ಸಂಜಯ್ ಸುಬ್ರಮಣ್ಯಂ, ಸಂದರ್ಶನ ಆಧಾರಿತ ಲೇಖನದ ಕೊನೆಯ ಭಾಗ

 In RAGAMALA

ಇಂಗ್ಲಿಷ್ ಮೂಲ : ಲಕ್ಷ್ಮೀ ಆನಂದ್ ಹಿಂದೂ ಪತ್ರಿಕೆಯ ಲೇಖನ

ಕನ್ನಡ ಭಾವಾನುವಾದ: ಶಶಿಧರ ಡೋಂಗ್ರೆ

 

ಸಭಾ ಮರ್ಯಾದೆ ಏನು ಎನ್ನುವುದನ್ನು ಅವರನ್ನು ನೋಡಿ ತಿಳಿಯಬೇಕು, ಎನ್ನುತ್ತಾರೆ ವರದರಾಜನ್.  ಸಭೆಗೆ ಯಾವಾಗಲೂ ಮೊದಲೇ ಬಂದು ಕಾರ್ಯಕ್ರಮವನ್ನು ಕರಾರುವಾಕ್ಕಾಗಿ ಪ್ರಾರಂಭಿಸುತ್ತಾರೆ. ಸಂಜಯ್ ಅವರು ಮೊದಲಿಗೆ ಪಿಟೀಲು ಅಭ್ಯಾಸ ಮಾಡಿದ್ದರಿಂದ, ಉನ್ನತ ಮಟ್ಟದ ವಾದ್ಯಗಾರರಾಗುವುದಕ್ಕೆ ಬೇಕಾದ ಪರಿಶ್ರಮದ ಅರಿವು ಅವರಿಗೆ ಚೆನ್ನಾಗಿದೆ.  ನೀವು ಪಿಟೀಲಿಗೆ ಬದಲಾಗಿ ಹಾಡುಗಾರಿಕೆಯನ್ನು ಆರಿಸಿಕೊಂಡಿದ್ದಕ್ಕೆ ಸಂತೋಷವಿದೆಯೇ ಎಂಬ ಪ್ರಶ್ನೆಗೆ, ನನಗೆ ಅದರ ಬಗ್ಗೆ ಅತೀವ ಸಂತೋಷವಿದೆ.  ಪಿಟೀಲಿನ ಮೇಲೆ ಪ್ರಭುತ್ವ ಸಾಧಿಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು.  ನಾನೇನಾದರೂ ಪಿಟೀಲನ್ನೇ ಮುಂದುವರಿಸಿದ್ದರೆ, ಒಂದಾದರೆ ಕೆಟ್ಟ ಇಲ್ಲದಿದ್ದರೆ ಹೆಚ್ಚೆಂದರೆ ಮಧ್ಯಮ ಶ್ರೇಣಿಯ ಕಲಾವಿದನಾಗುತ್ತಿದ್ದೆ ಮತ್ತು ಸಂಗೀತವನ್ನು ಬಿಟ್ಟು ಬೇರೇನಾದರೂ ವೃತ್ತಿಯನ್ನು ಆರಿಸಿಕೊಳ್ಳುತ್ತಿದ್ದೆ.  ಒಬ್ಬ ಹಾಡುಗಾರ ದಿನವೂ ಹಾಡಿ ಅಭ್ಯಾಸ ಮಾಡಿದರೆ, ವಾದ್ಯಗಾರರು ಅದರ ಎರಡು ಪಟ್ಟು ಅಭ್ಯಾಸ ಮಾಡಬೇಕಾಗುತ್ತದೆ. ಸಂಜಯ್ ಸುಬ್ರಹ್ಮಣ್ಯಂ ಮುವತ್ತು ವರ್ಷಗಳಿಂದ ಹಾಡುತ್ತಿದ್ದಾರೆ ಮತ್ತು ಈ ದೀರ್ಘ ಅವಧಿಯಲ್ಲಿ ತಮ್ಮ ಉತ್ಸಾಹಭರಿತ ಶಾರೀರವನ್ನು ಸರಿ ಸುಮಾರು ಒಂದೇ ಮಟ್ಟದಲ್ಲಿ ಕಾಪಾಡಿಕೊಂಡು ಬಂದಿದ್ದಾರೆ.  ಒಬ್ಬ ಹಾಡುಗಾರ ದಿನವೂ ಹಾಡಲೇಬೇಕು.  ಕೆಲವರಿಗೆ ಅಭ್ಯಾಸವಿಲ್ಲದೆಯೇ ಒಳ್ಳೆಯ ಶಾರೀರವಿರಬಹುದು. ಅದು ಬಹುಮಟ್ಟಿಗೆ ವಂಶವಾಹಿಯೇ ಕಾರಣ ಮತ್ತು ಅದು ವಿರಳ ಕೂಡ.  ಸಾಧಾರಣವಾಗಿ ಹೇಳುವುದಾದರೆ, ಒಂದು ತಿಂಗಳಿನಲ್ಲಿ, ಒಂದೋ ಎರಡೋ ದಿನ ಹಾಡದೆ ಇರಬಹುದು. ಅದಕ್ಕಿಂತ ಹೆಚ್ಚಾಗಬಾರದು.  ಅಂತಿಮವಾಗಿ ನಮ್ಮ ಕಂಠ ನಮ್ಮ ಶರೀರದ ಒಂದು ಭಾಗ.  ಬೇರೆ ಎಲ್ಲ ಅಂಗಗಳಂತೆಯೇ ಅದಕ್ಕೂ ಸ್ವಲ್ಪ ವಿಶ್ರಾಂತಿ ಬೇಕು.  ನಿರಂತರತೆ ಮುಖ್ಯ ಆದರೆ ವಿಶ್ರಾಂತಿಯೂ ಅಷ್ಟೇ ಮುಖ್ಯ.  ಜಿಮ್‌ನಲ್ಲಿ ತೂಕಗಳ ಜೊತೆ ಅಭ್ಯಾಸ ನಡೆಸುವಾಗ ವಿಶ್ರಾಂತಿ ಬೇಕಾಗುವಂತೆಯೇ  ಇದು ಎನ್ನುತ್ತಾರೆ.

ಸಂಜಯ್ ಅವರು ತಮಗೆ ಯಾವ ರೀತಿಯ ಸಾಧಕ ಸರಿಹೋಗುತ್ತದೆಂಬುದನ್ನು ತಾವೇ ಪರೀಕ್ಷಿಸಿ ಕಂಡುಕೊಂಡಿದ್ದಾರೆ.   ಡಿಸೆಂಬರ್ ಸೀಸನ್ ಕಷ್ಟದ್ದು. ಅದರಲ್ಲಿ ಯಾವ ಸಂಶಯವೂ ಬೇಡ. ಅಭ್ಯಾಸದ ಎಲ್ಲ ತರಹದ ಮಾದರಿಗಳನ್ನು ಪ್ರಯತ್ನಿಸಿ  ಬೆಳಿಗ್ಗೆ ಬೇಗ ಏಳುವುದು, ಅಭ್ಯಾಸವಿಲ್ಲದೆ ಹಾಡುವುದು, ಒಂದೇ ದಿನದಲ್ಲಿ ಎರಡು ಮೂರು ಕಛೇರಿಗಳಿಗೆ ಒಪ್ಪಿಕೊಳ್ಳುವುದು, ತಮ್ಮ ಕಂಠವನ್ನು ಬೇರೆ ಬೇರೆ ತರಹದ ವಾಯ್ಸ್ ಕಲ್ಚರ್‌ಗೆ ಗುರಿಪಡಿಸುವುದು ಇತ್ಯಾದಿ  ಈಗ ತಮಗೆ ಸರಿಹೊಂದುವ ನಿಯತ ಕ್ರಮವನ್ನು ಕಂಡುಕೊಂಡಿದ್ದಾರೆ.

ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಹಾಡಿರುವ ಸಂಜಯ್ ಚೆನ್ನೈ ನಲ್ಲಿರುವ ಅಮೇರಿಕಾದ ದೂತಾವಾಸದಲ್ಲಿ ನಡೆದ ಒಂದು ಘಟನೆಯನ್ನು ನೆನೆಸುತ್ತಾರೆ ನಾನು ನನ್ನ ವೀಸಾ ಮಾಡಿಸಲು ಹೋದಾಗ, ಅಲ್ಲಿನ ಅಧಿಕಾರಿ, ನನ್ನ ವೃತ್ತಿ ಏನೆಂದು ಕೇಳಿದರು. ನಾನು ಹಾಡುಗಾರ ಎಂದಾಗ, ಸ್ವಲ್ಪ ಹಾಡಿ ತೋರಿಸಿ ಎಂದರು.  ನಾನು ತಕ್ಷಣ ತೋಡಿ ರಾಗದ ಆಲಾಪನೆಯನ್ನು ಹಾಡಿದೆ. ಅವಳು ಯಾವುದಾದರೂ ಸಾಹಿತ್ಯವಿರುವ ಸಂಗೀತವನ್ನು ಹಾಡಬೇಕೆಂದು ಹೇಳಿದಾಗ, ನಾನು ತೋಡಿಯನ್ನು ಮುಂದುವರೆಸುತ್ತಾ ಕದ್ದನು ವಾರಿಕಿ ಹಾಡಿದೆ..  ಅವರ ಪಾಂಡಿತ್ಯ, ಸಾಹಿತ್ಯಕ್ಕಿಂತ ಆಲಾಪನೆಯಲ್ಲೇ ಹೆಚ್ಚು ಹೊಳೆಯುವುದೆಂದು ಆ ವೀಸಾ ಅಧಿಕಾರಿಗಾದರೂ ಹೇಗೆ ತಿಳಿಯಬೇಕು?

ಒಂದು ಸಲ ಸ್ಪೈನ್ ದೇಶದಲ್ಲಿ ವರದರಾಜನ್ ನೀಲಾಂಬರಿ ನುಡಿಸುತ್ತಿದ್ದಾಗ ಮೈಕ್ ಪರೀಕ್ಷಕ ಇದೇನು ಮಕ್ಕಳ ಲಾಲಿ ಹಾಡೇ ಎಂದು ಕೇಳಿದನಂತೆ!.  ಚೆನ್ನೈನಲ್ಲಿ ಒಂದು ಸಲ ಒಬ್ಬ ಮಹಿಳೆ, ಇವರು ತೊಡುವ ಬಿಳಿ ಪಂಚೆ ಮತ್ತು ಅಂಗಿಯನ್ನು ನೋಡಿ, ಅದು ನಿಮ್ಮ ಪಾಂಡಿತ್ಯಕ್ಕೆ ಸರಿಹೊಂದುತ್ತಿಲ್ಲ ಎಂದು ಹೇಳಿದಳಂತೆ.

ಉನ್ನತ ತರಬೇತಿಗೆಂದು ಮಾತ್ರ ಶಿಷ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಂಜಯ್ ಶಿಷ್ಯರನೇಕರನ್ನು ಈಗ ಕಛೇರಿಗಳಲ್ಲಿ ಕಾಣಬಹುದು.  ಸಂದೀಪ್ ನಾರಾಯಣ್, ಸ್ವರ್ಣ ರೇತಸ್, ಪ್ರಸನ್ನ ವೆಂಕಟರಾಮನ್, ಆರ್ ರಾಘವೇಂದ್ರ, ಜೆ. ಎ. ಜಯಂತ್, ಭಾರದ್ವಾಜ್ ರಾಮನ್, ಭರತ್ ಕುಮಾರ್ (ಸುಗುಣಾ ವರದಾಚಾರಿಯವರ ಮಗ) ಮತ್ತು ರಾಹುಲ್ ಕೃಷ್ಣ (ಸ್ವರ್ಣ ರೇತಸ್ ಅವರ ತಮ್ಮ ಮತ್ತು ಸಂಜಯ್ ಕಛೇರಿಗಳಲ್ಲಿ ತಂಬೂರಿ ನುಡಿಸುವವರು)  ಇವರೆಲ್ಲರೂ ಸಂಗೀತ ಕ್ಷೇತ್ರದ ಉನ್ನತ ದರ್ಜೆಯ ಕಲಾವಿದರಾಗಿ ಹೊರಹೊಮ್ಮುತ್ತಿದ್ದಾರೆ.  ಇಷ್ಟೆಲ್ಲಾ ಆದರೂ, ಸಂಜಯ್ ತಮ್ಮನ್ನು ಮೊದಲಿಗೆ ಪ್ರದರ್ಶನ ಕಲಾವಿದನೆಂದೂ, ನಂತರ ಸಂಗೀತ ಗುರುವೆಂದೂ ನಂಬಿದ್ದಾರೆ.

ಸಂಜಯ್ ತಮ್ಮನ್ನು ಎಲ್ಲ ಬಗೆಯ ತಂತ್ರಜ್ಞಾನಗಳಿಗೂ ತೆರೆದುಕೊಂಡಿದ್ದಾರೆ.  ತುಂಬ ಹಿಂದೆ ಅವರು ಅಮೇರಿಕೆಗೆ ಹೋಗಿದ್ದಾಗ, ಅವರ ಸ್ನೇಹಿತರು ಒಂದು ಯೂಸ್ ನೆಟ್ ಗ್ರೂಪ್ ನ್ನು (Rec.Music.Indian.Classical) ಅವರಿಗೆ   ಪರಿಚಯಿಸುತ್ತಾ, ಸಂಗೀತಕ್ಕೆ ಮಾತ್ರ ಮೀಸಲಾದ ಒಂದು ವೆಬ್ ಸೈಟನ್ನು ಯಾಕೆ ಪ್ರಾರಂಭಿಸಬಾರದು ಎಂದರಂತೆ. ತಕ್ಷಣವೇ ಒಂದು ಡೊಮೈನನ್ನು ನೋಂದಣಿ ಮಾಡಿದರು. ಹೀಗೆ ಹುಟ್ಟಿದ್ದೇ sangeetham.com. ಬಹುಶಃ ಕರ್ನಾಟಕ ಸಂಗೀತಕ್ಕೆಂದೇ ಮೀಸಲಾದ ಪ್ರಥಮ ವೆಬ್ ಸೈಟ್ ಅದು. ಅದನ್ನು ಸಂಜಯ್ ಮತ್ತು ಇತಿಹಾಸಕಾರ ವಿ. ಶ್ರೀರಾಂ ಪ್ರಾರಂಭಿಸಿದ್ದರು. ಆದರೆ, ಹಣಕಾಸಿನ ತೊಂದರೆಯಿಂದ  ೨೦೦೬ ರಲ್ಲಿ ಅದನ್ನು ಮುಚ್ಚಲಾಯಿತು.

ಆನ್‌ಲೈನ್ ಮುಖಾಂತರ ಸಂಗೀತದ ಆಲ್ಬಂಗಳನ್ನು ಮಾರುವ ಮೊದಲಿಗರಲ್ಲಿ ಸಂಜಯ್ ಒಬ್ಬರು. ೧೯೯೭ರಲ್ಲೇ mಠಿ೩.ಛಿom ಮುಖಾಂತರ ಪ್ರಾರಂಭಿಸಿದ ಅವರು ಇಂದಿಗೂ ಇಂಟರ್ನೆಟ್ ಮೂಲಕ ಸಂಗೀತವನ್ನು ಹರಡುವುದರಲ್ಲಿ ನಂಬಿಕೆ ಇರಿಸಿದ್ದಾರೆ.   ಯುಟ್ಯೂಬ್ ಮತ್ತಿತ್ತರ ಜಾಲತಾಣಗಳು ಸಂಗೀತಕ್ಕೆ ಮಾರಕವೆಂಬ ನಂಬಿಕೆಗಳು ಇನ್ನೂ ಇರುವಾಗ, ಸಂಜಯ್ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. Gumroad ಮುಖಾಂತರ ತಮ್ಮ ಸಂಗೀತವನ್ನು ಕೇಳುಗರಿಗೆ ತಲುಪಿಸುವ ಪ್ರಕ್ರಿಯೆಯನ್ನು ಅವರು ನಿರಂತರವಾಗಿ ಪೋಷಿಸಿದ್ದಾರೆ.

ಯುವಕರಲ್ಲಿ ಶಾಸ್ತ್ರೀಯ ಸಂಗೀತದ ಆಸಕ್ತಿಯನ್ನು ಹೆಚ್ಚಿಸುವುದೋಸ್ಕರ ಪ್ರಾರಂಭಿಸಲಾದ ಯುತ್ ಅಸೋಸಿಯೇಷನ್ ಆಫ್ ಕ್ಲಾಸಿಕಲ್ ಮ್ಯೂಸಿಕ್ (YACM ನ ಪ್ರಾರಂಭದ ಸದಸ್ಯರಲ್ಲಿ ಸಂಜಯ್ ಕೂಡ ಒಬ್ಬರಾಗಿದ್ದರು.  ಈ ಸಂಸ್ಥೆ ೧೯೮೦ ರ ಮಧ್ಯಭಾಗದಿಂದ ೧೯೯೫ ರವರೆಗೂ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು.  ಅವರ ವಯಸ್ಸಿನ ಕಲಾವಿದರೆಲ್ಲರೂ ಈ ಸಂಘದ ಸದಸ್ಯರಾಗಿದ್ದರು.   ಬಿ ಕಣ್ಣನ್, ಆರ್ ಕೆ ಶ್ರೀರಾಮ್ ಕುಮಾರ್, ಪಿ. ಉನ್ನಿಕೃಷ್ಣನ್, ವಿಜಯ ಶಿವ, ಮನೋಜ್ ಶಿವ, ಕೆ ಅರುಣ್ ಪ್ರಕಾಶ್, ವರಲಕ್ಷ್ಮಿ ಆನಂದಕುಮಾರ್, ಗಾಯತ್ರಿ ವೆಂಕಟರಾಘವನ್ ಮತ್ತು ಬಾಲಾಜಿ ಶಂಕರ್.  ಙಂಅಒ  ಇಂದಾಗಿಯೇ ಇವರೆಲ್ಲ ಸಂಗೀತವನ್ನು ನಿಷ್ಠೆಯಿಂದ, ಗಂಭೀರವಾಗಿ ಅಭ್ಯಾಸ ಮಾಡಿದರು ಎನ್ನುವುದು ಸಂಜಯ್ ಅಭಿಮತ.    ಇದ್ದುದರಿಂದ ನಾವು ಯಾರೂ ಸಭಾಗಳನ್ನು ಕೇಳಬೇಕಾಗಿರಲಿಲ್ಲ.  ಸಭಾಗಳೇ YACM ನ ಪಟ್ಟಿಯನ್ನು ತೆಗೆದುಕೊಂಡು ನಮ್ಮನ್ನು ಆಹ್ವಾನಿಸುತ್ತಿದ್ದರು ಮತ್ತು ಬೇರೆಯವರಿಗೂ ಹೇಳುತ್ತಿದ್ದರು.  ಈ ಸಂಘದಲ್ಲಿ ವೃತ್ತಿಪರರೂ, ಹವ್ಯಾಸಿಗಳೂ ಇದ್ದುದರಿಂದ ಸಂಘ ಬಹುಮಟ್ಟಿಗೆ ನಿಷ್ಪಕ್ಷಪಾತದಿಂದ ನಡೆಯುತ್ತಿತ್ತು ಮತ್ತು ನಮ್ಮ  ನಮ್ಮ ಅಹಮಿಕೆಗಳು ಕೂಡ ಒಂದು ಹಂತ ಮೀರದಂತೆ ಕೆಲಸ ಮಾಡಿತ್ತು ಎನ್ನುತ್ತಾರೆ ಸಂಜಯ್.

ಡಿಸೆಂಬರ್ ಸೀಸನ್ ಬಗ್ಗೆ ಮಾತನಾಡುತ್ತಾ, ಇದು ಕರ್ನಾಟಕ ಸಂಗೀತಕ್ಕೆ ಅತಿ ದೊಡ್ಡ ಕೊಡುಗೆ ಎಂದು ನಾನು ನಂಬುತ್ತೇನೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ.  ಒಂದೊಂದು ಸಭಾ ಕಾರ್ಯಕ್ರಮಕ್ಕೂ ಬರುವ ಪ್ರೇಕ್ಷಕರನ್ನು ನೋಡುವುದೇ ಒಂದು ಸುಂದರ ಅನುಭವ.  ಇನ್ನೊಂದು ಒಳ್ಳೆಯ ಬೆಳವಣಿಗೆಯೆಂದರೆ ಕಛೇರಿಯನ್ನು ಕೊಡಲು, ಇಂದಿನ ಯುವಕರ ಅಂಜದಿರುವ ಗುಣ ಮತ್ತು ನಿರ್ಭಯತೆ.  ನಾನು   ಆ ವಯಸ್ಸಿನಲ್ಲಿದ್ದಾಗ ಕಛೇರಿ ಕೊಡುವುದೆಂದರೆ ಟೆಸ್ಟ್ ಮ್ಯಾಚ್ ಆಡಿದಂತೆ. ಏನಾಗುವುದೋ ಎಂಬ ಭಯ.  ಆದರೆ ಇಂದಿನ ಯುವಕರು ಅದನ್ನು ಮಾಮೂಲಿನ ಕೆಲಸ ಎಂಬಂತೆ ತೆಗೆದುಕೊಳ್ಳುವುದು ನಿಜಕ್ಕೂ ಸಂತಸ ತರುತ್ತದೆ.  ಆದರೆ ಈ ಸೀಸನ್ ಬರೇ ಚೆನ್ನೈನಲ್ಲಿ ಮಾತ್ರ ಇದ್ದು, ಬೇರೆ ಕಡೆ, ಮುಖ್ಯವಾಗಿ ದೇವಸ್ಥಾನಗಳಲ್ಲಿ ಸಂಗೀತದ ಸ್ಥಾನ ಕಳೆದುಹೋಗುತ್ತಿರುವುದು ವಿಷಾದದ ಸಂಗತಿ ಎನ್ನುತ್ತಾರೆ ಸಂಜಯ್.

ತಮ್ಮ ಸಂಗೀತವನ್ನು ಕೇಳುವ ರಸಿಕರ ಜೊತೆ ಸಂಜಯ್ ನೇರ ಸಂಬಂಧವನ್ನು ಬೆಳೆಸಿಕೊಳ್ಳುವುದಕ್ಕೆ ಹಲವಾರು ಮಾಧ್ಯಮಗಳನ್ನು ಆರಿಸಿಕೊಂಡಿದ್ದಾರೆ sanjaysub.blogspot.com ಫೇಸ್‌ಬುಕ್ sanjaysubmusic,, ಟ್ವಿಟರ್‌ನ ಹ್ಯಾಂಡಲ್ #sಚಿಟಿರಿಚಿಥಿsub ಮತ್ತು  Gumroad ಜನ ಸದಸ್ಯರ ಜೊತೆ ಮಿಂಚಂಚೆಯ ಸಂಬಂಧ ಇಟ್ಟುಕೊಂಡಿದ್ದಾರೆ.  ಈ ನಡುವೆ ಒಂದು ಹೊಸ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಅದೇನೆಂದರೆ ಎಲ್ಲ ಮೇಳಕರ್ತ ರಾಗಗಳಲ್ಲಿ ಹಾಡುವುದು.  ಈಗಾಗಲೇ ೫೭ ರಾಗಗಳನ್ನು ಬೇರೆ ಬೇರೆ ಅಂಗಗಳ ಮೂಲಕ ಹಾಡಿದ್ದಾರೆ. ರಾಗ, ತಾನ, ಪಲ್ಲವಿ, ವಿರುತ್ತಂಗಳು, ರಾಗಮಾಲಿಕೆ ಮತ್ತು ತುಕಡಾಗಳು. ಇದಾದ ಮೇಲೆ ಎಲ್ಲಾ ಮೇಳಕರ್ತ ರಾಗಗಳನ್ನು ಕೃತಿಗಳ ಮೂಲಕವೇ ಪ್ರಸ್ತುತಪಡಿಸುವ ಇಚ್ಛೆಯಿದೆ.

ಅವರ ಕೊನೆಯ ಮಾತು ಇದುವರೆಗಿನ ನನ್ನ ಸಮಯವನ್ನು ಬಹು ಮಟ್ಟಿಗೆ ಸಂಗೀತಕ್ಕೆ ಮೀಸಲಿಟ್ಟಿದ್ದೇನೆ. ಈ ಕಲೆಗೆ ನ್ಯಾಯ ಒದಗಿಸಲು, ಈ ತರಹ ಸಮಯವನ್ನು ಮೀಸಲಿಡಲೇಬೇಕು ಎನ್ನುವುದು ನನ್ನ ಖಚಿತ ಅಭಿಪ್ರಾಯ.  ನಾನು ಸಂಗೀತವನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳಲು ಸಹಾಯ ಮಾಡಿದ ಸಮಾಜಕ್ಕೂ ನಾನು ಋಣಿ.  ನಾನು ನನ್ನ ಕೇಳುಗರನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಲಾರೆ

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.