸಂಬಂಧವಾಗಿ ಸರ್ಕಾರ ನೀಡುವ-ಬಹು ಭಾವನಾತ್ಮಕವಾದ- ಕಾರಣವೆಂದರೆ, ಈ ದೇಶಗಳ ಅಲ್ಪಸಂಖ್ಯಾತರ (ಅಂದರೆ ಮುಖ್ಯವಾಗಿ ಹಿಂದೂಗಳ) ಪ್ರಮಾಣ ಶೇ. ೨೨ರಿಂದ ಇಂದು ಶೇ ೩ಕ್ಕೆ ಕುಸಿದಿದೆ ಎನ್ನುವುದು. ಒಂದು ಧರ್ಮದ ಜನಸಂಖ್ಯೆ ಕುಸಿದಿದೆ ಎಂದರೆ ಅವರನ್ನ್ಲೆಲ್ಲ ಕೊಲ್ಲಲಾಗಿದೆ ಎಂದೇ? ನಾಗರಿಕ ಹಕ್ಕುಗಳ ಂತಾರಾಷ್ಟ್ರೀಐ ಸಂಘ-ಸಂಸ್ಥೆಗಳ ನಿಗಾದಡಿ ಇದು ಈ ಪ್ರಮಾಣದಲ್ಲಿ ನಡೆಯಲು ಸಾಧ್ಯವಿಲ್ಲ. ನಡೆದಿದೆ ಎಂದು ಹೇಳುವವರು ಅದಕ್ಕೆ ಸಾಕ್ಷ್ಯ ಒದಗಿಸಬೇಕಾಗುತ್ತದೆ. ಹೆಚ್ಚಿನಂಶ ಅವರು ಮತಾಂತರ ಹೊದಿರಬೇಕು ಅಥವಾ ಭಾರತವೂ ಸೇರಿದಂತೆ ಅನ್ಯದೇಶಗಳಗೆ ವಲಸೆ ಹೋಗಿರಬೇಕು. ಇಸ್ಲಾಮಿನ ಮುಚ್ಚಿಕೊಂಡ(ಅಟoseಜ) ಸ್ವರೂಪ ಗಮನಿಸಿದಾಗ ಸಾಕಷ್ಟು ಬಲಾತ್ಜಾರದ ಮತಾಂತರ ನಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗಿದ್ದರೂ, ಆದುನಿಕ ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಎಲ್ಲಕ್ಕೂ ಸಂಶೈಆತೀತ ಸಾಕ್ಷ್ಯ ಒದಗಿಸಬೇಕಾಗುತ್ತದೆ. ಆದರೆ ಚರಿತ್ರೆಯ ನಿರಂತರ ಹರಿವಿನಲ್ಲಿ ಸಾಕ್ಷ್ಯಗಳು ಇದ್ದರೂ ಕೊಚ್ಚಿಕೊಂಡು ಹೋಗಿರುತ್ತವೆ ಎಂಬುದನ್ನೂ ನಾವು ಗಮನಿಸಬೇಕು. ಹಾಗೆ ನೋಡಿದರೆ ನಮ್ಮ ದೇಶದ ಚರಿತ್ರೆಯಲ್ಲಿ ಎಷ್ಟು ಮತಾಂತರಗಳು ರಕ್ತಸಹಿತ ಮತ್ತು ರಕ್ತರಹಿತ ಮತಾಂತರಗಳು ನಡೆದುಹೋಗಿಲ್ಲ. ಕೆಲವು ಯಾವ ಪ್ರಮಾಣದಲ್ಲಿ ನಡೆದುಹೋಗಿವೆ ಎಂದರೆ ಅದಕ್ಕೆ ಸಾಕ್ಷಿಗಳು ಈಗಲೂ, ಇಷ್ಟು ದೀರ್ಘ ಕಾಲದ ನಂತರವೂ ಹಲವು ರೂಪಗಳಲ್ಲಿ ಉಳಿದಿವೆ. ಚರಿತ್ರೆಯಲ್ಲಿ ಮುಕ್ತ ಮನಸ್ಸಿನನ ಅಥವಾ ತಾತ್ಬಿಕ ಆಧಾರದ ಮತಾಂತರಗಳ ಪ್ರಮಾಣ ಎಷ್ಟು ಎಂದು ಗೊತ್ತಿದ್ದವರಿಗೆ, ಮತಾಂತರ ಮಾಡಿದವರ ರಾಜಕಾರಣದಷ್ಟೇ ಅದರ ಬಗ್ಗೆ ಆಕ್ರೋಶಗೊಳ್ಳುವವರ ರಾಜಕಾರಣವೂ ರೂಕ್ಷವಾಗಿರುತ್ತದೆ ಎಂಬುದು ಗೊತ್ತಾಗುತ್ತದೆ,

ಎಲ್ಲಕ್ಕಿಂತ ಮುಖ್ಯವಾಗಿ ಈ ಮಸೂದೆ ಮುಸ್ಲಿಮರ ಹೊರತಾಗಿ ಭಾರತದಲ್ಲಿನ ಇನ್ನೆಲ್ಲ ಮತಗಳ ಅಕ್ರಮ ವಲಸಿಗರೂ ಮತೀಯ ಕಿರುಕಳ ಕಾರಣದಿಂದ ಈ ದೇಶದೊಳಕ್ಕೆ ನುಸುಳಿದ್ದಾರೆಂದು ಯಾವುದೇ ಸಾಕ್ಷ್ಯವಿಲ್ಲದೆ ಒಪ್ಪಿಕೊಳ್ಳುವ ಮತ್ತು ಮುಸ್ಲಿಮರು ಇತರ ಮತಗಳ ಬಹುಸಂಖ್ಯಾತ ಜನ ಬಂದಿರಬಹುದಾದಂತೇ ಜೀವನೋಪಾಯಕ್ಕಾಗಿ ಬಂದಿರಬಹುದೆಂಬ ಅಂಶವನ್ನೇ ನಿರಾಕರಿಸುತ್ತದೆ. ಹಾಗಾಗಿ ಯಾವುದೇ ಸಾಧುವೆನಿಸುವ ದಾಖಲೆ-ಸಾಕ್ಷ್ಯಗಳ ಆಧಾರವಿಲ್ಲದೆ ತಾನು ಮತೀಯ ಕಿರುಕುಳಕ್ಕೊಳಗಾದವರ ವಲಸೆಯನ್ನು ಸಕ್ರಮಗೊಳಿಸುವ ಮಾನವೀಯ ನೀತಿಯನ್ನು ಅನುಸರಿಸುತ್ತಿದ್ದೇನೆ ಎಂಬ ’ಟೊಳ್ಳಾದ” ವಾದ ಮತಾಧಾರಿತ ತಾರತಮ್ಯ ನೀತಿಯನ್ನು ಮರೆಮಾಚಿಕೊಳ್ಳಲು ಒಂದು ನೆಪ ಮಾತ್ರವೆಂದು ಸ್ಪಷ್ಟವಾಗುತ್ತದೆ. ಸರ್ಕಾರದ ಇನ್ನೊಂದು ಮಾತೂ ಅದರ ಈ ಮಥೀಯ ನೀತಿಯನ್ನು ಇನ್ನಷ್ಟು ಸಾಬೀತುಗೊಳಿಸುತ್ತದೆ. ಹಿಂದೂ ವಲಸಡಗಾರರು ಇರುವ ಒಂದೇ ಹಿಂದೂಗಳ ದೇಶವಲ್ಲದೆ ಇನ್ನೆಲ್ಲ ಆಶ್ರಯ ಪಡೆಉಬೇಕು ಎಂದೂ ಅದು ಕೇಳುತ್ತಿದೆ. ಇದು ಈ ಮಸೂದೆಯ ಹಿಂದೆ ಅಡಗಿರುವ ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಗುಪ್ತ ಕಾರ್ಯಸೂಚಿಯನ್ನು ಮುಂದಿನ ರಾಜಕೀಯ ಲಾಭಗಳಿಗಾಗಿಹಿಂದೂಗಳ ಭಾವನೆಗಳೊಂದಿಗೆ ಆಟವಾಡಲೆಂದೇ ಕಂಡೂ ಕಾಣದಂತೆ ಪರಿಚಯಿಸುತ್ತದೆ. ಏಕೆ ಮತಾಧಾರಿತ ಬೆರಳೇಣಿಕೆಯ ರಾಷ್ಟ್ರಗಳ ಹೊರತಾಗಿ ವಲಸೆಗಾರರನ್ನು ಹಿಂದೂ ಎಂದು ಯಾವ ರಾಷ್ಟ್ರ ಪೌರತ್ವವನ್ನು ನಿಷೇಧಿಸದೆ?

ಆದರೂ ನಮ್ಮ ಸರ್ವೋಚ್ಚ ನ್ಯಾಯಾಲಯ ಇತ್ತೀಚಿಗೆ ಕರ್ನಾಟಕದ ಪಕ್ಷಾಂತರಗಳ ಬಗ್ಗೆ, ಅಯೋಧ್ಯಾ ವಿವಾದದ ಬಗ್ಗೆ ಮತ್ತು ಶಬರಿಮಲೈ ದೇವಾಲಲಯ ಪ್ರವೇಶದ ತೀರ್ಪಿನ ಮರುಪರಿಶೀಲನಾ ಅರ್ಜಿಯ ವಿಷಯದಲ್ಲಿ ನೀಡಿರುವ ತೀರ್ಪಗಳು ಅನುಸರಿಸುವ ನ್ಯಾಯ ನಿರ್ಣಯದ ಮಾದರಿಗಳನ್ನು ಗಮನಿಸಿದಾಗ ನ್ಯಾಯಾಲಯ ಈ ಮಸೂದೆಯ ಕಾಯಿದೆ ರೂಪವನ್ನು ಅಸಾಂವಿಧಾನಿಕ ಎಂದು ಘೋಷಿಸುತ್ತದೆ ಎಂದು ಖಡಾಕಂಡಿತವಾಗಿ ಹೇಳಲಾಗುವುದಿಲ್ಲ. ಕಾದು ನೋಡಬೇಕು.

ಸಂಗೀತ ಅನ್ನೋದು ಅಂತಗಘತವಾಗಿಬಿಡಬೇಕು. ಆಗ ಮಾತ್ರ ಅದು ನೃತ್ಯದಲ್ಲಿ ಚಲನೆಯಾಗಿ ರೂಪುಗೊಳ್ಳುತ್ತದೆ. ಇವರಲ್ಲಿ ವಲ್ಗಾರಿಟಿಗೆ ಅವಕಾಶವೇ ಇಲ್ಲ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.