ರವಿಶಂಕರ್- ಅಲ್ಲಿ ಇಲ್ಲಿ ಆಡಿದ ಕೆಲಮಾತುಗಳು

 In RAGAMALA
ನನಗೆ ಮಾತು ಕಷ್ಟ, ನನ್ನ ಭಾವನೆಯನ್ನೆಲ್ಲಾ ಸಿತಾರ್ ಮೂಲಕ ಮಾತ್ರ ಹೇಳಿಕೊಳ್ಳಬಲ್ಲೆ, ನಾನು ಒಳ್ಳೆ ಮಾತುಗಾರನಲ್ಲ ಎನ್ನುತ್ತಿದ್ದರು ರವಿಶಂಕರ್. ಆದರೆ ಹಲವಾರು ಸಂದರ್ಶನಗಳಲ್ಲಿ ತಮ್ಮ ಅನುಭವಗಳನ್ನು, ಭಾವನೆಗಳನ್ನು ಸೊಗಸಾಗಿ ಹೇಳಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಆಡಿದ ಕೆಲವು ಮಾತುಗಳು ಇಲ್ಲಿವೆ.
Ravi-Shankar_img7_20121212

ನೀವು ಸಂಗೀತಗಾರನಾಗಿ ರೂಪಪಡೆಯುವಲ್ಲಿ ನಿಮ್ಮ ಗುರು ಬಾಬಾ ಅಲ್ಲಾವುದ್ದೀನ್ ಖಾನ್ ಅವರ ಪಾತ್ರವೇನು?

ಬಾಬಾ ವಿಭಿನ್ನ ಸಂಗೀತಗಾರರಲ್ಲಿ ಪಾಠಕಲಿತಿದ್ದರು. ಅವರ ಶಿಕ್ಷಣ ಮುಖ್ಯವಾಗಿ ಸೇನಿಯಾ ಘರಾನಾದ್ದು. ಅವರಿಗೆ ಮಿಯಾ ತಾನಸೇನ್ ಅವರ ವಂಶಸ್ಥರಿಂದ ನೇರವಾಗಿ ಪಾಠವಾಗಿತ್ತು. ತಾನ್ಸೇನನ ಗುರು ಹರಿದಾಸ ಒಬ್ಬ ಯೋಗಿ. ಅವನು ತನ್ನ ಆಧ್ಯಾತ್ಮಿಕ ಸಂಗೀತದ ಮೂಲಕ ಒಂದು ವಿಶೇಷ ಅಧ್ಯಾತ್ಮಿಕ ಅನುಭವವನ್ನು ತನ್ನ ಶಿಷ್ಯನಿಗೆ ನೀಡಿದ. ತಾನ್ಸೇನ್ ಅದನ್ನು ತನ್ನ ಸಂಗೀತದ ಮೂಲಕ ಕಂಡುಕೊಂಡ. ನನ್ನ ಗುರುಗಳಾದ ಬಾಬಾ ಸ್ವತಃ ಆಧ್ಯಾತ್ಮಿಕ ವ್ಯಕ್ತಿ. ಮುಸ್ಲಿಮರಾಗಿದ್ದರು ಆದರೆ ಎಲ್ಲಾ ಆಧ್ಯಾತ್ಮಿಕ ಮಾರ್ಗಕ್ಕೂ ತೆರೆದುಕೊಳ್ಳುತ್ತಿದ್ದರು. ನಾನು ಒಮ್ಮೆ ಬ್ರಸೆಲ್ಲಿನಲ್ಲಿದ್ದಾಗ ಅವರನ್ನು ಒಂದು ಕ್ಯಾಥೀಡ್ರಲ್ಲಿಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಮೇರಿಯ ಒಂದು ದೊಡ್ಡ ವಿಗ್ರಹವಿತ್ತು. ಎಲ್ಲರೂ ಹಾಡುತ್ತಿದ್ದರು. ಒಳಗೆ ಹೋದ ತಕ್ಷಣ ಬಾಬಾ ವಿಚಿತ್ರ ಅವಸ್ಥೆಗೆ ತಲುಪಿಬಿಟ್ಟರು. ಮಗುವಿನಂತೆ “ಮಾ, ಮಾ” ಎಂದು ಕರೆಯಲಾರಂಭಿಸಿದರು. ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಸುರಿಯಲು ಪ್ರಾರಂಭವಾಯಿತು. ಅವರನ್ನು ಬಲವಂತವಾಗಿ ಹೊರಗೆ ಕರೆದುಕೊಂಡು ಬರಬೇಕಾಯಿತು.

ನೀವು ಸಂಗೀತದಲ್ಲಿ ಬಾಬಾ ಅವರ ಹಾದಿಯಲ್ಲೇ ತೊಡಗಿಸಿಕೊಳ್ಳುತ್ತೀರಾ?

ಹೌದು. ಬಾಬಾ ಅವರದು ಬಹುಮುಖ ಪ್ರತಿಭೆ. ಅವರಿಗೆ ಜಾನಪದ, ಅರೆ ಶಾಸ್ತ್ರೀಯ, ಶಾಸ್ತ್ರೀಯ ಹೀಗೆ ಎಲ್ಲಾ ರೀತಿಯ ಸಂಗೀತದಲ್ಲೂ ಪರಿಣತಿ ಇತ್ತು. ನಾನು ಅವರ ಸಂಗೀತದಲ್ಲಿನ ಜಾನಪದ ಅಂಶಗಳನ್ನು ತೆಗದುಕೊಳ್ಳಲು ಪ್ರಯತ್ನಿಸಿದ್ದೇನೆ. ಅವರು ಸದಾ ಹೊಸದನ್ನು ಸಾಧಿಸುವುದಕ್ಕೆ ಕಾತರದಿಂದಿದ್ದರು. ಯಾವಾಗಲೂ ಪರಿಷ್ಕರಿಸುತ್ತಿದ್ದರು. ಇವು ಅವರ ಸಂಗೀತದ ವಿಶಿಷ್ಟ ಲಕ್ಷಣಗಳು. ನಾನು ಸಿತಾರಿನಲ್ಲಿ ಯಾವುದೇ ಸಿದ್ಧ ಅಂಶಗಳನ್ನು ನುಡಿಸುವುದಿಲ್ಲ. ನಾನು ರಾಗಕ್ಕೆ ಅಂಟಿಕೊಳ್ಳುತ್ತೇನೆ, ಉಳಿದಂತೆ ಸ್ವಾತಂತ್ರ್ಯ ತೆಗೆದುಕೊಳ್ಳುತ್ತೇನೆ. ನಾನು ಮುಂದೆ ಏನು ನುಡಿಸುತ್ತೇನೆ ಎನ್ನುವುದು ನನಗೇ ತಿಳಿದಿರುವುದಿಲ್ಲ. ಅದು ಬಾಬಾ ಅವರ ಅದ್ಭುತ ಗುಣ. ಅದನ್ನೇ ನಾನು ಮುಂದುವರಿಸಿಕೊಂಡು ಹೋಗಲು ಬಯಸುತ್ತೇನೆ.

ನೀವು ಚಿಕ್ಕವರಿದ್ದಾಗ ಯಾರ ಸಂಗೀತ ಕೇಳುತ್ತಿದ್ದಿರಿ?


ನಾನು ಅದೃಷ್ಟವಂತ. ವಿಷ್ಣು ದಿಗಂಬರ್ ಅವರಿಂದ ಹಿಡಿದು ಎಲ್ಲಾ ದಿಗ್ಗಜಗಳ ಸಂಗೀತ ಕೇಳುವ ಅಪರೂಪದ ಅವಕಾಶವಿತ್ತು……. ಆದರೆ ನಾವು ಕೇಳುತ್ತಿದ್ದ ಕಾಲದಲ್ಲಿ ನಾವು ಯಾವಾಗಲೂ: ಇವರ ಅಸ್ತಾಯಿ, ಅಂತರ ಎಷ್ಟು ಸೊಗಸಾಗಿದೆ… ಅಥವಾ ಇವರು ಬೋಲ್ ತಾನಗಳನ್ನು ಎಷ್ಟು ಲಯಬದ್ಧವಾಗಿ ಮಾಡುತ್ತಿದ್ದಾರೆ . . ಅಥವಾ ಈ ಉಸ್ತಾದ್ ಶುದ್ಧಸ್ವರದಲ್ಲಿ ಅದ್ಭುತ….ಎಂದು ಮಾತನಾಡುತ್ತಿದ್ದೆವು. ಆದರೆ ನಾವೆಂದೂ ಒಬ್ಬ ಸಂಗೀತಗಾರನಲ್ಲಿರುವ ವಿಶೇಷತೆ ಇನ್ನೊಬ್ಬರಲ್ಲಿ ಇರಬೇಕೆಂದು ನಿರೀಕ್ಷಿಸುತ್ತಿರಲಿಲ್ಲ. ಒಬ್ಬ ಸಂಗೀತಗಾರ ಯಾವುದಾದರೂ ಒಂದರಲ್ಲಿ ಪಾರಮ್ಯವನ್ನು ಸಾಧಿಸಿದ್ದರೆ ಅದಕ್ಕಾಗಿ ಅವರನ್ನು ಗೌರವಿಸುತ್ತಿದ್ದೆವು. ಈಗ ಹಾಗಲ್ಲ. ಶ್ರೋತೃಗಳಿಗೆ ಎಲ್ಲರಲ್ಲೂ ಎಲ್ಲಾ ಗುಣವೂ ಇರಬೇಕು.

ನೀವು ನಿಮ್ಮ ಇಡೀ ಬದುಕನ್ನು ಸಂಗೀತಕ್ಕೇ ಮೀಸಲಿಟ್ಟಿದ್ದೀರಿ. ಇದು ಮನುಷ್ಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಿದೆಯೇ?

ಇದು ತುಂಬಾ ಗಂಭೀರವಾದ ಪ್ರಶ್ನೆ. ನನಗೆ ಸಂಗೀತ ಎಲ್ಲದಕ್ಕಿಂತ ಹೆಚ್ಚು ಆತ್ಮೀಯವಾದುದು. ಅದು ನನ್ನನ್ನು ತುಂಬ ಸಂವೇದನಾಶೀಲನನ್ನಾಗಿ ಮಾಡಿದೆ. ನನ್ನೊಳಗೆ ಅಥವಾ ನನ್ನ ಸುತ್ತಮುತ್ತಲಿನ ಎಲ್ಲದಕ್ಕೂ ನಾನೀಗ ಹೆಚ್ಚು ಸೂಕ್ಷ್ಮವಾಗಿ ಸ್ಪಂದಿಸಬಲ್ಲೆ ಎನಿಸುತ್ತಿದೆ.

ನಿಮ್ಮ ದೃಷ್ಟಿಯಲ್ಲಿ ನಿಜವಾದ ಸಂಗೀತ ಯಾವುದು?

ಯಾವುದೇ ದೇಶದ ಸಂಗೀತವಾಗಲಿ ಅಥವಾ ಯಾವುದೇ ಬಗೆಯ ಸಂಗೀತವಾಗಲಿ ಅದು ಕೇಳುಗನ ಅಂತರಾಳವನ್ನು ತಟ್ಟಬೇಕು. ಅವರ ಸಂವೇದನೆಯನ್ನು ಮಿಡಿಯಬೇಕು. ಅದೇ ನಿಜವಾದ ಸಂಗೀತ. ವೇಗ ಮತ್ತು ಕೌಶಲ ಅಥವಾ ಪರಿಣತಿಯ ಪ್ರದರ್ಶನ ಯಾವಾಗಲೂ ಆಕರ್ಷಕ ಮತ್ತು ರೋಮಾಂಚಕಾರಿ. ಆದರೆ ನನ್ನ ದೃಷ್ಟಿಯಲ್ಲಿ ಒಂದು ಶುದ್ಧ, ಶಾಂತ ಸ್ವರ ಹೃದಯವನ್ನು ಮಿಡಿದು, ಒಡಲನ್ನು ಕರಗಿಸುವುದಕ್ಕೆ ಸಾಧ್ಯವಾಗುವುದೇ ನಿಜವಾದ ಸಂಗೀತ.

ಸಂಗೀತದಿಂದ ಜಗತ್ತಿನಲ್ಲಿ ಶಾಂತಿ ನೆಲೆಸುವುದಕ್ಕೆ ಸಾಧ್ಯವೇ?

ಯಾವುದೇ ಸಂಗೀತವಾಗಲಿ ನೇರವಾಗಿ ಏನನ್ನೂ ಮಾಡಲಾರದು ಅನ್ನಿಸುತ್ತದೆ. ಬಿಥೋವನ್ ಆಗಲಿ ಅಥವಾ ಬೇರೆ ಸಂಗೀತಗಾರರು ಯಾವುದೋ ಒಂದು ರಾಗವನ್ನು ನುಡಿಸಿಬಿಟ್ಟ ತಕ್ಷಣ ರಸ್ತೆಯಲ್ಲಿ ಹುಚ್ಚೆದ್ದು ಕಾದಾಡುತ್ತಿರುವ ಜನ ಸುಮ್ಮನಾಗಿಬಿಡುವುದಿಲ್ಲ. ಅದರೆ ಕೇಳುಗರ ಮನಸ್ಸಿನಲ್ಲಿ ಸಂಗೀತ ಒಂದು ರೀತಿಯ ಶಾಂತಿಯನ್ನು ಉಂಟುಮಾಡುತ್ತದೆ. ದುರದೃಷ್ಟದ ಸಂಗತಿ ಅಂದರೆ ಪ್ರಮುಖ ಸ್ಥಾನಗಳಲ್ಲಿ ಇರುವ ರಾಜಕಾರಣಿಗಳಿಗಾಗಲಿ ಅಥವಾ ಇತರ ವ್ಯಕ್ತಿಗಳಿಗಾಗಲಿ ಅಷ್ಟಾಗಿ ಸಂಗೀತಪ್ರಜ್ಞೆ ಇರುವುದಿಲ್ಲ. ಅವರಲ್ಲಿ ಒಂದಿಷ್ಟು ಸಂಗೀತದ ಮನಸ್ಸು ಇದ್ದರೆ ಒಳ್ಳೆಯದಾಗುತ್ತಿತ್ತು ಅನ್ನಿಸುತ್ತದೆ. ಆದರೆ ಹಾಗೆ ಸಂಗೀತದಿಂದ ಹೊಡೆದಾಟವನ್ನು ನಿಲ್ಲಿಸಲಾಗುವುದಿಲ್ಲ. ತೀರಾ ಕೋಪಗೊಂಡ ಅಥವಾ ಹಿಂಸೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಸಮಾಧಾನ ಮಾಡಲೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸಮಾಧಾನ ಮಾಡಲು ವಿವಿಧ ರೀತಿಯ ಸಂಗೀತಗಳನ್ನು ಹಾಕುತ್ತಿದ್ದಾರೆ. ಅದರಿಂದ ಖಂಡಿತ ಅನುಕೂಲವಾಗುತ್ತದೆ. ಆದರೆ ಇಂದು “ಮ್ಯೂಸಿಕ್ ಥೆರಪಿ” ಎಂದು ಮಾಡುತ್ತಿರುವುದು ಮಾತ್ರ ಮೂರ್ಖತನ. ನಾನು ಹಲವಾರು ‘ಸಂಗೀತ ಚಿಕಿತ್ಸಕರನ್ನು’ ಭೇಟಿಮಾಡಿದ್ದೇನೆ. ಅವರೆಲ್ಲಾ ಹಣಮಾಡಲು, ಜನರನ್ನು ಮೋಸಮಾಡಲು ಹೊರಟಿದ್ದಾರೆ. ಚೆನ್ನಾಗಿ ಶ್ರುತಿಮಾಡಿರುವ ತಂಬೂರಿಯ ನಾದವನ್ನು ಪರಿಶುದ್ಧ ಮನಸ್ಸಿನಿಂದ ಕೇಳಿದರೆ ನಿಮಗೆ ಶಾಂತಿಯ ಭಾವನೆ ಸಿಗುತ್ತದೆ. ಹಾಗೆಯೇ ಬಾಕ್ ಸಂಗೀತವನ್ನು ಅಥವಾ ಒಳ್ಳೆಯ ಸಂಗೀತಗಾರನ ಒಂದು ಒಳ್ಳೆಯ ರಾಗದ ಪ್ರಸ್ತುತಿಯನ್ನು ಕೇಳಿದರೆ ನಿಮಗೆ ನೆಮ್ಮದಿಯ ಅನುಭವವಾಗುತ್ತದೆ. ಅದೇ ನನ್ನ ದೃಷ್ಟಿಯಲ್ಲಿ ಅಂತಿಮ ಶುಶ್ರೂಷೆ.

ಪಾಶ್ಚಿಮಾತ್ಯರಲ್ಲಿ ಭಾರತೀಯ ಸಂಗೀತದ ರಸಗ್ರಹಣ ಬದಲಾಗಿದೆ ಅನ್ನಿಸುತ್ತದೆಯಾ?

ಸಾಕಷ್ಟು ಬದಲಾಗಿದೆ. ನಾನು 1950ರ ಮಧ್ಯಭಾಗದಲ್ಲಿ ನನ್ನ ಈ ಪ್ರಯತ್ನವನ್ನು ಪ್ರಾರಂಭಿಸಿದೆ. ಆಗ ಭಾರತೀಯ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದವರು ಕೆಲವರು ಮಾತ್ರ. ಆದರೆ ಯಾವ ಸಂಗೀತಗಾರರಿಗೂ ಪಶ್ಚಿಮದ ಶ್ರೋತೃಗಳ ಬಗ್ಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಇಲ್ಲಿ ನೀಡುವ ರೀತಿಯಲ್ಲೇ ಅಲ್ಲೂ ಕಾರ್ಯಕ್ರಮ ನೀಡುತ್ತಿದ್ದರು. ಅದೇ ದಬರ್ಾರಿ, ಕಾನಡ, ಇತ್ಯಾದಿ. ತೀರಾ ಮಂದಗತಿಯ ರಾಗ ಅರಳಿಕೊಳ್ಳುವುದಕ್ಕೆ ತಾಸುಗಳೇ ಬೇಕಾಗುತಿತ್ತು. ನಾವು ಸಿನಿಮಾದಲ್ಲಿ ಮಾಡುವಂತೆ ಎಡಿಟ್ ಮಾಡಬೇಕಿತ್ತು. ಇಂತಹ ಪದ್ಧತಿ ದಕ್ಷಿಣ ಭಾರತದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಕಛೇರಿಯನ್ನು ಸಣ್ಣ ಕೃತಿಗಳಿಂದ ಪ್ರಾರಂಭಿಸುತ್ತಾರೆ. ನಾನು ಆ ರೀತಿಯಲ್ಲಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದೆ. ನಾನು ಜನಪ್ರಿಯ ಆಗಿಬಿಟ್ಟೆ. ಅದರಿಂದ ಒಳ್ಳೆಯದೇ ಆಯಿತು. ಹೆಚ್ಚೆಚ್ಚು ಜನ ಸಂಗೀತ ಕೇಳಲು ಬರಲಾರಂಭಿಸಿದರು. ಸುಮಾರು 11 ವರ್ಷಗಳ ನಂತರ ಜಾಜರ್್ ಹ್ಯಾರಿಸನ್ ನನ್ನ ವಿದ್ಯಾರ್ಥಿಯಾದ ಮೇಲೆ ನಾನು ತುಂಬಾ ಜನಪ್ರಿಯ ಆಗಿಬಿಟ್ಟೆ. ಆದರೆ ನನ್ನನ್ನು ಮಾರಿಕೊಂಡು ಬಿಡಲಿಲ್ಲ. ನನ್ನದು ರಾಗಾ-ರಾಕ್ ಆಗಿಬಿಡಲಿಲ್ಲ. ನನ್ನ ಸಂಪ್ರದಾಯವನ್ನು ಉಳಿಸಿಕೊಳ್ಳುವುದಕ್ಕೆ ನಾನು ಮಹತ್ವವನ್ನು ನೀಡುತ್ತೇನೆ. ನನ್ನ ಸಂಗೀತಕ್ಕೆ ಆದಷ್ಟು ಸ್ಥಳೀಯರು ಬರಬೇಕೆಂದು ನಾನು ಬಯಸುತ್ತೇನೆ. ಈಗ ಅಲ್ಲಿನವರಿಗೆ ನಮ್ಮ ಸಂಗೀತದ ಸೂಕ್ಷ್ಮಗಳು ಅರ್ಥವಾಗುತ್ತಿದೆ. ನನ್ನ ಅದೃಷ್ಟ, ಭಾರತೀಯ ಸಂಗೀತದ ಬಗೆಗಿನ ತಿಳುವಳಿಕೆ ಹಾಗೂ ಅದನ್ನು ಕುರಿತ ಮೆಚ್ಚುಗೆ ಈಗ ಸಾಧ್ಯವಾಗಿದೆ. ಇದು ಮೊದಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ನಾನು ತುಂಬಾ ಪ್ರಯತ್ನಪಟ್ಟೆ. ಜಾರ್ಜ ಹ್ಯಾರಿಸನ್ ಅಂತಹ ಗೆಳೆಯರಿಗೆ ಕೃತಜ್ಞತೆಗಳು.

Ravi-Shankar_img16_20121212

007_ravi_shankar

ಫ್ಯೂಷನ್ ಕುರಿತು ನಿಮ್ಮ ಅಭಿಪ್ರಾಯವೇನು?

ಫ್ಯೂಷನ್ ಅನ್ನುವುದು ಅಲ್ಲಿಂದ ಒಂದಿಷ್ಟು ಇಲ್ಲಿಂದ ಒಂದಿಷ್ಟು ಹೆಕ್ಕಿಕೊಂಡು ಮಾಡುವ ಅಪವಿತ್ರವಾದ ಬೆರಕೆ. ನಾನು ಅದನ್ನು ಎಂದೂ ಮಾಡುವುದಿಲ್ಲ. ನಮ್ಮ ಸಂಗೀತದಲ್ಲೇ ಎಷ್ಟೊಂದು ಇದೆ. ಇಲ್ಲಿ ಕೇವಲ ಆಧ್ಯಾತ್ಮ ಅಥವಾ ಧ್ಯಾನ ಮಾತ್ರವಲ್ಲ ಉಳಿದೆಲ್ಲವೂ ಇದೆ. ಎಷ್ಟೊಂದು ಸಂತೋಷ, ಎಷ್ಟೊಂದು ಬಣ್ಣಗಳಿವೆೆ. ನಾನು ನನ್ನ ರಚನೆಗಳಲ್ಲಿ ಅವುಗಳನ್ನು ಜೀವಂತ ಇಟ್ಟಿದ್ದೇನೆ. ನಾನು ಪಾಶ್ಚಾತ್ಯ ವಾದ್ಯಗಳನ್ನು ಅಥವಾ ಪಾಶ್ಚಾತ್ಯ ಸಂಗೀತಗಾರರನ್ನು ಬಳಸಿಕೊಂಡಿದ್ದೇನೆೆ. ಆದರೆ ನನ್ನ ಸಂಗೀತದ ಮುಖ್ಯ ಸೆಲೆ ಹಾಗೂ ಸತ್ವ ಮಾತ್ರ ಅಪ್ಪಟ ಭಾರತೀಯ. ನನ್ನ ನಿಜವಾದ ಉದ್ದೇಶ ಶ್ರೋತೃಗಳನ್ನು ನನ್ನ ಸಂಗೀತದ ಅಂತರಾಳಕ್ಕೆ ಕರೆದುಕೊಂಡು ಹೋಗುವುದೇ ಆಗಿದೆ. ಸಂಗೀತವೂ ಧ್ಯಾನದಂತೆ. ಅದು ಎದೆಯಾಳದಲ್ಲಿ ಮಡುಗಟ್ಟಿರುವ ಭಾವಗಳನ್ನು ಹೊರತರುತ್ತದೆ, ಸಂಪೂರ್ಣ ನೆಮ್ಮದಿ ನೀಡಿ ಪರಿಶುದ್ಧಗೊಳಿಸುತ್ತದೆ.

ಪಾಶ್ಚಿಮಾತ್ಯರಲ್ಲಿ ಭಾರತೀಯ ಸಂಗೀತದ ರಸಗ್ರಹಣ ಬದಲಾಗಿದೆ ಅನ್ನಿಸುತ್ತದೆಯಾ?

ಸಾಕಷ್ಟು ಬದಲಾಗಿದೆ. ನಾನು 1950ರ ಮಧ್ಯಭಾಗದಲ್ಲಿ ನನ್ನ ಈ ಪ್ರಯತ್ನವನ್ನು ಪ್ರಾರಂಭಿಸಿದೆ. ಆಗ ಭಾರತೀಯ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದವರು ಕೆಲವರು ಮಾತ್ರ. ಆದರೆ ಯಾವ ಸಂಗೀತಗಾರರಿಗೂ ಪಶ್ಚಿಮದ ಶ್ರೋತೃಗಳ ಬಗ್ಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಇಲ್ಲಿ ನೀಡುವ ರೀತಿಯಲ್ಲೇ ಅಲ್ಲೂ ಕಾರ್ಯಕ್ರಮ ನೀಡುತ್ತಿದ್ದರು. ಅದೇ ದಬರ್ಾರಿ, ಕಾನಡ, ಇತ್ಯಾದಿ. ತೀರಾ ಮಂದಗತಿಯ ರಾಗ ಅರಳಿಕೊಳ್ಳುವುದಕ್ಕೆ ತಾಸುಗಳೇ ಬೇಕಾಗುತಿತ್ತು. ನಾವು ಸಿನಿಮಾದಲ್ಲಿ ಮಾಡುವಂತೆ ಎಡಿಟ್ ಮಾಡಬೇಕಿತ್ತು. ಇಂತಹ ಪದ್ಧತಿ ದಕ್ಷಿಣ ಭಾರತದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಕಛೇರಿಯನ್ನು ಸಣ್ಣ ಕೃತಿಗಳಿಂದ ಪ್ರಾರಂಭಿಸುತ್ತಾರೆ. ನಾನು ಆ ರೀತಿಯಲ್ಲಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದೆ. ನಾನು ಜನಪ್ರಿಯ ಆಗಿಬಿಟ್ಟೆ. ಅದರಿಂದ ಒಳ್ಳೆಯದೇ ಆಯಿತು. ಹೆಚ್ಚೆಚ್ಚು ಜನ ಸಂಗೀತ ಕೇಳಲು ಬರಲಾರಂಭಿಸಿದರು. ಸುಮಾರು 11 ವರ್ಷಗಳ ನಂತರ ಜಾಜರ್್ ಹ್ಯಾರಿಸನ್ ನನ್ನ ವಿದ್ಯಾರ್ಥಿಯಾದ ಮೇಲೆ ನಾನು ತುಂಬಾ ಜನಪ್ರಿಯ ಆಗಿಬಿಟ್ಟೆ. ಆದರೆ ನನ್ನನ್ನು ಮಾರಿಕೊಂಡು ಬಿಡಲಿಲ್ಲ. ನನ್ನದು ರಾಗಾ-ರಾಕ್ ಆಗಿಬಿಡಲಿಲ್ಲ. ನನ್ನ ಸಂಪ್ರದಾಯವನ್ನು ಉಳಿಸಿಕೊಳ್ಳುವುದಕ್ಕೆ ನಾನು ಮಹತ್ವವನ್ನು ನೀಡುತ್ತೇನೆ. ನನ್ನ ಸಂಗೀತಕ್ಕೆ ಆದಷ್ಟು ಸ್ಥಳೀಯರು ಬರಬೇಕೆಂದು ನಾನು ಬಯಸುತ್ತೇನೆ. ಈಗ ಅಲ್ಲಿನವರಿಗೆ ನಮ್ಮ ಸಂಗೀತದ ಸೂಕ್ಷ್ಮಗಳು ಅರ್ಥವಾಗುತ್ತಿದೆ. ನನ್ನ ಅದೃಷ್ಟ, ಭಾರತೀಯ ಸಂಗೀತದ ಬಗೆಗಿನ ತಿಳುವಳಿಕೆ ಹಾಗೂ ಅದನ್ನು ಕುರಿತ ಮೆಚ್ಚುಗೆ ಈಗ ಸಾಧ್ಯವಾಗಿದೆ. ಇದು ಮೊದಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ನಾನು ತುಂಬಾ ಪ್ರಯತ್ನಪಟ್ಟೆ. ಜಾರ್ಜ ಹ್ಯಾರಿಸನ್ ಅಂತಹ ಗೆಳೆಯರಿಗೆ ಕೃತಜ್ಞತೆಗಳು. 

ಇಂದು ತಂತ್ರಜ್ಞಾನ ತುಂಬಾ ಬೆಳೆದಿದೆ ಅದರಿಂದ ಸಂಗೀತದ ಮೇಲಾಗಿರುವ ಪರಿಣಾಮವೇನು?


ಇಂದು ತಂತ್ರಜ್ಞಾನ ಸಂಗೀತ ಪ್ರಸ್ತುತಿಯ ಸಾಧ್ಯತೆಗಳನ್ನು ಅಪಾರವಾಗಿ ವಿಸ್ತರಿಸಿ, ನಮ್ಮ ಬದುಕನ್ನು ಸಾಕಷ್ಟು ವಿಸ್ತರಿಸಿದೆ. ಆದರೆ ಕೆಲವೊಮ್ಮೆ ಈ ಅತಿಯಾದ ಅಬ್ಬರದಿಂದಾಗಿ (ಅಂಪ್ಲಿಫಿಕೇಷನ್) ಮುಖ್ಯವಾದ್ಯದ ನಾದಗುಣವೇ ನಾಶವಾಗಿಬಿಡುತ್ತದೆ. ಇನ್ನು ಪಕ್ಕವಾದ್ಯದವರು -ತಬಲಾ ಅಥವಾ ಹಾರ್ಮೋನಿಯಮ್ ವಾದಕರೂ ಕೂಡ ಮುಖ್ಯವಾದಕರಷ್ಟೇ ವಾಲ್ಯೂಮ್ ಇಟ್ಟುಕೊಂಡರಂತೂ ಮುಗಿಯಿತು. ಈ ಸಂದರ್ಭದಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ವಾದ್ಯಗಳನ್ನು ಹೋಲಿಸುವುದು ಒಳ್ಳೆಯದು. ಪಾಶ್ಚಿಮಾತ್ಯ ವಾದ್ಯಗಳನ್ನು ಅವರು ಅಂಪ್ಲಿಫೈ ಮಾಡುವುದೇ ಇಲ್ಲ. ಅವುಗಳನ್ನು ದೊಡ್ಡ ಸಭಾಂಗಣಗಳಲ್ಲಿ ಕೇಳಿಸುವಂತೆಯೇ ರೂಪಿಸಿರುತ್ತಾರೆ. ಅದರೆ ನಮ್ಮ ವಾದ್ಯಗಳು ಸಣ್ಣ ಸಣ್ಣ ಪ್ರದೇಶದಲ್ಲಿ ನುಡಿಸುವುದಕ್ಕೆ ಸರಿಹೊಂದುವಂತೆಯೇ ರೂಪುಗೊಂಡಿವೆ.

ನಿಮ್ಮ ಮಗಳು ಅನೌಷ್ಕಾಳಿಗೆ ಸಂಗೀತ ಕಲಿಸುವುದು ಬೇರೆಯವರಿಗೆ ಕಲಿಸುವುದಕ್ಕಿಂತ ಹೇಗೆ ಭಿನ್ನ?

ಅದು ನನ್ನ ಬದುಕಿನಲ್ಲಿ ಒಂದು ಅದ್ಭುತವಾದ ಅನುಭವ. ಗುರುವಾಗಿ ಹಾಗೂ ತಂದೆಯಾಗಿ ಅದೊಂದು ವಿಶೇಷ ಅನುಭವ. ಅವಳು ಎಂಟನೆಯ ವಯಸ್ಸಿನಿಂದ ನನ್ನ ಜೊತೆ ಇದ್ದಾಳೆ. ನನ್ನಿಂದ ಕಲಿತಳು. ಅವಳದು ಅಸಾಧಾರಣ ಪ್ರತಿಭೆ. ಕೇವಲ ಸಿತಾರ್ ನುಡಿಸುವುದರಲ್ಲಿ ಮಾತ್ರವಲ್ಲ; ಬರವಣಿಗೆ, ಮಾಡೆಲಿಂಗ್ ಮುಂತಾದ ಕ್ಷೇತ್ರಗಳಲ್ಲಿ ಕೂಡ. ಅವಳು ಮಾಡುವುದನ್ನೆಲ್ಲಾ ಸೊಗಸಾಗಿ ಮಾಡುತ್ತಾಳೆ. ನನಗೆ ಅವಳ ಬಗ್ಗೆ ಹೆಮ್ಮೆಯಾಗುತ್ತದೆ. ಅವಳು ಅದ್ಭುತವಾದ ಸಂಗೀತಗಾರ್ತಿ. ಅವಳು ನುಡಿಸುವಾಗ ಅವೆಲ್ಲಾ ನನ್ನಿಂದ ಪಡೆದದ್ದು ಅನ್ನಿಸುತ್ತದೆ. ಪ್ರತಿಯೊಬ್ಬರಿಗೂ ಅವರದೇ ಅದ ಸ್ವಂತಿಕೆಯೂ ಇರುತ್ತದೆ. ಅವಳಿಗೂ ಅದು ಧಾರಾಳವಾಗಿ ಇದೆ. ಅವಳ ಜೊತೆ ನುಡಿಸುವಾಗ ಒಂದು ರೀತಿಯ ಸ್ಪೂತರ್ಿ ಸಿಗುತ್ತದೆ. ನಾನು ಸೃಜನಶೀಲತೆಯ ಉತ್ತುಂಗವನ್ನು ತಲುಪಿಬಿಡುತ್ತೇನೆ.

ಮುಂದಿನ ಜನ್ಮದಲ್ಲಿ ಏನಾಗಬಯಸುತ್ತೀರಿ?

ಮತ್ತೆ ಸಂಗೀತಗಾರ, ಅದೂ ಭಾರತೀಯ ಸಂಗೀತಗಾರನಾಗಿ ಹುಟ್ಟಬೇಕೆಂದು ಬಯಸುತ್ತೇನೆ. ಆದರೆ ಇಷ್ಟೊಂದು ಸೋಮಾರಿಯಾಗಿರಬಾರದು. ಚಿಕ್ಕ ವಯಸ್ಸಿನಲ್ಲೇ ಪ್ರಾರಂಭಿಸಿ ಹೆಚ್ಚು ಕಷ್ಟಪಟ್ಟು ಇನ್ನೂ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗಬೇಕು. ಈ ಬದುಕಿನಲ್ಲಿ ಸಾಧಿಸಿದ್ದು ನನ್ನ ನೆನಪಿನಲ್ಲಿ ಉಳಿದಿರುವುದು ಸಾಧ್ಯವಾಗಿ (ನಗುತ್ತಾರೆ), ಅದನ್ನು ಮುಂದುವರೆಸಿಕೊಂಡು ಹೋಗುವುದಕ್ಕಾದರೆ ನಾನು ಸಂಗೀತಗಾರನಾಗಿಯೇ ಮುಂದುವರೆಯಲು ಬಯಸುತ್ತೇನೆ.

 ಇಷ್ಟೆಲ್ಲಾ ಸಾಧಿಸಿದ ಮೇಲೂ, ಈ ಇಳಿವಯಸ್ಸಿನಲ್ಲಿಯೂ, ಪ್ರತಿದಿನವೂ
ನಿಮ್ಮನ್ನು ಸಾಧನೆಗೆ ಪ್ರೇರೇಪಿಸುವ ಶಕ್ತಿ ಯಾವುದು?

ಸಂಗೀತವೇ ಅನ್ನಿಸುತ್ತದೆ. ಅದೇ ನನ್ನ ಸರ್ವಸ್ವ. ಅದೇ ನನಗೆ ಮುಖ್ಯವಾದದ್ದು. ಇಷ್ಟು ವರ್ಷಗಳ ನಂತರವೂ ನನ್ನನ್ನು ಜೀವಂತವಾಗಿಟ್ಟಿರುವುದು ನನ್ನ ಸಂಗೀತವೇ.

ಸಂಗೀತದ ಭವಿಷ್ಯದ ಬಗ್ಗೆ ನಿಮಗೇನನ್ನಿಸುತ್ತದೆ?


ನಾನು ತುಂಬಾ ಆಶಾವಾದಿ. ನನಗೆ ನಮ್ಮ ಸಂಗೀತದ ಭವಿಷ್ಯದ ಬಗ್ಗೆ ಭರವಸೆಯಿದೆ. ಆದರೆ ಈ ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳಿಂದ ನಾಳೆ ಏನಾಗುತ್ತದೆ ಅಂತ ಯಾರಿಗೆ ಗೊತ್ತು? ಕಾರು, ಟ್ರಕ್ಕು, ಆಟೋ ಇತ್ಯಾದಿಗಳ ಹೊಗೆಯಿಂದ ಆಗುತ್ತಿರುವ ಪರಿಸರಮಾಲಿನ್ಯದಿಂದ ಹೆಚ್ಚುತ್ತಿರುವ ಅಸ್ತಮ, ಮಿದುಳು ಕ್ಯಾನ್ಸರ್ ಇತ್ಯಾದಿ ಖಾಯಿಲೆಗಳಿಂದ ಜನ ಸಾಯುತ್ತಿದ್ದಾರೆ. ಇವು ನನಗೆ ನಿಜವಾಗಿಯೂ ಗಾಬರಿಹುಟ್ಟಿಸುತ್ತಿದೆ. ವಾಸ್ತವವಾಗಿ ಸಂಗೀತಕ್ಕೆ ಸಂಬಂಧಿಸಿದಂತೆ ನನಗೆ ಯಾವ ಹೆದರಿಕೆಯೂ ಇಲ್ಲ. ಈ ತಲೆಮಾರಿನ ಯುವಕರಲ್ಲಿ ಅಸಾಧಾರಣ ಪ್ರತಿಭೆ ಇದೆ, ಸ್ವಲ್ಪ ತಾಳ್ಮೆ ಬೇಕು ಅಷ್ಟೆ. ಬೇಗ ಪ್ರಸಿದ್ಧರಾಗಿಬಿಡಬೇಕೆಂಬ ಆತುರ ಇರಬಾರದು. ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರತಿಭಾವಂತ ಮಕ್ಕಳಿದ್ದಾರೆ. ಪ್ರತಿಭಾ ಪ್ರದರ್ಶನಗಳಲ್ಲಿ ಅವರ ಅಸಾಧ್ಯ ಪ್ರತಿಭೆಯನ್ನು ಕಂಡು ನಾನು ಬೆರಗಾಗಿಬಿಟ್ಟಿದ್ದೇನೆ. ಶಾಸ್ತ್ರೀಯ ಸಂಗೀತವನ್ನು ಶಶುವಿಹಾರದಿಂದಲೇ ಕಲಿಸಬೇಕು. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಶಿಶುಗೀತೆಯನ್ನು ರಾಗವಾಗಿ, ಲಯಬದ್ಧವಾಗಿ ಹೇಳಿಕೊಡುವಾಗ ಯಾವ ಮಗು ಆ ಬಗ್ಗೆ ಒಲವು ತೋರಿಸುತ್ತದೋ ಅದಕ್ಕೆ ಶಾಸ್ತ್ರೀಯ ಸಂಗೀತವನ್ನು ಕಲಿಸಲು ಆರಂಭಿಸಬಹುದು. ಆಮೇಲೆ ನುರಿತ ಗುರುವಿಂದ ಪಾಠ ಕಲಿಸಬಹುದು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.