ಕಳೆದ ಕೆಲವು ವರ್ಷಗಳಿಂದ ನಾನು ಕನರ್ಾಟಕ ಸಂಗೀತ ಕಛೇರಿಗಳನ್ನು ಸಾಮಾನ್ಯವಾಗಿ ನಮ್ಮ ನೆನಪಿನಲ್ಲಿ ಉಳಿದಿರುವ ಮಾದರಿಗಿಂತ ಭಿನ್ನವಾದ ರೀತಿಯಲ್ಲಿ ನೋಡಲು ಪ್ರಯತ್ನಿಸಿದ್ದೇನೆ.  ಕಛೇರಿಯನ್ನು ಕುರಿತ ನನ್ನ ವಿಶ್ಲೇಷಣೆ ತೀರ ಹೊಸತು ಎಂದೇನೂ ನಾನು ಭಾವಿಸಿಲ್ಲ.  ಇವೆಲ್ಲವೂ ಸ್ವತಃ ನನಗೆ ಮತ್ತು ಸಮಾಜಕ್ಕೆ ನಾನು ಹಾಕಿಕೊಳ್ಳುತ್ತಿರುವ ಪ್ರಶ್ನೆಗಳು. ಈ  ನನ್ನ ಚಚರ್ೆಯ ಉದ್ದೇಶ ಈ ಬದಲಾವಣೆಗಳನ್ನು ಸಮಥರ್ಿಸಿಕೊಳ್ಳುವುದಾಗಲಿ ಅಥವಾ ವಿರೋಧಿಸುವುದಾಗಲಿ ಅಲ್ಲ. ಯಾವುದೇ ನಿಲುವನ್ನು ಬೆಂಬಲಿಸುವ ಉದ್ದೇಶದಿಂದ ಇದನ್ನು ಬರೆಯುತ್ತಿಲ್ಲ. ಇಲ್ಲಿನ ಅಭಿಪ್ರಾಯಗಳು ಎಲ್ಲರ ಪ್ರತಿಕ್ರಿಯೆಗೂ ಮುಕ್ತವಾಗಿ ತೆರೆದುಕೊಂಡಿವೆ. ಈ ಪ್ರತಿಕ್ರಿಯೆಗಳು ಅವರವರ ಮನೋಸ್ಥಿತಿಯನ್ನು, ಸಂಗೀತ ಅಥವಾ ಬದುಕನ್ನು ಕುರಿತ ಅವರ ಗ್ರಹಿಕೆಗಳನ್ನು ಅವಲಂಬಿಸಿವೆ.
ನನ್ನನ್ನು ತುಂಬಾ ಕಾಡುತ್ತಿರುವ ಪ್ರಶ್ನೆ, ಕಲಾಸಂಗೀತ ಎಂದರೇನು? ಸಂಗೀತ ಹಾಗೂ ಸಂಗೀತದ ಪ್ರದರ್ಶನ ಎರಡೂ ಒಂದೆಯೇ? ಕಲಾಸಂಗೀತದ ಅನುಭವ (ನಾನು ಕನರ್ಾಟಕ ಸಂಗೀತವನ್ನು ಕಲಾ ಸಂಗೀತ ಎಂದೇ ಭಾವಿಸುತ್ತೇನೆ) ಕೇವಲ ಮನರಂಜನೆಯೇ ಅಥವಾ ಅದಕ್ಕಿಂತ ಹೆಚ್ಚಿನದು ಏನಾದರೂ ಇದೆಯೇ? ನಾನಿಲ್ಲಿ ಇನ್ನೂ ಹೆಚ್ಚಿನದು ಅನ್ನುವಾಗ ಧಾಮರ್ಿಕ ಹಾಗೂ ಆಧ್ಯಾತ್ಮಿಕ ಅನುಭವಗಳನ್ನು ಉಲ್ಲೇಖಿಸುತ್ತಿಲ್ಲ. ಏಕೆಂದರೆ ಒಂದರ್ಥದಲ್ಲಿ ಅವುಗಳು ಕೂಡ ಮನರಂಜನೆ ಎನ್ನುವ ಪ್ಯಾಕೇಜಿನಲ್ಲೇ ಬಂದುಬಿಡುತ್ತದೆ ಅನ್ನಿಸುತ್ತದೆ.  ಇಲ್ಲಿ ನಾನು ಒಂದು ಸಿದ್ಧಚೌಕಟ್ಟಿನ ಮಿತಿಯನ್ನು ಮೀರಿಕೊಂಡ ಕಲಾಸಂಗೀತದ ಅಭಿವ್ಯಕ್ತಿಯನ್ನು ಒಪ್ಪಿಕೊಳ್ಳುವ ಮತ್ತು ಹಾಗೇ ಅದನ್ನು ಪ್ರದಶರ್ಿಸುವುದಕ್ಕೆ ಇರುವ ಸ್ವಾತಂತ್ರವನ್ನು ಕುರಿತಂತೆ ಮಾತನಾಡುತ್ತಿದ್ದೇನೆ.
ನನ್ನ ದೃಷ್ಟಿಯಲ್ಲಿ ಕಲಾಸಂಗೀತ ಎನ್ನುವುದು ಎಲ್ಲರು ಹಂಚಿಕೊಳ್ಳಬಹುದಾದ, ತೀವ್ರವಾದ ಒಂದು ರಸಾನುಭವ. ಅದು ಒಬ್ಬ ಸಂಗೀತಗಾರ ಕೇಳುಗರಿಗೆ ನೀಡುವ ಅಧ್ಯಾತ್ಮಿಕ ಹಾಗೂ ಧಾಮರ್ಿಕ ಸೇವೆಯಲ್ಲ ಅಥವಾ ಅವರಿಗೆ ಒದಗಿಸುವ ಮನರಂಜನೆಯೂ ಅಲ್ಲ.  ಕಳೆದ ನೂರು ವರ್ಷಗಳಲ್ಲಿ ನಾವು ಸಂಗೀತ ಹಾಗೂ ಅದರ ಪ್ರದರ್ಶನ ಎರಡೂ ಒಂದೇ ಅನ್ನುವ ಹಂತಕ್ಕೆ ತಂದುಬಿಟ್ಟಿದ್ದೇವೆ ಅನ್ನಿಸುತ್ತದೆ.  ಇದು ಹೇಗಾಗಿದೆಯೆಂದರೆ, ಇಂದು ನಾವು ಸಂಗೀತವನ್ನು ಕಛೇರಿಯೆಂಬ ಪ್ರಿಸಂ ಮೂಲಕವಷ್ಟೇ ನೋಡುತ್ತಿದ್ದೇವೆ. ಕಳೆದ ಶತಮಾನದಲ್ಲಿ ಹಲವಾರು ಸಂಗೀತಗಾರರ ಮೇಲೆ ಇದರ ಪರಿಣಾಮ ಆಗಿದೆ.  ಪ್ರದರ್ಶನ ಎನ್ನುವ ಒಂದು ಬಲೆಯಲ್ಲಿ (ಅಂದರೆ ಶ್ರೋತೃಗಳನ್ನು ತೃಪ್ತಿಪಡಿಸುವ ಹಾಗೂ ಮನರಂಜನೆಗೊಳಿಸುವ) ಕನರ್ಾಟಕ ಸಂಗೀತ ಸಿಲುಕಿಕೊಂಡುಬಿಟ್ಟಿದೆ.  ಇದೇ ಇಂದು ಕನರ್ಾಟಕ ಸಂಗೀತದ ಚಾಲಕಶಕ್ತಿಯಾಗಿಬಿಟ್ಟಿದೆ. ನೀವು ಒಮ್ಮೆ ಶ್ರೋತೃಗಳ ಮುಂದೆ ಹಾಡಲು ಪ್ರಾರಂಭಿಸಿದ ಕೂಡಲೆ ನೀವೊಬ್ಬ ಮನೋರಂಜಕನಾಗಿಬಿಡುತ್ತೀರಿ.  ಶ್ರೋತೃಗಳಿಗೆ ಏನು ಬೇಕೋ ಅದನ್ನು ನೀಡಬೇಕು ಮತ್ತು ರೂಢಿಯಲ್ಲಿರುವ ನಿಯಮಗಳಿಗನುಗುಣವಾಗಿ ಹಾಡಬೇಕು.
ನಾನಿದನ್ನು ಒಪ್ಪುವುದಿಲ್ಲ. ಪ್ರದರ್ಶನದ ಸ್ಥಳ ಎನ್ನುವುದು ಕಲಾ ಸಂಗೀತದ ದೃಷ್ಟಿಯಿಂದ ಅಪ್ರಸ್ತುತ.  ನನ್ನ ಮನೆಯಲ್ಲಿ ನಾನು ಹಾಡುತ್ತಿದ್ದೇನೆಯೋ ಅಥವಾ ಶ್ರೋತೃಗಳ ಮುಂದೆ ಹಾಡುತ್ತಿದ್ದೇನೆಯೋ ಎನ್ನುವುದು ಅಪ್ರಸ್ತುತ.  ಸಂಗೀತವೆನ್ನುವುದು ಎರಡೂ ಕಡೆಯಲ್ಲಿಯೂ ಒಂದೇ ಎನ್ನುವುದು ನನ್ನ ಅಭಿಪ್ರಾಯ.  ಈ ಕಛೇರಿಯ ಚೌಕಟ್ಟಿನ ಸಮಸ್ಯೆ ಅಂದರೆ, ನಾವು ಆ ಚೌಕಟ್ಟನ್ನು ತುಂಬಾ ಪವಿತ್ರವೆಂದು ಭಾವಿಸುತ್ತೇವೆ.  ಎಷ್ಟು ಪವಿತ್ರವೆಂದು ಭಾವಿಸುತ್ತೇವೆಂದರೆ, ನಮ್ಮ ಸಂಗೀತದ ಅನುಭವವನ್ನು ಸಂಗೀತಕ್ಕಿಂತಲೂ ಹೆಚ್ಚಾಗಿ ಕಛೇರಿಯ ಚೌಕಟ್ಟು ನಿರ್ಧರಿಸುತ್ತಿದೆ. ಇದರರ್ಥ ನಾವು ವಸ್ತುವನ್ನು ವಿಮಶರ್ಾತ್ಮಕವಾಗಿ ನೋಡುತ್ತಿಲ್ಲ ಎಂದಲ್ಲ.  ಸಂಗೀತದ ನಮ್ಮ ಇಡೀ ಅನುಭವವನ್ನು ಹೆಚ್ಚು ಕಡಿಮೆ ಕಛೇರಿಯ ಒಂದು ಮಾದರಿ ನಿರ್ಧರಿಸುತ್ತಿದೆ.  ಈ ಮಾದರಿ ನಮಗೊಂದು ಅನುಕೂಲವನ್ನು ಒದಗಿಸಿಕೊಟ್ಟಿದೆ.  ಅದು ನಮ್ಮ ಪ್ರಸ್ತುತಿಗೆ ಒಂದು ಕ್ರಮವನ್ನು ರೂಪಿಸಿಕೊಟ್ಟಿದೆ.
ಈಗ ಗ್ರಹೀತವಾಗಿರುವ ಕಛೇರಿಯ ಈ ಸ್ವರೂಪ ಅಚ್ಚುಕಟ್ಟಾಗಿಲ್ಲ ಎಂಬುದು ನನ್ನ ವಾದವಲ್ಲ.  ಅದರೆ ಸಂಗೀತದ ಅಭಿವ್ಯಕ್ತಿಗೆ ಇರುವುದು ಇದೊಂದೇ ಮಾರ್ಗವೇ?  ಇದೊಂದೇ ಸಂಗೀತದ ಅತ್ಯುತ್ತಮವಾದ ಅಭಿವ್ಯಕ್ತಿಯೇ ಎಂಬುದಷ್ಟೇ ನನ್ನ ಪ್ರಶ್ನೆ. ವಾಸ್ತವವೆಂದರೆ ಕಛೇರಿಯ ಈ ಸ್ವರೂಪ ಕೇವಲ ಒಂದು ಶತಮಾನದಷ್ಟು ಹಳೆಯದು.  ಅದೇ ಕನರ್ಾಟಕ ಸಂಗೀತವಲ್ಲ.  ಕನರ್ಾಟಕ ಸಂಗೀತದ ರಾಗ ಹಾಗು ತಾಳಗಳ ರಾಶಿಯಲ್ಲಿ ಕೃತಿಗಳಿಗೆ ಮತ್ತು ಮನೋಧರ್ಮಕ್ಕೆ ಸೊಗಸಾದ ಅವಕಾಶವಿದೆ. ನಾವು ನಿಜವಾಗಿಯೂ ಅನುಭವಿಸಬೇಕಾಗಿರುವುದು ಈ ಸಂಗೀತವನ್ನು, ಅದರ ಚರಿತ್ರೆಯನ್ನು ಮತ್ತು ಅದರ ಅಸ್ಮಿತೆಯನ್ನು.
ಇದರರ್ಥ ಏನನ್ನು ಮಾಡಿದರೂ ನಡೆಯುತ್ತದೆ ಎಂದಲ್ಲ.  ಪ್ರಸ್ತುತಿಯ ವಿಸ್ತಾರಕ್ಕಿರುವ ಸ್ವಾತಂತ್ರ್ಯದ ಮಿತಿಯೇನು ಮತ್ತು ವಸ್ತುವಿನ ಪ್ರಾಮಾಣಿಕತೆ ಎಲ್ಲಿಂದ ಪ್ರಾರಂಭವಾಗುತ್ತದೆ ಎಂಬುದನ್ನು ಅಥರ್ೈಸಿಕೊಳ್ಳಲು (ಈ ಮಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ) ಪ್ರತಿಯೊಬ್ಬ ಸಂಗೀತಗಾರನೂ ಚರಿತ್ರೆಯನ್ನು ಗೌರವಿಸಿ, ಅರ್ಥಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಅಲಾಪನೆಯ ಪ್ರಸ್ತುತಿಯನ್ನೇ ತೆಗೆದುಕೊಳ್ಳೋಣ.  ಆಲಾಪನೆಯ ಚರಿತ್ರೆಯನ್ನು ಒಬ್ಬ ಗಂಭೀರ ಸಂಗೀತಗಾರನಾಗಿ ಅವಲೋಕಿಸಿದರೆ ಅದು ಇಂದು ನಮಗೆ ಗೋಚರಿಸುವುದಕ್ಕಿಂತಲೂ ಹೆಚ್ಚು ಬಿಗಿಯಾಗಿ, ನಿಧರ್ಾರಿತವಾಗಿ ಮತ್ತು ವ್ಯವಸ್ಥಿತವಾಗಿ ಇತ್ತು ಎನ್ನುವುದು ಅರಿವಾಗುತ್ತದೆ. ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ದೊರಕುವ ಸ್ವರಲಿಪಿಗಳನ್ನು ನೋಡಿದಾಗಲೂ ಅದು ತುಂಬಾ ನಿಧರ್ಾರಿತವಾಗಿ ಮತ್ತು ವ್ಯವಸ್ಥಿತವಾಗಿತ್ತು ಎಂದು ತೋರುತ್ತದೆ. ಕೃತಿಗಳ್ಯಾವುದೂ ಇಲ್ಲದೆ ಕೇವಲ ಅಲಾಪನೆಯನ್ನು ಮಾತ್ರವೇ ಸ್ವರಲಿಪಿಯಲ್ಲಿ ಬರೆದಿರುವುದನ್ನು ನೋಡಬಹುದು. ಆಲಾಪನೆಯನ್ನೇ ಒಂದು ಸ್ವತಂತ್ರ, ಸಂಪೂರ್ಣ ಖಂಡವಾಗಿ ಪರಿಗಣಿಸಿದ್ದಾರೆ ಮತ್ತು ಇವುಗಳಲ್ಲಿ ಒಂದು ಆದಿ, ಮಧ್ಯ ಹಾಗೂ ಅಂತ್ಯ ಎಂಬ ಸ್ಪಷ್ಟವಾದ ಒಳವಿಂಗಡನೆ ಇರುವುದನ್ನು ಕಾಣಬಹುದು.
ಒಂದೆರಡು ಶತಮಾನಗಳಿಂದೀಚೆಗೆ ನಾವು ಅದರ ಸ್ವರೂಪವನ್ನು ಅನಿಶ್ಚಿತವನ್ನಾಗಿಯೂ (ಫ್ಲೂಯಿಡ್), ಬಂಧದ ದೃಷ್ಟಿಯಿಂದ ಕಡಿಮೆ ರಾಚನಿಕವನ್ನಾಗಿ ಮಾಡಿ ಅದರಲ್ಲಿ ಮನೋಧರ್ಮಕ್ಕೆ ಹೆಚ್ಚೆಚ್ಚು ಅವಕಾಶ ಮಾಡಿಕೊಂಡಿದ್ದೇವೆ. ಹಾಗೆಯೇ ಆಲಾಪನೆಯನ್ನು ಒಂದು ಕೃತಿಗೆ ಮುಂಚಿತವಾಗಿ ಹಾಡಬೇಕೆಂದು ಅದರ ಸ್ಥಾನವನ್ನು ಗೊತ್ತುಪಡಿಸಿಬಿಟ್ಟಿದ್ದೇವೆ. ಆದರೆ ಇದರರ್ಥ ಬರಿಯ ಅಲಾಪನೆಯನ್ನು ಮಾತ್ರ ಸ್ವತಂತ್ರವಾಗಿ ಪ್ರಸ್ತುತಪಡಿಸಬಾರದು ಎಂದಲ್ಲ.  ವಾಸ್ತವವಾಗಿ ಕೆಲವು ಖ್ಯಾಲ್ ಸಂಪ್ರದಾಯದಲ್ಲಿ ಅಲಾಪವನ್ನು ಸ್ವತಂತ್ರವಾಗಿ ಪ್ರಸ್ತುತಪಡಿಸುವ ರೂಢಿಯಿದೆ.
ಇನ್ನು ನೆರವಲ್ ಹಾಗೂ ಕಲ್ಪನಾಸ್ವರಗಳ ವಿಷಯಕ್ಕೆ ಬಂದರೆ, ಈ ಎರಡನ್ನೂ ಯಾವಾಗಲೂ ಒಂದು ಕೃತಿಗೆ ಸಂಬಂಧಿಸಿದಂತಹ ಒಂದು ಹುಡುಕಾಟವನ್ನಾಗಿಯೇ ಬೆಳೆಸಲಾಗಿದೆ. ಹಾಗಾಗಿ ಇವೆರಡನ್ನೂ ಸ್ವತಂತ್ರವಾಗಿ ಪ್ರಸ್ತುತ ಪಡಿಸುವ ಪ್ರಶ್ನೆ ಬರುವುದಿಲ್ಲ. ಪದಂ, ವರ್ಣ ಅಥವಾ ಸ್ವರಜತಿ (ಹಿಂದಿನ ಸ್ವರೂಪದ) ಇವೆಲ್ಲವನ್ನೂ ತೀರಾ ಗಂಭೀರವಾದ ರಚನೆಗಳೆಂದೇ ಪರಿಗಣಿಸಿದ್ದರು. ಇವುಗಳಿಗೆ ಪ್ರಮುಖ ಸ್ಥಾನವಿತ್ತು. ಈ ಪ್ರಕಾರಗಳು ಒಂದು ಕಾಲದಲ್ಲಿ ಕೃತಿರಚನಾ ಕ್ಷೇತ್ರವನ್ನು ಆವರಿಸಿಕೊಂಡು, ಪ್ರಧಾನ ಸ್ಥಾನ ಪಡೆದುಕೊಂಡಿದ್ದವು.
ಇಂದು ಕಛೇರಿ ಸ್ವರೂಪದಲ್ಲಿನ ಅಲ್ಪಸ್ವಲ್ಪ ಬದಲಾವಣೆಯೂ ನಮ್ಮನ್ನು ತುಂಬಾ ವಿಚಲಿತಗೊಳಿಸಿಬಿಡುತ್ತದೆ.  ಆದರೆ ರಾಗದ ಕಗ್ಗೊಲೆ ನಡೆಯುವಾಗ, ಕೃತಿಗಳಿಗೆ ಅಪಚಾರವಾಗುವಂತೆ ಪ್ರಸ್ತುತ ಪಡಿಸುತ್ತಿರುವಾಗ, ಕನರ್ಾಟಕ ಸಂಗೀತಾನುಭವದ ಮೂಲ ಕಲಾಸೌಂದರ್ಯವೇ ನಾಶವಾಗಿಬಿಡುತ್ತಿದ್ದಾಗ  ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ತುಂಬಾ ಆಶ್ಚರ್ಯದ ವಿಷಯ.
ಕನರ್ಾಟಕ ಸಂಗೀತದ ಅಸ್ಮಿತೆ ಇರುವುದು ರಾಗಗಳಲ್ಲಿ, ತಾಳಗಳ ರಚನೆಯಲ್ಲಿ ಮತ್ತು ಅದರ ಕ್ರಿಯಾತ್ಮಕ ಸ್ವರೂಪದಲ್ಲಿ.  ಒಂದು ರಾಗವನ್ನು ಇದೇ ಗಮಕದೊಂದಿಗೆ ಏಕೆ ಹಾಡಬೇಕು ಅಥವಾ ಕೆಲವೇ ಸ್ವರಗಳನ್ನು ಒಂದು ರಾಗದ ಆಧಾರ ಅಥವಾ ನ್ಯಾಸಸ್ವರಗಳನ್ನಾಗಿ ಏಕೆ ಭಾವಿಸಬೇಕು? ಜನ ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ.  ನಾವು ತಾಳ್ಮೆಯಿಂದ ರಾಗವನ್ನು, ಅವುಗಳ ಬದಲಾವಣೆಯನ್ನು, ಅದರ ಈಗಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಇವುಗಳಿಗೆಲ್ಲಾ ಉತ್ತರ ಸಿಗುತ್ತದೆ. ಪ್ರತಿಯೊಂದನ್ನೂ ಹೊಕ್ಕು ಹುಡುಕಾಡಿದರೆ ಅವುಗಳು ಕೆಲವು ನೂರು ವರ್ಷಗಳ ಅಥವಾ ಅದಕ್ಕಿಂತ ಸ್ವಲ್ಪ ಹಿಂದಿನ ಕಥೆ ಹೇಳುತ್ತವೆ. ಸ್ವಲ್ಪ ಗಂಭೀರವಾಗಿ ನೋಡಬೇಕಾಗುತ್ತದೆ ಅಷ್ಟೆ. ರಾಗಗಳು ಎಂದರೆ ಅವು ಕೇವಲ ಅದರಲ್ಲಿರುವ ಸ್ವರಗಳಲ್ಲ.  ಅವುಗಳ ಅಸ್ಮಿತೆ ರೂಪುಗೊಳ್ಳಲು ಹಲವಾರು ಶತಮಾನಗಳೇ ಹಿಡಿದಿವೆ.  ಆದರೆ ಇಂದಿಗೂ ಕೂಡ ಅವು ತಮಗೆ ಒಂದು ರೂಪವನ್ನು ನೀಡಿರುವ ಈ ವಿಭಿನ್ನ ಲಕ್ಷಣಗಳನ್ನು ಉಳಿಸಿಕೊಂಡಿವೆ.
ಇಂದು ಪ್ರಸ್ತುತಪಡಿಸುತ್ತಿರುವ ಕೃತಿಗಳ ಗುಣಮಟ್ಟವಾದರೂ ಹೇಗಿದೆ? ಹಲವು ಸಂದರ್ಭಗಳಲ್ಲಿ ಅವು ಶಿಶುಗೀತೆಗಳ ಹಾಗಿವೆ. ನಿಜವಾಗಿಯೂ ಹೇಳಬೇಕೆಂದರೆ ಅವು ಸುಮ್ಮನೆ ಕಚಗುಳಿ ಇಟ್ಟಂತಿರುತ್ತವೆ. ಆದರೆ ಅಷ್ಟೇ ಸಾಕು ಅನ್ನಿಸಿಬಿಟ್ಟಿದೆ. ಇವುಗಳಲ್ಲಿ ಎಷ್ಟು ರಚನೆಗಳಿಗೆ ಸಾಹಿತ್ಯ ಹಾಗೂ ಸಂಗೀತದ ದೃಷ್ಟಿಯಿಂದ ವಿಭಿನ್ನ ಸ್ತರಗಳಲ್ಲಿ ಅಭಿವ್ಯಕ್ತಿ ಸಾಧ್ಯವಾಗಿದೆ?  ನೆರವಲ್ ಹಾಡಿಕೆ ಹಾಗೂ ಅದರಲ್ಲಿ ವಿವಿಧ ರೀತಿಯ ಹುಡುಕಾಟ ಇಂದು ಸತ್ತೇ ಹೋಗಿದೆ. ನೆರವಲ್ ಹಾಡುವಾಗ ಯಾರಾದರೂ ಅಕ್ಷರಗಳ ಎಡುಪ್ಪಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರಾ? ಕಲ್ಪನಾಸ್ವರಗಳನ್ನು ಕೇವಲ ಎರಡು ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ: ಮೊದಲನೆಯದಾಗಿ ಲೆಕ್ಕಾಚಾರಕ್ಕಾಗಿ, ಎರಡನೆಯದಾಗಿ ತೀವ್ರ ಪರಿಣಾಮಕಾರಿಯಾದ ಒಂದು ಪರಾಕಾಷ್ಠೆಯನ್ನು ಶ್ರೋತೃಗಳಲ್ಲಿ ಸೃಷ್ಟಿಸುವುದಕ್ಕೆ.  ಇದರ ನಡುವಿನ ಎಲ್ಲವೂ ಅಪ್ರಸ್ತುತವಾಗಿಬಿಟ್ಟಿದೆ.  ಹೆಚ್ಚಿನ ಸಂದರ್ಭಗಳಲ್ಲಿ ತನಿಯಾವರ್ತನಗಳು ಕೇವಲ ಕೌಶಲ ಹಾಗೂ ಪ್ರಾವೀಣ್ಯದ ಪ್ರದರ್ಶನಕ್ಕೆ ಸೀಮಿತವಾಗಿಬಿಟ್ಟಿವೆ. ಅವುಗಳಿಗೆ ಕಲಾತ್ಮಕ ಅಥವಾ ಬೌದ್ಧಿಕ ಮಹತ್ವವೇ ಇರುವುದಿಲ್ಲ.  ನಾವು ಇಂಥವುಗಳಿಗೆ ಜೋರಾಗಿ ಚಪ್ಪಾಳೆ ತಟ್ಟುತ್ತೇವೆ.
ಈ ಎಲ್ಲಾ ಆರೋಪಗಳು ಒಬ್ಬ ಸಂಗೀತಗಾರನಾಗಿ ನನಗೂ ಅನ್ವಯಿಸುತ್ತವೆ. ಇವುಗಳಿಗೆ ಸಂಬಂಧಿಸಿದಂತೆ ಗಂಭೀರವಾದ  ಅಕ್ಷೇಪಣೆಯನ್ನು ನಾನೇನಾದರೂ ವ್ಯಕ್ತಪಡಿಸಿದ್ದೇನೆಯೇ? ಹಾಗಿದ್ದ ಮೇಲೆ ನನ್ನ ಸಂವೇದನಾಶೀಲತೆ ಎಲ್ಲಿ ಹೋಗಿದೆೆ? ನಾವು ನಿಜವಾದ ಸಂಪ್ರದಾಯವನ್ನು ಹಾಳುಮಾಡುತ್ತಿಲ್ಲವೇ?  ನಾವು ಸಂಗೀತಗಾರರು, ಆಧುನಿಕ ಕಾಲದ ರಸಿಕರು, ಸಂಗೀತಕ್ಷೇತ್ರದ ದಿಗ್ಗಜರ ಸಂಗೀತವನ್ನು ಕೇಳಿದವರು, ನಮ್ಮ ಗತಕಾಲದ ಬಗ್ಗೆ ಹೆಮ್ಮೆಪಡುವವರು, ಕಲಾಸಂಗೀತ ಮತ್ತು ಪ್ರದರ್ಶನ ಸಂಗೀತದ ನಡುವಿನ ವ್ಯತ್ಯಾಸವನ್ನು ಅನುಭವಿಸಲು ಬೇಕಾದಂತಹ ಮೂಲಭೂತ ಸಂವೇದನೆಯನ್ನೇ ಕಳೆದುಕೊಂಡು ಬಿಟ್ಟಿದ್ದೇವೆ.  ಆಲಾಪನೆ, ನೆರವಲ್, ಕಲ್ಪನಾಸ್ವರ, ತಾನ, ವಿವಿಧ ಸಂಯೋಜನೆಗಳ ಸ್ವರೂಪಗಳು ಹಾಗೂ ತನಿಯಾವರ್ತನ ಇವುಗಳ ಬಗ್ಗೆ ನಿಜವಾದ ಚಿಂತನೆ ನಡೆಯಬೇಕಾಗಿದೆ.  ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಗಂಭೀರವಾದ ಚಚರ್ೆ ನಡೆಯಬೇಕಾಗಿದೆ.  ಮೇಲೆ ಹೇಳಿದ ಕನರ್ಾಟಕ ಸಂಗೀತದ ಎಲ್ಲಾ ಆಚರಣೆಗಳೂ ಕಛೇರಿ ಪದ್ದತಿ ಎನ್ನುವ ಪ್ರಭಾವಲಯದ ಆವರಣದಲ್ಲ್ಲಿ ನಡೆಯುತ್ತಿದೆ.
ಇವೆಲ್ಲಾ ಇಂದು ಸೃಷ್ಟಿಯಾಗಿರುವ ಸಮಸ್ಯೆಗಳಲ್ಲ ಎಂಬುದನ್ನು ಗುರುತಿಸುವುದು ತುಂಬಾ ಮುಖ್ಯ. ಕಳೆದ ದಶಕಗಳಲ್ಲಿನ ಸಾಮಾಜಿಕ ಪರಿಸರದಿಂದ ಇವೆಲ್ಲವೂ ತುಂಬಾ ಸ್ಪಷ್ಟವಾಗಿ ಎದ್ದು ಕಾಣುವಂತಾಗಿದೆ. ಇವು ಸುಮಾರು ಒಂದು ಶತಮಾನದ ಕಛೇರಿ ಸಂಗೀತದ ಫಲ. ನಾವು ನಮ್ಮ ಹಿಂದಿನ ಹಿರಿಯರನ್ನು ಗಂಭೀರವಾಗಿ ಪ್ರಶ್ನಿಸುತ್ತಿದ್ದೇವೆ ಎಂಬುದರ ಅರ್ಥ ಅವರನ್ನು ಕುರಿತು ನಮಗೆ ಗೌರವವಿಲ್ಲ ಎಂದರ್ಥವಲ್ಲ.  ನಿಜವಾಗಿಯೂ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಮತ್ತು ಮಹಾನ್ ಕಲಾವಿದರ ಪ್ರಭಾವ ಸಂಗೀತದ ಮೇಲಾಗಿದೆಯೆಂಬುದನ್ನು ಇದು ಸೂಚಿಸುತ್ತದೆ.  ಇವರೆಲ್ಲರೂ ಇಂದು, ಅಷ್ಟೇ ಅಲ್ಲ ನಾಳೆಯೂ ಕೂಡ ಸಂಗೀತಲೋಕದ ದಿಗ್ಗಜಗಳೇ ಆಗಿರುತ್ತಾರೆ.  ನಾನು ಅವರನ್ನು ಪ್ರಶ್ನಿಸುತ್ತೇನೆ.  ಆದರೆ ಅದಕ್ಕಿಂತ ಮುಂಚೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ.
ಕನರ್ಾಟಕ ಸಂಗೀತವನ್ನು ಕೇಳುವುದಕ್ಕೂ ಮತ್ತು ಇತರ ವಿವಿಧ ವಿನೋದಾವಳಿಗಳನ್ನು ನೋಡುವುದಕ್ಕೂ ನಡುವೆ ಇರುವ ವ್ಯತ್ಯಾಸವೇನು? ನಾಮಸಂಕೀರ್ತನೆಗೂ ಮತ್ತು ಒಂದು ಕನರ್ಾಟಕ ಸಂಗೀತ ಕಛೇರಿಗೂ ನಡುವೆ ಇರುವ ವ್ಯತ್ಯಾಸವೇನು? ಒಬ್ಬ ದೊಂಬರಾಟದ ಕಲಾವಿದನಿಗೂ ಹಾಗೂ ಸಂಗೀತಗಾರನಿಗೂ ಇರುವ ವ್ಯತ್ಯಾಸವೇನು? ನಾವು ಗಂಭೀರವಾಗಿ ಕನರ್ಾಟಕ ಕಲಾ ಸಂಗೀತದ ಅನುಭವವನ್ನು ಪ್ರಶ್ನಿಸಬೇಕಾಗಿದೆ.  ಇವೆಲ್ಲಾ ಕೇವಲ ಪ್ರಶ್ನೆಗಳು.  ಇವುಗಳಿಗೆ ಉತ್ತರ ಬೇಕೆಂದು ನಿಜವಾಗಿಯೂ ಅನ್ನಿಸಿದರೆ ಪ್ರತಿಯೊಬ್ಬರೂ ಹುಡುಕಾಟದಲ್ಲಿ ನಿರತರಾಗಬೇಕು.
ನಾನು ಕನರ್ಾಟಕ ಸಂಗೀತದ ಬಗ್ಗೆ ಎತ್ತುತ್ತಿರುವ ಎಲ್ಲ ಪ್ರಶ್ನೆಗಳು ಬದುಕಿಗೆ ಸಂಬಂಧಿಸಿದಂತೆಯೂ ಅಷ್ಟೇ ಪ್ರಸ್ತುತ. ನಮ್ಮ ಅಂತರಂಗದ ಭಾಗವಾದ ಸೂಕ್ಷ್ಮವಾದುದರ ಅನುಭವ ಮತ್ತು ಅರಿವುಳ್ಳ ಸ್ವಪ್ರಜ್ಞೆ (ಇವುಗಳನ್ನು ರಾಗ, ತಾಳ, ಕೃತಿಗಳು ಮೊದಲಾದವುಗಳಿಗೆ ಹೋಲಿಸಿಕೊಳ್ಳಬಹುದು) ಮತ್ತು ಸಾಮಾಜಿಕ ಮಿತಿಗಳ (ಅದನ್ನು ಕಛೇರಿ ಪದ್ದತಿ ಎಂದು ಭಾವಿಸಿಕೊಳ್ಳಬಹುದು) ನಡುವಿನ ಸಂಘರ್ಷ ಹಾಗೂ ಸಂಗೀತದಲ್ಲಿ ಕಂಡುಬರುವ ಸಂಘರ್ಷ ಎರಡೂ ಒಂದೇ.   ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನಮ್ಮ ಬದುಕಿನ ಗ್ರಹಿಕೆಯನ್ನೇ ಪರಿಶೋಧಿಸಿಕೊಳ್ಳಬೇಕಾಗುತ್ತದೆ. ಅಲ್ಲಿಯವರಗೆ, ಈ ಪ್ರಶ್ನೆಗಳು ಕೊನೆಯ ಪಕ್ಷ ನನ್ನಮಟ್ಟಿಗೆ ಹಾಗೇ ಉಳಿದುಕೊಳ್ಳುತ್ತವೆ ಮತ್ತು ಈ ಪಯಣ ಮುಂದುವರಿಯುತ್ತದೆ.
(ಕೃಪೆ: ದಿ ಹಿಂದೂ, ಫೆಬ್ರುವರಿ 09, 2012.

Contact Us

We're not around right now. But you can send us an email and we'll get back to you, ASAP

Not readable? Change text.