ಬರ್ಗಮನ್ -ಸಿನಿಮಾ ಜಗತ್ತು ಕಂಡ ಅದ್ಭುತ ಜಾದುಗಾರ

 In CINEMA

bergman

ಬರ್ಗಮನ್ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವನು ಇಡೀ ಬದುಕನ್ನು ರಂಗಭೂಮಿ ಹಾಗೂ ಸಿನಿಮಾಕ್ಕೆ ಮೀಸಲಿಟ್ಟಿದ್ದ. ಅವನೊಬ್ಬ ಹುಟ್ಟು ಚಿತ್ರ ನಿದರ್ೇಶಕ. ಮಾಧ್ಯಮವನ್ನು ಚೆನ್ನಾಗಿ ಬಲ್ಲವನು. ತಾನೊಬ್ಬ ಒಳ್ಳೆ ನಿದರ್ೇಶಕ ಎಂಬ ಅರಿವು ಅವನಿಗೂ ಇತ್ತು. ಆದರೂ ಸಿನಿಮಾ ಕೆಲಸ ಪ್ರಾರಂಭವಾದರೆ ಅದು ಮುಗಿಯುವವರೆಗೆ ತಳಮಳ ಅವನಿಗೂ ತಪ್ಪಿದ್ದಲ್ಲ. ಸಿನಿಮಾದ ಮೊದಲ ಹೆಜ್ವೆಯಲ್ಲೇ ಈ ಒದ್ದಾಟ ಶುರುವಾಗುತ್ತದೆ. ಕೆಲವು ವಸ್ತುಗಳು ಬೇಗ ಸಿಕ್ಕು ಬಿಡಿಸಿಕೊಂಡು ಕಲಾಕೃತಿಗಳಾಗಿಬಿಡುತ್ತವೆ. ಕೆಲವು ತುಂಬಾ ಕಾಲ ಹೆಣಗುತ್ತವೆ. ಇದು ಅವನಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ನಿದರ್ೇಶಕರ ವಿಷಯದಲ್ಲೂ ಈ ಮಾತು ನಿಜ. ಅಷ್ಟೇ ಏಕೆ ಯಾವುದೇ ಕಲಾ ಪ್ರಕಾರಕ್ಕೂ ಇದು ನಿಜ. ಬರ್ಗಮನ್ನಿನ ಒದ್ದಾಟ ಯಾವುದೇ ಕಲಾವಿದನ ಒದ್ದಾಟವೂ ಹೌದು. ಹಾಗಾಗಿ ಇವನು ಸಿನಿಮಾ ಮಾಡುವ ಪ್ರಕ್ರಿಯೆ, ಮತ್ತವನ ಒದ್ದಾಟ ಇವೆಲ್ಲಾ ಯಾವುದೇ ಒಂದು ಶ್ರೇಷ್ಠ ಕಲೆ ಮೂಡುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ನೆರವಾಗುತ್ತದೆ. ಬರ್ಗಮನ್ ಅಲ್ಲಿ ಇಲ್ಲಿ ಮಾತನಾಡಿದ್ದು, ಬರೆದಿದ್ದು ನೋಡಿದರೆ, ಅಲ್ಲಿ ಬೇರೆ ಬೇರೆ ಕಲಾವಿದರ ಧ್ವನಿಗಳೂ ನೆನಪಾಗುತ್ತವೆ.
ಚಿಕ್ಕ ವಯಸ್ಸಿನಿಂದಲೇ ಅವನಿಗೆ ಈ ಗೀಳು ಅಂಟಿಕೊಂಡಿತ್ತು. ಅವನಿಗೆ ಹಲವರ ಪ್ರಭಾವ ಆಗಿದೆ. ಅವೆಲ್ಲವೂ ಅವನ ಸಿನಿಮಾದಲ್ಲಿ ಕಾಣುತ್ತದೆ. ಆದರೆ ಅವೆಲ್ಲಾ ಅವನ ಸಿನಿಮಾದಲ್ಲಿ ಸೊಗಸಾಗಿ ಮಿಲಿನಗೊಂಡಿದೆ. ಅವನ ತನವನ್ನು ಕಂಡುಕೊಳ್ಳುವುದಕ್ಕೆ ಅದ್ಯಾವುದೂ ಅಡ್ಡಿಯಾಗಿಲ್ಲ.
ಅವನು ಸುಮಾರು ಆರು ದಶಕಗಳಿಗೂ ಮೀರಿದ ಸಕ್ರಿಯ ಸಿನಿಮಾ ಬದುಕಿನಲ್ಲಿ, 60 ಸಿನಿಮಾಗಳನ್ನು, ಡಾಕ್ಯುಮೆಂಟರಿಗಳನ್ನು ತೆಗಿದಿದ್ದ. ಹೆಚ್ಚಿನವೂ ಸಂಪೂರ್ಣ ಅವನದೇ. ಅವನದೆ ಚಿತ್ರಕಥೆ, ಸಂಭಾಷಣೆ ಹಾಗೂ ನಿದರ್ೇಶನವಿರುತ್ತಿತ್ತು. ಸಿನಿಮಾಕ್ಕೆ ಬರುವ ಮೊದಲು ಕೆಲವು ನಾಟಕಗಳನ್ನು, ಕಾದಂಬರಿಗಳನ್ನು ಬರೆದಿದ್ದ. ಹಲವಾರು ನಾಟಕಗಳನ್ನು ನಿದರ್ೇಶಿಸಿದ್ದ. ಮಧ್ಯೆ ಯಾವುದೋ ಸೋಪಿನದೋ ಇನ್ಯಾವುದೋ ಜಾಹಿರಾತಿಗೂ ಕೆಲಸ ಮಾಡಿದ್ದಿದೆ.
ಮೊದಲು ಅವನು ಸಿನಿಮಾಗಳಲ್ಲಿ ಸಾಮಾಜಿಕ ಸಮಸ್ಯೆಗಳು ವಸ್ತುವಾಗಿದ್ದವು. ನಂತರದ ಸಿನಿಮಾಗಳಲ್ಲಿ ತನ್ನ ಪಾತ್ರಗಳ ಅಂತರಾಳವನ್ನು ವಿಶ್ಲೇಷಿಸುವ ಪ್ರಯತ್ನ ಕಾಣಬಹುದು. ಕೊನೆಕೊನೆಗೆ ಒಳಿತು ಕೆಡಕಿನ ಪ್ರಶ್ನೆ ಹಾಗೂ ಆದ್ಯಾತ್ಮ ಅವನನ್ನು ಕಾಡತೊಡಗಿದವು.
ಅವನು ಸಿನಿಮಾದಲ್ಲಿ ಸಾಮಾನ್ಯವಾಗಿ ಕೆಲವೇ ಪಾತ್ರಗಳಿರುತ್ತವೆ. ಒಂದು ಸಣ್ಣ ಕಥೆಯ ಸುತ್ತಾ, ಕೆಲವೇ ಗಂಟೆಗಳಲ್ಲಿ, ದಿನಗಳಲ್ಲಿ ಇಡೀ ಕಥೆ ಮುಗಿದು ಹೋಗುತ್ತದೆ. ಹೆಚ್ಚಾಗಿ ಸ್ವೀಡನ್ನಿನ ಸುತ್ತ ಮುತ್ತ ಸಿನಿಮಾ ತೆಗೆದಿದ್ದಾನೆ. ಮಧ್ಯೆಯಲ್ಲಿ ವರಮಾನತೆರಿಗೆ ಪ್ರಕರಣದಲ್ಲಿ ತೀರಾ ಘಾಸಿಗೊಂಡು, ಜರ್ಮನ್ನಿಗೆ ಹೋಗಿ ಏಳು ವರ್ಷ ಕಳೆದದ್ದು ಬಿಟ್ಟರೆ ಉಳಿದಂತೆ ಅವನ ಬದುಕನ್ನು ಸ್ವ್ವಿಡನ್ನಿನಲ್ಲೇ ಕಳೆದ.
ಬರ್ಗಮನ್ನನಿಗೆ ಇಡಿ ಸಿನಿಮಾ ಪ್ರಾರಂಭವಾಗುವುದು ಯಾವುದೋ ಒಂದು ತುಂಬಾ ಅಸ್ಪಷ್ಟವಾದ ಎಳೆಯಿಂದ- ಅದು ಒಂದು ಆಕಸ್ಮಿಕ ಹೇಳಿಕೆಯಾಗಿದ್ದಿರಬಹುದು ಅಥವಾ ಒಂದು ಸಂವಾದದ ತುಣಕಾಗಿರಬಹುದು. ಅಥವಾ ಯಾವುದೇ ನಿದರ್ಿಷ್ಟ ಪರಿಸ್ಥಿತಿಗೆ ಸಂಬಂಧಿಸದ, ತೀರಾ ಅಸ್ಪಷ್ಟವಾದ, ಆದರೆ ನಿಜವಾಗಿ ತೋರುವ ಯಾವುದೋ ಒಂದು ಘಟನೆಯಾಗಿರಬಹುದು. ಅಥವಾ ಸಂಗೀತದ ಯಾವುದೋ ಒಂದೆರಡು ತುಣುಕುಗಳಾಗಿರಬಹುದು. ರಸ್ತೆಯಲ್ಲಿ ಹಾದು ಹೋದ ಬೆಳಕಿನ ಕೋಲಾಗಿರಬಹುದು. ಹೀಗೆ ಮೂಲ ವಸ್ತು ಏನೂ ಆಗಿರಬಹುದು. ಅದು ಒಂದರಗಳಿಗೆಯಲ್ಲಿ ಬಂದು ಹೋದ ಯಾವುದೋ ಒಂದು ಭಾವನೆ. ಅವೆಲ್ಲಾ ಬಂದಷ್ಟೇ ಬೇಗ ಮಾಯವಾಗಿ ಬಿಡುತ್ತವೆ. ಆದರೂ ಒಂದು ಸುಂದರ ಕನಸಿನಂತೆ ಮನಸ್ಸನ್ನು ಕಲಕಿ ಹೋಗಿರುತ್ತದೆ. ಇದು ಖಂಡಿತಾ ಒಂದು ನಿಜವಾದ ಕಥೆಯಲ್ಲ. ಒಂದು ರೀತಿಯ ಮಾನಸಿಕ ಸ್ಥಿತಿ. ಆದರೆ ಅದರಲ್ಲಿ ಫಲವತ್ತಾದ ಸಂಬಂಧಗಳ, ಪ್ರತಿಮೆಗಳ ರಾಶಿಯೇ ಇರುತ್ತದೆ. ನಿಜರ್ೀವ ಕಗ್ಗತ್ತಲ ಚೀಲದಿಂದ, ರಂಗು ರಂಗಾದ ದಾರಗಳಾಗಿ ಹೊರಬರುತ್ತವೆ. ಈ ದಾರಗಳನ್ನು ನಿಧಾನವಾಗಿ, ಹುಷಾರಾಗಿ ನೇಯುತ್ತಾ ಹೋದರೆ ಒಂದು ಸಂಪೂರ್ಣ ಸಿನಿಮಾ ತಯಾರಾಗುತ್ತದೆ.
ಈ ಮೂಲಧಾತು ಅಷ್ಟು ಸಲೀಸಾಗಿ ಒಂದು ಸ್ಪಷ್ಟರೂಪ ಪಡೆದುಕೊಂಡು ಬಿಡುವುದಿಲ್ಲ. ತುಂಬಾ ಹೆಣಗುತ್ತದೆ. ಮೊದಲಲ್ಲಿ ಆಲಸ್ಯದಿಂದ, ಅರ್ಧನಿದ್ರಾವಸ್ತೆಯಲ್ಲಿ ಚಲಿಸುತ್ತಾ ಸಾಗುತ್ತದೆ. ಪ್ರತಿ ಸಿನಿಮಾಕ್ಕೂ ಅದರದೇ ಆದ ನಾಡಿಮಿಡಿತ ಹಾಗು ಲಯ ಇರುತ್ತದೆ. ಅದರಿಂದ ಇದು ಪ್ರಚೋದನೆ ಪಡೆದುಕೊಳ್ಳುತ್ತಾ ಹೋಗುತ್ತದೆ. ಈ ಲಯದ ಹಾದಿ ಹಿಡಿದು ದೃಶ್ಯಾವಳಿಗಳು ರೂಪುಪಡೆಯುತ್ತಾ ಹೋಗುತ್ತವೆ. ಆದರೆ ಮೂಲಧಾತುವಿಗೆ ಸಿನಿಮಾ ಆಗುವ ಚೈತನ್ಯ ಇರಬೇಕು. ಮೂಲವಸ್ತು ಸರಿಹೋಗದೇ ಹೋದರೆ ಬರವಣಿಗೆ ಶುರುವಾಗುವಾಗಲೇ ಗೊತ್ತಾಗಿಬಿಡುತ್ತದೆ. ಕಲ್ಪನೆಗಳೆಲ್ಲಾ ಗೋಜಲು ಗೋಜಲಾಗಿಬಿಡುತ್ತವೆ. ಚಿತ್ರಗಳೆಲ್ಲಾ ಮಸುಕಾಗಿ ಬಣ್ಣ ಕಳೆದುಕೊಂಡು ಪೇಲವವಾಗಿ ಬಿಡುತ್ತವೆ. ನಾಡಿಮಿಡಿತ ನಿಶ್ಯಬ್ಧವಾಗಿಬಿಡುತ್ತದೆ. ಎಲ್ಲವೂ ಶಕ್ತೀಹೀನವಾಗಿಬಿಡುತ್ತವೆ. ಅವೆಲ್ಲಾ ವಾಸ್ತವವೆನಿಸದೇ ಕೇವಲ ಪ್ರಯಾಸದ ಕಲ್ಪನೆಗಳಾಗಿಬಿಡುತ್ತವೆ.
ಮುಂದೆ ಈ ಕಲ್ಪನೆಗೆ ಚಿತ್ರಕಥೆಯ ರೂಪಕೊಡಬೇಕು. ಅದು ತೀರಾ ಸಂಕೀರ್ಣವಾದ ಹಾಗೂ ತುಂಬಾ ಕಷ್ಟಕರವಾದ ಕೆಲಸ. ಲಯ, ಮನೋಧರ್ಮ, ಪರಿಸರ, ತಿಕ್ಕಾಟ, ಘಟನೆಗಳು, ಛಾಯೆಗಳು, ಆ ವಾಸನೆ ಇವೆಲ್ಲವನ್ನು ಪದಗಳಲ್ಲಿ, ವಾಕ್ಯಗಳಲ್ಲಿ ಕಟ್ಟಿಡಬೇಕು. ಅದನ್ನು ಆರ್ಥವಾಗುವಂತಹ ಚಿತ್ರಕಥೆಯಾಗಿ ಮಾರ್ಪಡಿಸಬೇಕು. ಇದು ಸಾಧ್ಯವೇ ಇಲ್ಲದ ಕೆಲಸ ಅನ್ನಬಹುದು.
ಮೂಲವಸ್ತುವಿನ ತೀರಾ ಸಂಕೀರ್ಣವಾದ ಲಯ ಹಾಗೂ ಭಾವನೆಗಳಲ್ಲಿ ಸ್ವಲ್ಪ ಮಟ್ಟಿಗೆ ಪದಗಳಲ್ಲಿ ಕಟ್ಟುವುದಕ್ಕೆ ಸಾಧ್ಯವಾಗುವುದು ಸಂಭಾಷಣೆಯನ್ನು ಮಾತ್ರ. ಸಂಭಾಷಣೆ ಕೂಡ ತೀರಾ ಸೂಕ್ಷ್ಮವಾದ ವಿಷಯವೇ. ಅದೂ ಕೂಡ ಅಷ್ಟು ಸಲೀಸಾಗಿ ಪದಕ್ಕೆ ದಕ್ಕುವುದಿಲ್ಲ. ಅದು ಕೂಡ ಸಂಗೀತದ ಸಾಲುಗಳಿದ್ದಂತೆ. ಸಾಮಾನ್ಯನ ಗ್ರಹಿಕೆ ಸಲೀಸಾಗಿ ನಿಲುಕುವುದಿಲ್ಲ. ಅದನ್ನು ಗ್ರಹಿಸುವುದಕ್ಕೆ ಒಂದಿಷ್ಟು ತಾಂತ್ರಿಕ ಜಾಣ್ಮೆ ಬೇಕು. ಜೊತೆಗೆ ನಟನಿಗೆ ಕಲ್ಪನಾ ಶಕ್ತಿ ಹಾಗೂ ಭಾವನೆಗಳು ಇರಬೇಕಾಗುತ್ತದೆ. ಇವೆಲ್ಲಾ ಎಷ್ಟೋ ನಟರಲ್ಲಿ ಇರೋದಿಲ್ಲ. ಸಂಭಾಷಣೆ ಬರೆದುಬಿಡಬಹುದು. ಆದರೆ ಅದನ್ನು ಹೇಗೆ ಹೇಳುವುದು, ಅದರ ಲಯ, ಗತಿ ಹೇಗಿರಬೇಕು. ಎರಡು ಸಾಲಿನ ನಡುವೆ ಏನು ಮಾಡಬೇಕು. ಇವೆಲ್ಲದರ ತಿಳುವಳಿಕೆ ಬೇಕಾಗುತ್ತದೆ. ಈ ಎಲ್ಲಾ ವಿವರಗಳೂ ಚಿತ್ರಕತೆಯಲ್ಲಿ ಇರೋದಿಲ್ಲ. ಈ ಇಲ್ಲ ವಿವರಗಳನ್ನು ಚಿತ್ರಕಥೆಯಲ್ಲಿ ಬರೆಯೋದು ಕಷ್ಟ. ಅಷ್ಟೇ ಅಲ್ಲ ಇದೆಲ್ಲವನ್ನು ಅದರಲ್ಲಿ ತುಂಬಿಬಿಟ್ಟರೆ ಚಿತ್ರಕಥೆ ಓದಿಸಿಕೊಳ್ಳುವ ಗುಣವನ್ನೇ ಕಳೆದುಕೊಂಡುಬಿಡುತ್ತದೆ.
ಚಿತ್ರಿಕೆಗಳ ಜೋಡನೆ, ಅವುಗಳ ಲಯ, ಬೇರೆ ಬೇರೆ ಚಿತ್ರಿಕೆಗಳ ನಡುವಿನ ಸಂಬಂಧ ಇವೆಲ್ಲಾ ಚಿತ್ರದ ಜೀವಾಳ. ಇವು ಸರಿಹೋಗದೇ ಹೋದರೆ ಸಿನಿಮಾ, ಫ್ಯಾಕ್ಟರಿಯಿಂದ ಬಂದ ನಿಜರ್ೀವ ಸರಕಿನಂತಾಗಿಬಿಡುತ್ತದೆ. ಬೇರೆ ಬೇರೆ ಭಾಗಗಳನ್ನು ಕೂಡಿಸಿ ಸಿನಿಮಾ ನೇಯ್ಯುವಾಗ, ಟೆಂಪೊ ಹೇಗಿರಬೇಕು ಇವೆಲ್ಲಾ ಸ್ಕ್ರಿಪ್ಟ್ನಲ್ಲಿ ಹೇಳುವುದು ಕಷ್ಟ. ಅಂದರೆ ಸಿನಿಮಾದ ಹೇಗೆ ಉಸಿರಾಟ ಹೇಗಿರುತ್ತದೆ, ಅದರ ನಾಡಿ ಮಿಡಿತ ಹೇಗಿರುತ್ತದೆ ಇವೆಲ್ಲವನ್ನು ಸ್ಪಷ್ಟವಾಗಿ ಬರೆಯೋದು ಕಷ್ಟ. ಇವೆಲ್ಲಾ ಪದಗಳಿಗೆ ದಕ್ಕುವುದಿಲ್ಲ.
ಹಾಗಾಗಿ ಸಿನಿಮಾಕ್ಕೆ ಚಿತ್ರಕಥೆ ಅನ್ನೋದು ಖಂಡಿತಾ ಒಂದು ಪರಿಪೂರ್ಣವಾದ ತಾಂತ್ರಿಕ ಬುನಾದಿಯಲ್ಲ. ಈ ಬಗ್ಗೆ ಮಾತನಾಡುವಾಗಲೆಲ್ಲಾ ಬರ್ಗಮನ್ ಸಿನಿಮಾಕ್ಕೂ ಸಾಹಿತ್ಯಕ್ಕೂ ಇರೋ ವ್ಯತ್ಯಾಸವನ್ನು ಕುರಿತು ಮಾತನಾಡುತ್ತಾನೆ. ಸಿನಿಮಾಕ್ಕೂ ಸಾಹಿತ್ಯ ಯಾವುದೇ ಸಂಬಂಧವೂ ಇಲ್ಲ. ಎರಡು ಕಲಾ ಪ್ರಕಾರಗಳ ಲಕ್ಷಣ ಹಾಗೂ ಅಂತಃಸತ್ವ ಪೂರ್ಣ ಬೇರೆಯೇ. ಅವುಗಳನ್ನು ಸ್ವೀಕರಿಸುವ ಮನಸ್ಸಿನ ಪ್ರಕ್ರಿಯೆ ಬೇರೆಯದೇ ಆದ ರೀತಿಯದ್ದು. ಬರವಣಿಗೆಯನ್ನು ನಾವು ಸಾಮಾನ್ಯವಾಗಿ ಓದಿ ಸ್ವ ಇಚ್ಛೆಯಿಂದ ಪ್ರಜ್ಞಾಪೂರ್ವಕವಾಗಿ, ಬುದ್ಧಿಯ ನೆರವಿನಿಂದ ಗ್ರಹಿಸಿಕೊಳ್ಳುತ್ತಾ ಹೋಗುತ್ತೇವೆ. ಸ್ವಲ್ಪ ಸ್ವಲ್ಪವಾಗಿ ಅದು ನಮ್ಮ ಕಲ್ಪನೆ ಹಾಗೂ ಭಾವನೆಗಳ ಮೇಲೆ ಪ್ರಭಾವ ಬೀರುತ್ತಾ ಹೋಗುತ್ತದೆ. ಆದರೆ ಸಿನಿಮಾದಲ್ಲಿ ಈ ಪ್ರಕ್ರಿಯೆ ಭಿನ್ನವಾಗಿರುತ್ತದೆ. ನಾವು ಸಿನಿಮಾ ನೋಡುವಾಗ ಪ್ರಜ್ಞಾಪೂರ್ವಕವಾಗಿ ನಮ್ಮನ್ನು ಭ್ರಮೆಗೆ ಒಡ್ಡಿಕೊಳ್ಳುತ್ತೇವೆ. ನಮ್ಮ ಬುದ್ಧಿಯನ್ನು ಬದಿಗಿಟ್ಟು, ನಮ್ಮ ಕಲ್ಪನೆಗೆ ದಾರಿಮಾಡಿಕೊಡುತ್ತೇವೆ. ಚಿತ್ರಗಳ ಸರಣಿ ಬುದ್ದಿಯನ್ನು ಮುಟ್ಟದೆ ನೇರವಾಗಿ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ. ಸಂಗೀತ ಕೂಡ ಇದೇ ರೀತಿಯಲ್ಲಿ ಕೆಲಸಮಾಡುತ್ತದೆ. ಸಿನಿಮಾಕ್ಕೆ ಸಂಗೀತದಷ್ಟು ಹತ್ತಿರವಾದ ಕಲಾಪ್ರಕಾರ ಇನ್ನೊಂದಿಲ್ಲ. ಅವೆರಡೂ ನಮ್ಮ ಭಾವನೆಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ.
ಬರ್ಗಮನ್ನಿಗೆ ಸಂಗೀತ ಹತ್ತಿರವಾಗಿತ್ತು ಸಾಹಿತ್ಯವಲ್ಲ. ಅವನಿಗೆ ಎಂದೂ ಬರಹಗಾರನಾಗಬೇಕೆಂಬ ತವಕವಿರಲಿಲ್ಲ. ಅವನಿಗೆ ಹೇಳಬೇಕೆನಿಸಿದ್ದನ್ನೆಲ್ಲಾ ಅವನಿಗೆ ಸಿನಿಮಾ ಮೂಲಕವಷ್ಟೆ ಹೇಳಲಿಕ್ಕೆ ಸಾಧ್ಯವಿತ್ತು. ಕೆಲವು ಸಲ ಸಿನಿಮಾ ಕಥೆಯನ್ನು ಕೂಡ ಅವನು ಬೇರೆಯವರಿಂದ ಬರಿಸಿದ್ದು ಇದೆ. ನಾನೊಬ್ಬ ಸೋಮಾರಿ ಅನ್ನಿಸುತ್ತದೆ. ಚಿತ್ರಕಥೆ ಬರೆಯುವುದು ತುಂಬಾ ಬೇಸರದ ಕೆಲಸ. ಯಾಕೆಂದರೆ ಕನಸು ಕಾಣುವುದು ಕಷ್ಟವಲ್ಲ. ಆದರೆ ಅದರನ್ನು ಪದಗಳಲ್ಲಿ ಕಟ್ಟಿಡುವುದು ತುಂಬಾ ಬೇಸರದ ಕೆಲಸ. ನನಗೆ ಪದಗಳನ್ನು ಕಂಡರೆ ಆಗುವುದಿಲ್ಲ. ನನಗೆ ಅದು ಎಂದೂ ತೃಪ್ತಿ ನೀಡಿಲ್ಲ ಅಂದುಕೊಂಡಿದ್ದೇನೆ.
ಸ್ಕಿಪ್ಟ್ ಮುಗಿದಾಗ ಸಿನಿಮಾ ಪ್ರಕ್ರಿಯೆ ಅರ್ಧದಾರಿ ಸಾಗಿರುತ್ತೇವೆ. ಮುಂದೆ ಸಿ್ಕೃಪ್ಟ್ ಬರೆಯುವಾಗ ಕಲ್ಪಿಸಿಕೊಂಡಿದ್ದ ದೃಶ್ಯಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಈ ಮಧ್ಯೆ ಹಲವಾರು ಸವಾಲುಗಳು ಎದುರಾಗುತ್ತವೆ. ಅವು ತಾಂತ್ರಿಕವಾದ ಸವಾಲುಗಳಾಗಿರಬಹುದು, ಅಥವಾ ನಟರಿಂದ ಎದುರಾಗುವ ಸವಾಲುಗಳಿರಬಹುದು. ಇವೆಲ್ಲಾ ಬದುಕಿನ ನಿರಂತರ ಸೃಷ್ಟಿಯ ಪ್ರಕ್ರಿಯೆಯ ಭಾಗ. ಉದ್ದಕ್ಕೂ ಅದು ಜೀವಂತಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಅದೆ ಒಂದು ಕ್ರಿಯಾತ್ಮಕ ಪ್ರಕ್ರಿಯೆ. ಸ್ಕ್ರಿಪ್ಟ್ನಲ್ಲಿ ಅಂದುಕೊಂಡಿದ್ದೆಲ್ಲಾ ಸಿನಿಮಾದಲ್ಲಿ ಬರದೇ ಹೋಗಬಹುದು. ಕೆಲವನ್ನು ಪೂತರ್ಿಯಾಗಿ ಕೈಬಿಡಬೇಕಾದ ಪರಿಸ್ಥಿತಿಯೂ ಬರಬಹುದು. ಎಷ್ಟೋ ಸಲ ನಾವು ಯೋಚನೆಯೇ ಮಾಡಿರದ ಅನಿರೀಕ್ಷಿತ ಸನ್ನಿವೇಶ ಎದುರಾಗಬಹುದು.
ಸ್ಕ್ರಿಪ್ಟ್ ರೈಟರ್ ಹಾಗು ನಿದರ್ೇಶಕ ಇಬ್ಬರೂ ಬೇರೆಯದೇ ಆದ ವ್ಯಕ್ತಿಗಳು. ಮನಸ್ಸಿನ ಸ್ಥಿತಿ ಬೇರೆಯೇ ಆಗಿರುತ್ತದೆ. ಕೆಲಸದ ಹಾದಿಯೂ ಬೇರೆಯಾಗಿರುತ್ತದೆ.
ಸಿನಿಮಾ ತಯಾರಿ:
ಸಿನಿಮಾ ಮಾಡೋದಕ್ಕೆ ತಂತ್ರಜ್ಞರ, ನಟರ ಇತ್ಯಾದಿಗಳ ತಂಡವೇ ಬೇಕಾಗುತ್ತದೆ. ಸೂಕ್ತ ಜನರನ್ನು ಆರಿಸಿಕೊಳ್ಳುವುದು ಪ್ರಾಯಾಸದ ಕೆಲಸ. ಈ ಪ್ರಯತ್ನದಲ್ಲಿ ಎಡವಟ್ಟು ಆಗಬಹುದು. ನಿರೀಕ್ಷೆ ಹುಸಿಯಾಗಬಹುದು.
ತಂತ್ರಜ್ಞರ ವಿಷಯಕ್ಕೆ ಬಂದರೆ, ಕೆಲವು ನಿದರ್ೇಶಕರು ತಮ್ಮದೇ ಆದ ತಂಡವನ್ನು ಇಟ್ಟುಕೊಂಡಿರುತ್ತಾರೆ. ಬರ್ಗಮನ್ನಿಗೂ ಅವನದೇ ಆದ ತಂತ್ರಜ್ಞರ ತಂಡವಿತ್ತು. ಅವನು ನಿದರ್ಿಷ್ಟ ಕ್ಯಾಮರಾಮನ್ಗಳು, ಸಂಕಲನಕಾರರು, ಸಂಗೀತ ನಿದರ್ೇಶಕರು, ಕಲಾ ನಿದರ್ೆಶಕರ ಜೊತೆಯಲ್ಲಿ ಕೆಲಸಮಾಡುತ್ತಿದ್ದ. ಅದು ಅವನ ಕೆಲಸವನ್ನು ಸ್ವಲ್ಪ ಹಗುರ ಮಾಡುತ್ತಿತ್ತು. ಅವರಿಗೆ ನಿದರ್ೇಶಕನ ಮನಸ್ಸು ಅರ್ಥ ಆಗಿರುತ್ತಿತ್ತು. ಆದರೆ ಅವರಿಗೂ ಅವರದೇ ಆದ ಅಭಿರುಚಿ, ಶೈಲಿ ಇರುತ್ತದೆ. ಕೆಲವೊಮ್ಮೆ ಅವರಿಗೂ ನಿದರ್ೇಶಕನ ವಿಧಾನ ಒಗ್ಗದೇ ಇರಬಹುದು. ಮೊದಲಲ್ಲಿ ಫಿಷರ್ ಇವನ ಕ್ಯಾಮರಾಮನ್ ಆಗಿದ್ದ. ಬರುಬರುತ್ತಾ ಬರ್ಗಮನ್ನಿನ ವಿಧಾನ ಬದಲಾಗುತ್ತಾ ಹೋದಂತೆ, ಬರ್ಗಮನ್ನಿಗೆ ಮೆದುಬೆಳಕು ಬೇಕೆನಿಸಿತು. ಫಿಷರ್ಗೆ ಅದು ಸರಿಕಾಣಲಿಲ್ಲ. ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಇದೇ ಕಾರಣವೆ ಅನ್ನೋದು ಸ್ಪಷ್ಟವಿಲ್ಲ. ಒಟ್ಟಲ್ಲಿ ಕ್ಯಾಮರಾಮನ್ ಬದಲಾದ. ನಂತರದ ಸಿನಿಮಾಗಳಲ್ಲಿ ಸ್ವೆನ್ ನಿಕ್ವಿಸ್ಟ್ ಅವನಿಗೆ ಕ್ಯಾಮರಾಮನ್ ಆಗಿ ಕೆಲಸಮಾಡತೊಡಗಿದ. ಪ್ರತಿ ಸಿನಿಮಾದ ಮೂಡಿಗೆ ತಕ್ಕಂತೆ ಛಾಯಾಗ್ರಹಣದ ವಿಧಾನವೂ ಬದಲಾಗುತ್ತದೆ. ಚಿತ್ರಕಥೆಗೆ ತಕ್ಕಂತೆ ಕ್ಯಾಮರಾಮನ್ ರೆಡಿಯಿರಬೇಕು. ಚಿತ್ರಕಥೆ ನೋಡಿದರೆ ನಿದರ್ೇಶಕನ ಚಿಂತನೆಯ ದಾರಿ ಹಾಗೂ ಸಿನಿಮಾದ ಪರಿಸರ ಅರ್ಥವಾಗುತ್ತದೆ. ನಿದರ್ೇಶಕನ ಆಲೋಚನೆ ಅರ್ಥವಾದರೆ, ಅವನೊಡನೆ ಕೆಲಸಮಾಡುವ ಉತ್ಸಾಹ ಇದ್ದರೆ ಚಿತ್ರೀಕರಣ ಸಲೀಸಾಗಿ ನಡೆದುಕೊಂಡು ಹೋಗುತ್ತದೆ. ಇಲ್ಲದೇ ಹೋದರೆ ಉದ್ದಕ್ಕೂ ಬರಿಯ ಹೊಂದಾಣಿಕೆಯೇ ಆಗಿಬಿಡುತ್ತದೆ.
ವೇಷಭೂಷಣ ಕೂಡ ಸಿನಿಮಾದ ಅವಿಬಾಜ್ಯ ಅಂಗ. ವೇಷಭೂಷಣ ನೋಡಿಕೊಳ್ಳುವನು ಸ್ಕ್ರಿಪ್ಟ್ ನೋಡಿ ಎಂತಹ ಬಟ್ಟೆ ಇತ್ಯಾದಿಯ ಬಗ್ಗೆ ಸ್ಕೆಚ್ ಮಾಡಿಕೊಂಡು ಅದನ್ನೆಲ್ಲಾ ಕುರಿತು ನಿದರ್ೆಶಕನ ಜೊತೆ ಚಚರ್ಿಸುವುದು ಸಾಮಾನ್ಯ ಪದ್ಧತಿ. ಆದರೆ ಬರ್ಗಮನ್ ಚಿತ್ರಕಥೆ ತಯಾರಾಗುವವರೆಗೂ, ಪ್ರತಿ ಪಾತ್ರಗಳ ಜೊತೆ ಸುಮಾರು ವರ್ಷಗಳು ಕಳೆದಿರುತ್ತಾನೆ. ಅಷ್ಟೊಂದು ದೀರ್ಘ ಒಡನಾಟದ ನಂತರ ಅವುಗಳ ತೀರಾ ಹತ್ತಿರ ಹೋಗೋದಕ್ಕೆ ಬರ್ಗಮನ್ನಿಗೆ ಒಂದು ರೀತಿಯ ಮುಜಗರವಂತೆ. ಹಾಗಾಗಿ ಇಂತಹ ಚಚರ್ೆಯನ್ನು ಮುಂದೆ ಹಾಕುತ್ತಾ ಹೋಗುತ್ತಾನೆ.
ನಟರ ಪ್ರವೇಶ:
ಅವನು ಪ್ರಮುಖ ಪಾತ್ರಗಳನ್ನು ಸಾಮಾನ್ಯವಾಗಿ ಅವನು ತುಂಬಾ ಇಷ್ಟ ಪಡುವ 5-6 ನಟರಿಗೆ ಕೊಡುತ್ತಾನೆ. ಆದರೆ ಒಂದೇ ರೀತಿಯ ಪಾತ್ರಗಳನ್ನು ಕೊಡುವುದಿಲ್ಲ. ಅವರು ಒಂದೊಂದು ಸಿನಿಮಾದಲ್ಲೂ ತೀರಾ ಬೇರೆಯದೇ ಆದ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾರೆ. ಬರ್ಗಮನ್ನಿನ ವಿಶೇಷವೆಂದರೆ ಅವನು ನಟರನ್ನು ನಿದರ್ೇಶಿಸುವ ಕ್ರಮ. ಎಲ್ಲಾ ನಟರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಅವರ ವ್ಯಕ್ತಿತ್ವ ಬಲವಾದಷ್ಟು ಅವರ ಸ್ವತಂತ್ರ ಕ್ರಿಯಾತ್ಮಕ ಸಾಮಥ್ರ್ಯಕ್ಕ್ಕೆ ತಕ್ಕಂತೆ ಹೆಚ್ಚಿನ ಗೌರವವನ್ನು ನೀಡಬೇಕಾಗುತ್ತದೆ. ನಿದರ್ೇಶಕ ಹಾಗೂ ನಟನ ನಡುವೆ ಸಂಬಂಧ ತುಂಬಾ ಸೂಕ್ಷ್ಮವಾದದ್ದು. ಎಲ್ಲಾ ನಟರು ಒಂದೇ ರೀತಿಯಿರುವುದಿಲ್ಲ. ಕೆಲವರಿಗೆ ತಟ್ಟೆಯಲ್ಲಿ ಎಲ್ಲಾ ಬಡಿಸಿಡಬೇಕು. ಕೆಲವರೂ ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಯಾವುದೇ ಪ್ರಭಾವವನ್ನು ಒಪ್ಪುವುದಿಲ್ಲ. ತಮ್ಮತನವನ್ನು ಬಿಡುವುದಕ್ಕೂ ತಯಾರಿರುವುದಿಲ್ಲ. ಎಲ್ಲೋ ಒಂದು ಕಡೆ ಕಳೆದುಹೋಗುತ್ತೇವೆ ಎಂಬ ಗಾಬರಿ ಅವರನ್ನು ಕಾಡುತ್ತಿರುತ್ತದೆ. ನಟರಿಗೂ ಅವರದೇ ಆದ ತಾಕಲಾಟಗಳಿರುತ್ತವೆ. ಹಾಗಾಗಿ ಅವರನ್ನು ನಿದರ್ೇಶಿಸುವುದು ತೀರಾ ಸೂಕ್ಷ್ಮವಾದ ಕೆಲಸ. ನಿದರ್ೇಶಕನಿಗೆ ಒಂದು ರೀತಿಯ ಸಮತೋಲನ ಬೇಕಾಗುತ್ತದೆ. ನಟರ ಆಯ್ಕೆಯ ವಿಷಯದಲ್ಲೂ ತಪ್ಪಾಗಿ ಬಿಡಬಹುದು. ತುಂಬಾ ಸೂಕ್ತ ನಟ ಅಂತ ಆರಿಸಿಕೊಂಡವನು ಕೊನೆಗೆ ಹೊಂದಿಕೆಯಾಗದೇ ಹೋಗಬಹುದು. ಇಂತಹ ಒಂದು ತಪ್ಪು ಇಡೀ ಸಿನಿಮಾವನ್ನು ಛಿಧ್ರಮಾಡಿಬಿಡಬಹುದು. ಎಲ್ಲವೂ ನಿಮ್ಮ ಕೈಜಾರಿಹೋಗಬಹುದು. ಆಗ ಇಡೀ ಬಾರವನ್ನು ಇನ್ನೊಬ್ಬ ನಟನ ಮೇಲೆ ಹಾಕಬೇಕಾಗಿ ಬರಬಹುದು. ಅವನಿಗೆ ಅದನ್ನು ನಿಭಾಯಿಸುವ ಸಾಮಥ್ರ್ಯವಿರಬೇಕು.ಅಥವಾ ಚಿತ್ರಕಥೆಯಲ್ಲಿ ಒಂದಿಷ್ಟು ಮಾಪರ್ಾಡು ಬೇಕಾಗಬಹುದು
ಬರ್ಗಮನ್ ನಟರಿಗೆ ಸ್ಕ್ರಿಪ್ಟ್ ಕೊಡುವಾಗ ಅವನು ಅದನ್ನು ವಿಶ್ಲೇಷಿಸಿ ಅದಕ್ಕೆ ಅರ್ಥಹೇಳುವ ಗೋಜಿಗೆ ಹೋಗುವುದಿಲ್ಲ. ಅವನಿಗೆ ಅದು ಇಷ್ಟವೂ ಇಲ್ಲ. ಅಷ್ಟೇ ಅಲ್ಲ ತುಂಬಾ ಸೂಚನೆಗಳನ್ನು ನೀಡುವುದೂ ಇಲ್ಲ. ‘ಮಳೆ ಹೋಯ್ದ ರೀತಿಯಲ್ಲಿ ನಟರಿಗೆ ಸೂಚನೆ ನೀಡುವುದು ಸರಿ ಇಲ್ಲ ಎನ್ನೋದು ಬರ್ಗಮನ್ ಹಿರಿಯರಿಂದ ಕಲಿತ ಪಾಠ.
ಸಂಭಾಷಣೆಯ ವಿಷಯಕ್ಕೆ ಸಂಬಂಧಿಸಿದಂತೆ ಅವು ಇವನ ಸಿನಿಮಾದಲ್ಲಿ ಸಾಹಿತ್ಯದ ತುಣಕುಗಳಲ್ಲ. ಅವೆಲ್ಲ ಸರಳವಾದ ಆಡು ಮಾತುಗಳು. ಇವನ ಸಿನಿಮಾದಲ್ಲಿ ಸ್ವಿಡಿಷ್ ಭಾಷೆಯ ಮಾತುಗಳು ಒಂದು ರೀತಿಯಲ್ಲಿ ಸಂಗೀತದ ತುಣಕುಗಳಿದ್ದಂಗೆ ಇರುತ್ತವೆ.
ಅವನ ಫ್ರೇಮುಗಳ ತುಂಬಾ ಶುದ್ಧವಾಗಿರುತ್ತದೆ. ಇಡೀ ಫ್ರೇಮಿನಲ್ಲಿ ಅವನಿಗೆ ಬೇಕಾದ್ದು ಮಾತ್ರ ಇರುತ್ತದೆ. ಅಕಸ್ಮಿಕವಾದ ಯಾವುದಕ್ಕೂ ಅಲ್ಲಿ ಅವಕಾಶವೇ ಇಲ್ಲ.
ಅವನ ಮುಖಗಳ ಚಿತ್ರಣ ಅದ್ಭುತ. ಅವನಷ್ಟು ಸಮೀಪ ಚಿತ್ರಗಳನ್ನು ತೆಗೆಯುವರು ವಿರಳ. ಕೆಲವು ಸಿನಿಮಾಗಳಲ್ಲಂತೂ ಮಾತಾಡುವ ಬಾಯಿ, ಕೇಳುವ ಕಿವಿ, ಉತ್ಸಾಹ ತುಂಬಿದ ಕಣ್ಣುಗಳೇ ಇಡೀ ಪರದೆಯನ್ನು ಆಕ್ರಮಿಸಿಕೊಂಡಿರುತ್ತದೆ.
ಬಹುಷಃ ಅವನ ಸುತ್ತಾ ನಟಿಯರೇ ಇದ್ದಾಗ ಅವನು ಸಂತಸದಿಂದಿರುತ್ತಾನೆ ಅನ್ನಿಸುತ್ತದೆ. ಹೆಂಗಸರ ಪಾತ್ರವಿಲ್ಲದ ಅವನ ಸಿನಿಮಾವನ್ನು ಊಹಿಸಿಕೊಳ್ಳೋದು ಕಷ್ಟ. ಅವನ ಹೆಣ್ಣಿನ ಪಾತ್ರಗಳು ತೀರಾ ಸೂಕ್ಷ್ಮವಾಗಿರುತ್ತದೆ. ಯಾವುದೋ ಪತ್ರಿಕೆ ಬರ್ಗಮನ್ ಹೆಂಗಸರ ವಿಷಯಕ್ಕೆ ತುಂಬಾ ಜಾಣ ಅಂತ ಬರೆಯಿತು. ಅದಕ್ಕೆ ಬರ್ಗಮನ್ ಉತ್ತರ ಚೆನ್ನಾಗಿದೆ. ಎಲ್ಲಾ ಹೆಂಗಸರು ನನ್ನನ್ನು ಕಾಡಿಸುತ್ತಾರೆ- ವಯಸ್ಸಾದವರು, ಕಿರಿಯರು, ಉದ್ದ ಇರುವವರು, ಗಿಡ್ಡರು, ದಪ್ಪ ಇರುವವರು, ತೆಲ್ಲಗೆ ಇರುವವರು, ದಡೊತಿ ಹೆಂಗಸರು, ಒಣಕಲು ಹೆಂಗಸರು, ಸುಂದರ ಹೆಂಗಸರು, ಮೋಹಕ ಮಹಿಳೆಯರು, ಬದುಕಿರುವವರು, ಸತ್ತವರು. ನನಗೆ ಹಸುಗಳೂ ಇಷ್ಟ, ಹೆಣ್ಣು ಕೋತಿಗಳು, ಹೆಣ್ಣು ಹಂದಿ, ಹೆಣ್ಣು ನಾಯಿ, ಹೆಣ್ಣು ಕುದುರೆ, ಕೋಳಿ, ಹೆಣ್ಣು ಹಿಪ್ಪೊ, ಹೆಣ್ಣು ಇಲಿ. ಆದರೆ ನನಗೆ ಇಷ್ಟವಾಗೋ ಹೆಣ್ಣು ಜಾತಿಯೆಂದರೆ ಕ್ರೂರ ಪ್ರಾಣಿಗಳ ಹಾಗೂ ಅಪಾಯಕಾರಿ ಸರಿಸೃಪಗಳದ್ದು. ನಾನು ದ್ವೇಷಿಸುವ ಹೆಂಗಸರೂ ಇದ್ದಾರೆ. ಒಂದಿಬ್ಬರು ಸಾಯಿಸಬೇಕೆನಿಸುತ್ತದೆ ಅಥವಾ ಅವರೆ ಯಾರಾದರೂ ನನ್ನನ್ನು ಸಾಯಿಸಬಹುದು. ಹೆಣ್ಣು ಜಗತ್ತೇ ನನ್ನ ವಿಶ್ವ. ಆ ಜಗತ್ತಿನಲ್ಲೇ ನಾನು ಬೆಳೆದಿರುವುದು. ಯಾವುದೇ ಗಂಡಸು ಆ ಜಗತ್ತಿನಿಂದ ದೂರ ಇದ್ದೂ ತನ್ನನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎಂದು ಭಾವಿಸಲಾರ
ಅವನ ನಂತರದ ಸಿನಿಮಾಗಳಲ್ಲಿ ಅಂತಹ ಅಲಂಕಾರಗಳನ್ನು ನಾವು ನೋಡುವುದಿಲ್ಲ. ಯಾರೂ ಅವನ ಸಿನಿಮಾವನ್ನು ನೋಡಬಹುದು. ಮೆಚ್ಚಬಹುದು. ಅವನು ಆಶ್ಚರ್ಯವಾಗುವಷ್ಟು ಸರಳವಾಗಿ ಮಾತನಾಡುತ್ತಾನೆ. ಹಾಗಾಗಿ ಅವನ ಸಿನಿಮಾ ತುಂಬಾ ಜನಕ್ಕೆ ತಲುಪುತ್ತದೆ. ಅವನಿಗೂ ತನ್ನ ಸಿನಿಮಾ ಜನರಿಗೆ ತಲುಪಬೇಕು. ಅವರು ಮೆಚ್ಚಬೇಕು ಅಂತಿದೆ. ಅವನು ಅದನ್ನು ಹೇಳುವ ರೀತಿ ಬೇರೆ ಅಷ್ಟೆ. ನಾವು ಒಂದು ರೀತಿಯಲ್ಲಿ ವೇಶ್ಯೆಯರು ಇದ್ದ ಹಾಗೆ. ನಾವು ಮಾಡೋದನ್ನು ತುಂಬಾ ಜನ ಇಷ್ಟ ಪಡೋದು ಅನಿವಾರ್ಯ ಆಗಿಬಿಡುತ್ತದೆ. ನಮ್ಮ ಕಲೆಯನ್ನು ಜನ ಸ್ವೀಕರಿಸಬೇಕೆನಿಸುತ್ತದೆ. ಅವರು ಮೆಚ್ಚಿದರೆ ಸಂತೋಷವಾಗುತ್ತದೆ. ತಿರಸ್ಕರಿಸಿದರೆ ನೋವಾಗುತ್ತದೆ.
ಸಿನಿಮಾ ಜಗತ್ತು ಕಂಡ ಅದ್ಭುತ ಜಾದುಗಾರ ಬರ್ಗಮನ್ ಹಲವು ಕಾಲ ಉಳಿಯಬಲ್ಲ ಕಲಾಕೃತಿಗಳನ್ನು ಉಳಿಸಿಹೋಗಿದ್ದಾನೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.