Artha-2
ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಬರಹಗಳ ಸಂಗ್ರಹವನ್ನು ಕನ್ನಡದಲ್ಲಿ ತರುವ ಉದ್ದೇಶದಿಂದ ಅರ್ಥ ಅಂತ ಶುರುಮಾಡಿದೆವು. ಇದು ಅದರ ಎರಡನೇ ಸಂಚಿಕೆ. ತುಂಬಾ ವಿಷಯಗಳು ಮಿಸ್ಸಾಗಿದೆ. ಸಮಗ್ರವಾಗಿ ತರುವುದಕ್ಕೆ ನಮ್ಮದೇ ಆದ ಮಿತಿಗಳಿವೆ.
ಪದೇ ಪದೇ ಹಲವು ಪ್ರಮುಖ ಘಟನೆಗಳು ನಡೆಯುತ್ತಲೇ ಇವೆ. ಅದರ ಸುತ್ತ ಚರ್ಚೆ ಆಗುತ್ತಿದೆ. ವಲಸೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ವಲಸೆಯ ಬಗ್ಗೆ ಅಭಿಜಿತ್ ಬ್ಯಾನರ್ಜಿಯವರ ಚಿಂತನೆಗಳನ್ನು ಪರಿಚಯ ಮಾಡುವ ಉದ್ದೇಶದಿಂದ ಅವರ ಲೇಖನವೊಂದನ್ನು ಸಂಗ್ರಹಿಸಿ ಅನುವಾದಿಸಿ ಕೊಡುತ್ತಿದ್ದೇವೆ. ದೊಡ್ಡದಾಯಿತು ಅನ್ನುವ ಕಾರಣಕ್ಕೆ ಎರಡು ಭಾಗಗಳಲ್ಲಿ ಕೊಡುತ್ತಿದ್ದೇವೆ. ಮೊದಲ ಭಾಗ ಇಲ್ಲಿದೆ. ವಲಸೆಯ ಸುತ್ತಾ ಇರುವ ಹಲವು ಅಪಕಲ್ಪನೆಗಳನ್ನು ಅದು ಚರ್ಚಿಸುತ್ತದೆ. ವಿವರ ಬೇಕಾದರೆ ಅವರ ಪುಸ್ತಕ ಗುಡ್ ಎಕಾನಾಮಿಕ್ಸ ಫಾರ್ ಹಾರ್ಡ್ ಟೈಮ್ಸ ನೋಡಬಹುದು.
ಈಗ ಕರೋನೊ ಆವರಿಸಿಕೊಂಡಿದೆ. ಈಗಾಗಲೇ ನೆಲಕಚ್ಚಿರುವ ನಮ್ಮ ಆರ್ಥಿಕತೆಗೆ ಹೊಸದೊಂದು ಆಘಾತ. ನಿಜ ಆರೋಗ್ಯದ ಕಡೆ ಗಮನ ಕೊಡಬೇಕು. ಅದು ಮುಖ್ಯ. ಆದರೆ ಆರ್ಥಿಕ ಬಿಕ್ಕಟ್ಟು ಸುಳ್ಳಲ್ಲ. ಅದೇ ನಮಗೆ ಈ ಆರೋಗ್ಯದ ಬಿಕ್ಕಟ್ಟನ್ನು ತಾಳಿಕೊಳ್ಳಲು ಶಕ್ತಿಕೊಡುವುದು. ಒಂದನ್ನು ಬಿಟ್ಟು ಒಂದು ಇಲ್ಲ. ಸ್ವಲ್ಪ ಎಚ್ಚರ ತಪ್ಪಿದರೆ ಇದು ಕಮ್ಮಿಯಾಗುತ್ತಿದ್ದ ಹಾಗೆ ಎರಗುವ ಆರ್ಥಿಕ ಹೊಡೆತವನ್ನು ತಾಳಿಕೊಳ್ಳುವುದು ಕಷ್ಟವಾಗುತ್ತದೆ. ಆರ್ಥಿಕ ಸಮಸ್ಯೆಗಳಿಂದ ಮೂಲೆ ಸೇರಿರುವ ಬಡಜನತೆ ಕರೋನೊದ ಲಾಕ್ಡೌನ್ ಇಂದ ಇನ್ನಷ್ಟು ಬಳಲುತ್ತಾರೆ. ಅವರಿಗೆ ಬೆಂಬಲ ನೀಡುವುದು ನಮ್ಮ ಕೆಲಸ. ಮಹಾಮಾರಿಯನ್ನು ತಡೆಯುವ ನಮ್ಮ ಸಾಮಾಜಿಕ ಜವಾಬ್ದಾರಿಯಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಈ ಬಹುಸಂಖ್ಯಾತರ ನೋವು ಸೇರಿಕೊಳ್ಳಬೇಕು. ಆ ದೃಷ್ಟಿಯಿಂದ ಈ ಬಾರಿಯ ಅರ್ಥದಲ್ಲಿ ಎರಡು ಲೇಖನಗಳು ಇದರಲ್ಲಿವೆ. .
ಜೊತೆಗೆ ಅಮಾರ್ತ್ಯ ಸೇನ್ ಅವರ ಒಂದು ಲೇಖನ, ಹಿಂದಿನ ಸಂಚಿಕೆಯಲ್ಲಿ ಮಿಸ್ ಆಗಿದ್ದ ಹಿಮಾಂಶು ಅವರ ಒಂದು ಲೇಖನವನ್ನು ಸೇರಿಸಲಾಗಿದೆ. ಬಜೆಟ್ಟ ಬಗ್ಗೆ ವಿವಿರವಾಗಿ ದಾಖಲಿಸಲು ಆಗಿಲ್ಲ.
ನಿಮ್ಮ ಸಲಹೆ ಸಹಕಾರ ಬೇಕು. ಒಳ್ಳೆಯ ಲೇಖನಗಳು ಇದ್ದರೆ ಕಳುಹಿಸಿಕೊಡಿ. ಗೆಳೆಯರಲ್ಲಿ ಸಾಧ್ಯವಾದರೆ ಹಂಚಿಕೊಳ್ಳಿ
ವೇಣುಗೋಪಾಲ್ ಟಿ ಎಸ್
click here to down load