ಟ್ಯಾಂಕರ್ ಹಾಗೂ ದಾಹ

 In SUTTA MUTTA

 

images

 

ಕಬ್ಬು, ಭತ್ತ ಎಲ್ಲಾ ಬದಿಗಿಡಿ. ‘ದಾಹ’ ಈ ಕಾಲದ ಅತಿದೊಡ್ಡ ಫಸಲು. ಮನುಷ್ಯನ ಹಾಗೂ ಕೈಗಾರಿಕೆಯ ದಾಹ ಎಲ್ಲವನ್ನೂ ಮೀರಿಸಿಬಿಟ್ಟಿದೆ. ಇದನ್ನು ಬೆಳೆಯುತ್ತಿರುವವರು ಪ್ರತಿದಿನವೂ ಲಕ್ಷಾಂತರ ರೂಪಾಯಿಗಳನ್ನು  ಗೋರಿಕೊಳ್ಳುತ್ತಿದ್ದಾರೆ.  ರಸ್ತೆಯುದ್ದಕ್ಕೂ ರಾಶಿಗಟ್ಟಲೆ ಕಬ್ಬು ಒಣಗಿ ಬಿದ್ದಿದೆ. ಕೊಳ್ಳುವರಿಲ್ಲದೆ ಇದು ಎಲ್ಲೋ ಒಂದು ಕಡೆ ಆಕಳ ಮೇವಾಗಿಬಿಡಬಹುದು. ಅದೇ ರಸ್ತೆಯಲ್ಲಿ ಲೆಕ್ಕವಿಲ್ಲದಷ್ಟು ‘ಟ್ಯಾಂಕರ್’ಗಳು ಅಲ್ಲಿಂದ ಇಲ್ಲಿಗೆ ಓಡಾಡುತ್ತಿವೆ. ಪಟ್ಟಣ, ಹಳ್ಳಿ ಹಾಗೂ ಕೈಗಾರಿಕೆಗಳಿಗೆ ನೀರನ್ನು ಸಾಗಿಸುತ್ತಾ ಲಕ್ಷಾಂತರ ಲಾಭ ಮಾಡುತ್ತಿವೆೆ. ಇದು ಎಲ್ಲಾ ಕಡೆ ಕಾಣುತ್ತಿರುವ ಸಾಮಾನ್ಯ ದೃಶ್ಯ.  ಇಂದು ನೀರಿನ ಮಾರುಕಟ್ಟೆ ನಮ್ಮ ಸುತ್ತಮುತ್ತಲ ಅತಿದೊಡ್ಡ ಉದ್ಯಮ. ‘ಟ್ಯಾಂಕರ್’ ಅದರ ಲಾಂಛನ.
ಅಂತಹ ಸಾವಿರಾರು ಟ್ಯಾಂಕರ್ಗಳು ಮರಾಠವಾಡದ ರಸ್ತೆಯಲ್ಲಿ ಪ್ರತಿದಿನ ಓಡಾಡುತ್ತಿವೆ.  ನೀರನ್ನು ಸಂಗ್ರಹಿಸುತ್ತಾ, ಸಾಗಿಸುತ್ತಾ ಹಾಗೂ ಮಾರುತ್ತಾ ಸಾಗಿವೆೆ. ಇವುಗಳಲ್ಲಿ ಸಕರ್ಾರದ ಟ್ಯಾಂಕರಗಳು ತುಂಬಾ ಕಡಿಮೆ. ಕೇವಲ ದಾಖಲೆಗಳಲ್ಲಿ ಮಾತ್ರ ಕೆಲವನ್ನು ಕಾಣಬಹುದು. ಉಳಿದಂತೆ ಸಿಂಹಪಾಲು ಖಾಸಗಿಯವರದ್ದು. ನೀರಿನ ಮಾರುಕಟ್ಟೆಯ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ಈ ಖಾಸಗಿ ಜನರದ್ದೇ.
ಕಾಂಟ್ರಾಕ್ಟರುಳಾಗಿರುವ ಶಾಸಕರು ಹಾಗೂ ಕಾಪರ್ೊರೇಟರುಗಳು ಮತ್ತು ಶಾಸಕರು ಹಾಗೂ ಕಾಪರ್ೋರೇಟರುಗಳಾಗಿರುವ ಕಾಂಟ್ರಾಕ್ಟರುಗಳು ಈ ಟ್ಯಾಂಕರ್ ಆಥರ್ಿಕತೆಯ ಪ್ರಮುಖ ಪಾತ್ರದಾರಿಗಳು. ಇದರಲ್ಲಿ ಅಧಿಕಾರಶಾಹಿಗಳೂ ಇದ್ದಾರೆ. ಇವರಲ್ಲಿ ಕೆಲವರಿಗೆ ಸ್ವಂತದ ಟ್ಯಾಂಕರುಗಳಿವೆ,  ಇನ್ನು ಉಳಿದವು  ಬೇನಾಮಿ.
ನೀರಿನ ವಾಣಿಜ್ಯ:
ಏನಿದು ಟ್ಯಾಂಕರ್?  ವಾಸ್ತವದಲ್ಲಿ ಇದು ಮೆದು ಉಕ್ಕಿನ ಹಾಳೆಗಳನ್ನು ಬಳಸಿ ಮಾಡಿದ ಡ್ರಮ್ಮುಗಳು.  ಸುಮಾರು 10,000 ಲೀಟರ್ ನೀರಿನ ಒಂದು ಟ್ಯಾಂಕರ್ಗೆ 5 ಅಡಿ ಉದ್ದ, 15 ಅಡಿ ಅಗಲದ ಮೂರು ಉಕ್ಕಿನ ಶೀಟ್ ಬೇಕಾಗುತ್ತದೆ. ಈ ಡ್ರಮ್ಮುಗಳನ್ನು ಸಾಮಾನ್ಯವಾಗಿ ಟ್ರಕ್ಕುಗಳು, ಲಾರಿಗಳು ಅಥವಾ ಇತರ ದೊಡ್ಡ ವಾಹನಗಳಿಗೆ ಜೋಡಿಸಿ ಸಾಗಿಸುತ್ತಾರೆ. ಅದಕ್ಕಿಂತ ಚಿಕ್ಕದಾದ 5000 ಲೀಟರ್ ನೀರಿನ ಡ್ರಮ್ಮುಗಳಾದರೆ ಒಂದು ವ್ಯಾನಿನ ಟ್ರೇಲರ್ನಲ್ಲೇ ಸಾಗಿಸಬಹುದು.  ಇಷ್ಟು ದೊಡ್ಡದರಿಂದ ಟ್ರಾಕ್ಟರ್ನಲ್ಲಿ ಇಟ್ಟುಕೊಂಡು ಹೋಗಬಹುದಾದ 500 ಲೀಟರ್ ನೀರು ಹಿಡಿಯುವ ಸಣ್ಣ ಡ್ರಮ್ಮುಗಳವರೆಗೆ ಅನೇಕ ಗಾತ್ರದ ಡ್ರಮ್ಮುಗಳು ಸಿಗುತ್ತವೆ. ಇವನ್ನು ಆಟೋದಲ್ಲಿ ಅಥವಾ ಎತ್ತಿನಗಾಡಿಯಲ್ಲೂ ಇಟ್ಟುಕೊಂಡು ಹೋಗಬಹುದು.
ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಾಗೆ ಈ ಡ್ರಮ್ಮುಗಳ ಉತ್ಪಾದನೆಯೂ ಹೆಚ್ಚುತ್ತಿದೆ. ಆಂಧ್ರವೊಂದರಲ್ಲೇ ಪ್ರತಿದಿನ ಇಂತಹ ನೂರಾರು ಡ್ರಮ್ಮುಗಳು ತಯಾರಾಗುತ್ತಿವೆ. ಜಲ್ನಾ ಜಿಲ್ಲೆಯ ಜಲ್ನಾ ಪಟ್ಟಣವೊಂದರಲ್ಲೇ ಸುಮಾರು ಇಂತಹ 1200 ಟ್ಯಾಂಕರುಗಳು ಇವೆ. ಆಟೋರಿಕ್ಷಾದಿಂದ ಹಿಡಿದು ಟ್ರಕ್ವರೆಗೆ ವಿಭಿನ್ನ ವಾಹನಗಳಲ್ಲಿ ನೀರಿಗಾಗಿ ಹಪಹಪಿಸುತ್ತಿರುವವರಿಗೆ ನೀರನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ. ದಾರಿಯುದ್ದಕ್ಕೂ   ಗ್ರಾಹಕರೊಂದಿಗೆ ಮೊಬೈಲಿನಲ್ಲಿ ಡ್ರೈವರುಗಳ ಚೌಕಾಸಿ ನಡೆಯುತ್ತಲೇ ಇರುತ್ತದೆ.  ಇದರಲ್ಲಿ ನೀರಿನ ಸಿಂಹಪಾಲು ಕೈಗಾರಿಕೆಗೆ ಹೋಗುತ್ತದೆ.  ಅವರು ಅದನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಟ್ಯಾಂಕರಿನ ಮಾಲೀಕರು ಪ್ರತಿದಿನ 60 ಲಕ್ಷದಿಂದ 75 ಲಕ್ಷ ರೂಪಾಯಿವರೆಗೆ ಈ ವಹಿವಾಟಿನಲ್ಲಿ ಸಂಪಾದಿಸುತ್ತಾರೆ ಎನ್ನುತ್ತಾರೆ ‘ಲೋಕಸತ್ತಾ’ ದಿನಪತ್ರಿಕೆಯ ಲಕ್ಷ್ಮಣ್ ರಾವುತ್.  ಇದಿಷ್ಟೂ ಕೇವಲ ಈ ಪಟ್ಟಣವೊಂದರ ವಹಿವಾಟು. ರಾವುತ್ ಹಾಗೂ ಅವನ ಜೊತೆಯ ವರದಿಗಾರರು ಹಲವು ವರ್ಷಗಳಿಂದ ಈ ಪ್ರಾಂತ್ಯದ ವಾಣಿಜ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾರೆ.
ಟ್ಯಾಂಕರ್ ತಂತ್ರಜ್ಞಾನ
ಟ್ಯಾಂಕರ್ಗಳ ಗಾತ್ರ ಬೇರೆ ಬೇರೆ ಇರುತ್ತದೆ.  ಆದರೆ ಈ ನಗರದಲ್ಲಿ ಅದರ ಸರಾಸರಿ ಪ್ರಮಾಣ 5000 ಸಾವಿರ ಲೀಟರ್ ಗಾತ್ರದ್ದು. ಈ 1200 ಟ್ಯಾಂಕರುಗಳು ದಿನಕ್ಕೆ ಕನಿಷ್ಟ ಮೂರು ಟ್ರಿಪ್ಗಳು ಓಡುತ್ತವೆ.  ಅಂದರೆ ಅವು ಒಟ್ಟಾರೆಯಾಗಿ 18 ಮಿಲಿಯನ್ ಲೀಟರ್ ನೀರನ್ನು 24 ಗಂಟೆಗಳಲ್ಲಿ ಸಾಗಿಸುತ್ತವೆ. ಈಗ ಚಾಲ್ತಿಯಲ್ಲಿರುವ ದರದಲ್ಲಿ ಅಂದರೆ ಸಾವಿರ ಲೀಟರಿಗೆ 350ರಂತೆ ಲೆಕ್ಕ ಹಾಕಿದರೆ 6 ಮಿಲಿಯನ್ ರೂಪಾಯಿಗಳಷ್ಟಾಗುತ್ತದೆ. ಅದು ಗೃಹಬಳಕೆಗೋ, ಮೇವಿಗೋ ಅಥವಾ ಕೈಗಾರಿಕೆಗೋ ಎಂಬುದನ್ನು ಆಧರಿಸಿ ಲಾಭ ಇನ್ನು ಹೆಚ್ಚಾಗಬಹುದು.
ನೀರಿನ ಕೊರತೆಯೇ ಟ್ಯಾಂಕರ್ ಅಥರ್ಿಕತೆಯನ್ನು ಬೆಳೆಸುತ್ತಿದೆ.  ಹೊಸದಾಗಿ ಟ್ಯಾಂಕರುಗಳನ್ನು ತಯಾರುಮಾಡುತ್ತಿದ್ದಾರೆ.  ಹಳೆಯದರ ರಿಪೇರಿ ನಡೆಯುತ್ತಿದೆ ಹಾಗೂ ಇವು ಬಾಡಿಗೆಗೂ ಸಿಗುತ್ತವೆ. ಜಲ್ನಾಗೆ ಹೋಗುವ ಹಾದಿಯಲ್ಲಿ ಅಹಮದ್ನಗರ ಜಿಲ್ಲೆಯ ಪಕ್ಕದ ರಹೂರಿಯಲ್ಲಿ ಈ ಉದ್ದಿಮೆಗೆ ಬಿಡುವೇ ಇಲ್ಲ. 10,000 ಲೀಟರ್ ನೀರು ಹಿಡಿಯುವ ಒಂದು ಟ್ಯಾಂಕರ್ ಮಾಡಲು ಸುಮಾರು 30,000 ರೂಗಳಷ್ಟು ಖಚರ್ು ತಗಲುತ್ತದೆ. ಅದರ ಎರಡು ಪಟ್ಟು ಬೆಲೆಗೆ ಅದು ಮಾರಾಟವಾಗುತ್ತದೆ. ಒಂದು ಸಣ್ಣ ಕೈಗಾರಿಕಾ ಕ್ಷೇತ್ರವಾದ ರಾಹುರಿ ಫ್ಯಾಕ್ಟರಿಯಲ್ಲಿ ಟ್ಯಾಂಕರ್ ತಂತ್ರಜ್ಞಾನ ಕುರಿತಂತೆ ತರಬೇತಿಗೂ ವ್ಯವಸ್ಥೆಯಿದೆ. ಪ್ರತಿ 5 ಅಡಿ ಅಗಲ ಹಾಗೂ 18 ಅಡಿ ಉದ್ದದ ಕಬ್ಬಿಣದ ಶೀಟ್ 3.5 ಎಂ.ಎಂನಷ್ಟು ದಪ್ಪ ಇರುತ್ತದೆ. ಶ್ರೀಕಾಂತ್ ಮೆಲವಾನೆ ಇಂತಹ ಒಂದು ತಯಾರಿಕಾ ಘಟಕದ ಮಾಲಿಕ.  ಅವನು ರೋಲಿಂಗ್ ಯಂತ್ರಕ್ಕೆ ಕಬ್ಬಿಣದ ಹಾಳೆಗಳನ್ನು ಹೇಗೆ ಕೈಯಿಂದಲೇ ಸುತ್ತಬೇಕು ಎಂಬುದನ್ನು ವಿವರಿಸಿದ.  10000 ಲೀಟರ್ ಟ್ಯಾಂಕರ್ ಸುಮಾರಾಗಿ 800 ಕೆಜಿ ತೂಕ ಇರುತ್ತದೆ ಎಂದು ಆ ಬಗ್ಗೆ ವಿವರ ನೀಡಿದ. ಅದಕ್ಕೆ ಮೂರು ಮೆದು ಉಕ್ಕಿನ ಶೀಟ್ ಬೇಕಾಗುತ್ತದೆ, ಅದಕ್ಕೆ 27,000 ರೂಪಾಯಿಗಳಾಷ್ಟಾಗುತ್ತದೆ. ಕೂಲಿ, ವಿದ್ಯುತ್ ವೆಚ್ಚ ಮತ್ತು ಉಳಿಕೆ ವೆಚ್ಚ 3000 ಸಾವಿರದಷ್ಟಾಗುತ್ತದೆ.  10000 ಲೀಟರ್ ಟ್ಯಾಂಕ್ ಮಾಡೋದಕ್ಕೆ ಒಂದು ದಿನ ಬೇಕಾಗುತ್ತದೆ. ಈ ವರ್ಷ ತುಂಬಾ ಕೆಲಸ. ನಾವು ಮೂರು ತಿಂಗಳಲ್ಲಿ 150ಕ್ಕೂ ಹೆಚ್ಚು ಟ್ಯಾಂಕರ್ ಮಾಡಿದ್ದೇವೆ. ಸುಮಾರು ಒಂದು ಕಿಲೋಮೀಟರ್ ಸುತ್ತಳತೆಯಲ್ಲಿ ಇಂತಹ ನಾಲ್ಕು ಫ್ಯಾಕ್ಟರಿಗಳಿವೆ. ಅವು ಕೂಡ ಇದೇ ಪ್ರಮಾಣದಲ್ಲಿ ಟ್ಯಾಂಕರುಗಳನ್ನು ತಯಾರಿಸಿವೆ. 3 ಕಿಲೋಮೀಟರ್ ಸುತ್ತಳತೆಯಲ್ಲಿ ಇಂತಹ 15 ಫ್ಯಾಕ್ಟರಿಗಳು ಅಹಮದ್ನಗರದಲ್ಲಿ ಇದೇ ಕೆಲಸ ಮಾಡುತ್ತಿವೆ.
ತುಂಬಾ ದೊಡ್ಡ ಟ್ಯಾಂಕ್ ಎಂದರೆ 20,000 ಲೀಟರ್ ನೀರು ಹಿಡಿಯುವುದು. ಇದು ಸಾಮಾನ್ಯವಾಗಿ ದನದ ಕ್ಯಾಂಪುಗಳಿಗೆ ಹಾಗೂ ಕೈಗಾರಿಕಾ ಘಟಕಗಳಿಗೆ ಹೋಗುತ್ತವೆ. 10,000 ಲೀಟರ್ ಟ್ಯಾಂಕರುಗಳು ನಗರಗಳಿಗೆ ಹಾಗೂ ದೊಡ್ಡ ಪಟ್ಟಣಗಳಿಗೆ ಸರಬರಾಜಾಗುತ್ತದೆ. ನಾನು ಮಾಡಿರುವುದರಲ್ಲಿ ಸಣ್ಣದೆಂದರೆ 1000ಲೀಟರ್ ಸಾಮಥ್ರ್ಯದ್ದು. ಸಣ್ಣದ್ದನ್ನು ಸಣ್ಣ ತೋಟಗಾರಿಕೆಯವರು ಬಳಸುತ್ತಾರೆ. ತುಂತುರು ನೀರಾವರಿ ಮಾಡುವ ಸಾಮಥ್ರ್ಯವಿಲ್ಲದ ಸಣ್ಣ ದಾಳಿಂಬೆ ಬೆಳೆಗಾರರಂತವರು ಇದನ್ನು ಬಳಸುತ್ತಾರೆ. ಇದನ್ನು ಅವರು ಎತ್ತಿನಗಾಡಿಯಲ್ಲಿ ಇಟ್ಟುಕೊಂಡು  ಹೋಗುತ್ತಾರೆ. ಅವರು ನೀರನ್ನು ಕೈಯಿಂದಲೇ ತೆಗೆದುಹಾಕುವುದನ್ನು ನಾನು ನೋಡಿದ್ದೇನೆ.
ಬಾವಿಗಳಿಂದ, ಕೆರೆಗಳಿಂದ, ಜಲಾಶಯಗಳಿಂದ
ಹಾಗಾದರೆ ಇವರಿಗೆ ನೀರು ಎಲ್ಲಿಂದ ಬರುತ್ತದೆ? ಇದಕ್ಕಾಗಿ ಭೂಮಿಯಿಂದ ನೀರನ್ನು ಹುಚ್ಚಾಪಟ್ಟೆ ತೆಗೆಯಲಾಗುತ್ತಿದೆ. ಖಾಸಗಿ ಬೋರ್ವೆಲ್ಲುಗಳಿಂದ ನೀರನ್ನು ತೆಗೆಯಲಾಗುತ್ತದೆ. ಈಗಿರುವ ಕೊರತೆಯ ಪ್ರಯೋಜನ ಪಡೆದುಕೊಂಡು ಬೇಗ ಲಾಭ ಮಾಡಿಕೊಳ್ಳುವ ಉದ್ದೇಶದಿಂದಲೇ ನೂರಾರು ಹೊಸ ಬಾವಿಗಳನ್ನು ತೋಡಲಾಗಿದೆ. ಗೌಂಡ್ವಾಟರ್ ಸಮಸ್ಯೆ ಬಿಗಡಾಯಿಸಿದರೆ ಇದು ಬೇಗ ಬತ್ತಿ ಹೋಗಬಹುದು.  ಸಟ್ಟಾವ್ಯಾಪಾರಿಗಳು ನೀರಿರುವ ಬಾವಿಗಳನ್ನೇ ಕೊಂಡುಕೊಂಡಿದ್ದಾರೆ. ಬಾಟಲ್ಲುಗಳಲ್ಲಿ ನೀರು ಮಾರುವ ಕೆಲವು ಕಾಖರ್ಾನೆಗಳಿಗೆ ದೂರದ ವಿದರ್ಭದಲ್ಲಿರುವ ಬುಲ್ದಾನದಿಂದ ನೀರು ಸರಬರಾಜಾಗುತ್ತದೆ.  ಆ ಜಿಲ್ಲೆಯಲ್ಲೇ ನೀರಿಗೆ ತೀವ್ರ ಕೊರತೆ ಇದೆ. ಈ ಕೊರತೆ ಬೇರೆ ಪ್ರಾಂತ್ಯಗಳಿಗೂ ಹರಡುತ್ತಿದೆ. ಕೆಲವರಂತೂ ಸಾರ್ವಜನಿಕ ಮೂಲಗಳಾದ ಕೆರೆಕಟ್ಟೆಗಳಿಂದ ನೀರನ್ನು ಲೂಟಿ ಹೊಡೆಯುತ್ತಿದ್ದಾರೆ.
ಟ್ಯಾಂಕ್ ಮಾಲಿಕರು 10000 ಲೀಟರ್ ನೀರನ್ನು 1000ದಿಂದ 1500 ರೂಗಳಿಗೆ ಖರೀದಿಸುತ್ತಾರೆ. ಅದನ್ನು ಸುಮಾರು 3500 ರೂಗಳಿಗೆ ಮಾರುತ್ತಾರೆ. ಈ ವ್ಯವಹಾರದಲ್ಲಿ 2500 ಲಾಭ ಮಾಡಿಕೊಳ್ಳುತ್ತಾರೆ. ಅವರಿಗೇನಾದರೂ ಚೆನ್ನಾಗಿ ನೀರಿರುವ ಬೋರವೆಲ್ ಅಥವಾ ಬಾವಿ ಇದ್ದರಂತೂ  ಖಚರ್ು ಇನ್ನೂ ಕಡಿಮೆ. ಇನ್ನು ಅವರು ಸಾರ್ವಜನಿಕ ಮೂಲಗಳನ್ನು ಕೊಳ್ಳೆಹೊಡೆಯುತ್ತಿದ್ದರಂತೂ ಖಚರ್ೇ ಇಲ್ಲ ಎನ್ನಬಹುದು.
50,000 ಕ್ಕಿಂತ ಹೆಚ್ಚು ಟ್ಯಾಂಕರ್ ರಾಜ್ಯದಾದ್ಯಂತ ಈ ವರ್ಷ ತಯಾರಾಗಿವೆ. ಎನ್ನುತ್ತಾರೆ ಮಾಜಿ ಪಾಲರ್ಿಮೆಂಟ್ ಸದಸ್ಯ ಪ್ರಸಾದ್ ತಾನಪುರೆ. ಇದರ ಜೊತೆಗೆ ಮೊದಲಿನಿಂದ ಇರುವ ಸಾವಿರಾರು ಟ್ಯಾಂಕರ್ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹಾಗಾಗಿ ಈಗ ಎಷ್ಟು ಚಾಲ್ತಿಯಲ್ಲಿವೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ತಾನ್ಪುರೆ ಈ ಪ್ರಾಂತ್ಯದ ರಾಜಕೀಯ ಧುರೀಣ. ಅವರಿಗೆ ಇಲ್ಲಿಯ ನೀರಿನ ಪರಿಸ್ಥಿತಿ ಚೆನ್ನಾಗಿ ಗೊತ್ತು.  ಉಳಿದವರ ಅಂದಾಜಿನ ಪ್ರಕಾರ ಹೊಸದಾಗಿ ತಯಾರಾಗಿರುವ ಟ್ಯಾಂಕರ್ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು.
ಕೇವಲ 50,000 ಟ್ಯಾಂಕರ್ ತಯಾರಾಗಿದೆ ಎಂದುಕೊಂಡರೂ, ರಾಜ್ಯದಲ್ಲಿರುವ ಫ್ಯಾಬ್ರಿಕೇಟರ್ಸ್ಗಳು ಕಳೆದ ಕೆಲವೇ ತಿಂಗಳಲ್ಲಿ 2 ಬಿಲಿಯನ್ ರೂಪಾಯಿಗಳ ವಹಿವಾಟು ಮಾಡಿವೆ. ಜೊತೆಗೆ ಇದರ ಪರಿಣಾಮ ಬೇರೆ ಕೆಲಸಗಳ ಮೇಲೂ ಆಗಿದೆ. ಕಟ್ಟಡ ನಿಮರ್ಾಣ ಕೆಲಸ ಸ್ಥಗಿತಗೊಂಡಿದೆ. ಗ್ರಿಲ್, ಕಂಬಗಳು, ಮುಂತಾದ ಯಾವ ಕೆಲಸಗಳೂ ನಡೆಯುತ್ತಿಲ್ಲ ಎನ್ನುತ್ತಾರೆ ಮೆಲ್ವನೆ. ಈ ಲಾಭದಾಯಕ ಉದ್ದಿಮೆಗೆ ಹೊಸಬರೂ ನುಗ್ಗುತ್ತಿದ್ದಾರೆ. ಜಲ್ನಾದಲ್ಲಿ ಟ್ಯಾಂಕರ್ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಸುರೇಶ್ ಪವಾರ್ ಹೇಳುವ ಪ್ರಕಾರ ನಗರದಲ್ಲಿ ಈಗ ಸುಮಾರು 100 ಫ್ಯಾಬ್ರಿಕೇಟರುಗಳು ಇದ್ದಾರೆ. ಅದರಲ್ಲಿ 90ರಷ್ಟು ಜನ ಇದರಲ್ಲಿ ಯಾವುದೇ ಅನುಭವ ಇಲ್ಲದ ಹೊಸಬರು.
ಜಲ್ನಾ ಜಿಲ್ಲೆಯ ಶೆಲಗಾಂವ್ ಗ್ರಾಮದಲ್ಲಿ ದೀಪಕ್ ಅಂಬೋರೆ ಎಂಬ ರೈತ (ಸ್ಥಳೀಯ ರಾಜಕಾರಣಿ) ನೀರಿಗಾಗಿ ದಿನಕ್ಕೆ 2000 ರೂಪಾಯಿ ಖಚರ್ು ಮಾಡುತ್ತಾರೆ. ನಾನು ಸುಮಾರು 5 ಟ್ಯಾಂಕರ್ ನೀರನ್ನು ನನ್ನ ಮೋಸಂಬಿ ತೋಟವೂ ಸೇರಿದಂತೆ 18 ಎಕರೆ ತೋಟಕ್ಕಾಗಿ ಕೊಂಡುಕೊಳ್ಳುತ್ತೇನೆ. ಸಾಹುಕಾರನಿಂದ ಇದಕ್ಕಾಗಿ ಸಾಲ ಪಡೆಯಬೇಕು. ಬೆಳೆಯಲ್ಲಾ ಹಾಳಾಗಿರುವಾಗ ಇಷ್ಟೊಂದು ಯಾಕೆ ಖಚರ್ುಮಾಡಬೇಕು? ಎಂದರೆ ಸಧ್ಯಕ್ಕೆ  ನನ್ನ ತೋಟವನ್ನು ಉಳಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ. ಬಡ್ಡಿಯ ದರ ವರ್ಷಕ್ಕೆ ಶೇಕಡ 24ಕ್ಕೂ ಹೆಚ್ಚಾಗಿದೆ.
ಪರಿಸ್ಥಿತಿ ಹದಗೆಟ್ಟಿದೆ ಆದರೆ ಪೂತರ್ಿ ನಾಶವಾಗಿಲ್ಲ. ಜಲ್ನಾದಲ್ಲಿ ಇನ್ನೂ ಹಲವು ವರ್ಷಗಳಿಂದ ಟ್ಯಾಂಕರ್ ಬಳಸದೆ ಇರುವವರೂ ಇದ್ದಾರೆ. ಪರಿಸ್ಥಿತಿ ಬಿಗಡಾಯಿಸಿದೆ. ಟ್ಯಾಂಕರುಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದೆ. ಮುಂದೆ ಇನ್ನೂ ಹೆಚ್ಚಿನ ದುದರ್ಿನಗಳು ಬರಲಿವೆ. ಇದು ಕೇವಲ ಮುಂಬರುವ ಮಳೆಯ ಪ್ರಶ್ನೆಯಲ್ಲ. ಕೆಲವರನ್ನು ಬಿಟ್ಟರೆ, ಒಬ್ಬ ರಾಜಕೀಯ ನಾಯಕ ಹೇಳಿದಂತೆ ನಾನು 10 ಟ್ಯಾಂಕರಿನ ಮಾಲೀಕನಾಗಿದ್ದರೆ, ನಾನು ಈ ವರ್ಷವೂ ಬರಗಾಲ ಬರಲಿ ಎಂದು ಪ್ರಾಥರ್ಿಸುತ್ತೇನೆ ಎನ್ನುವ ಸ್ಥಿತಿಗೆ ತಲುಪಿದ್ದೇವೆ.
ಪಿ ಸಾಯಿನಾಥ್
ದಿ ಹಿಂದೂ ಮಾಚರ್ಿ 27, 2013
 

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.